
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.೨೮: ಶಿವ ಮತ್ತು ನಮ್ಮಿಬ್ಬರ ಸಂಬಂಧ ನನ್ನ ಈ ವೇದಿಕೆಯ ಅಲಂಕಾರಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಬಂಧುತ್ವದ ಬಂಧನ ಸಾಧನೆಗೆ ಸಾಧನ ಆಗಿರುತ್ತದೆ ಅನ್ನೋದು ಉತ್ತಮ. ಬದುಕಿನುದ್ದದ ಅವಿರತ ಶ್ರಮ, ಒದ್ದಾಟವು ಶಿವರಾಮ ಅವರ ಆರಾಧ್ಯ ಕುಲವೃತ್ತಿಗೆ ಸಾಥ್ ನೀಡಿದ್ದು, ಇವೆಲ್ಲವುಗಳ ಫಲಿತಾಂಶ ಶಿವಾ’ಸ್ ಸಲೂನ್‌ಗಳ ಉಗಮ, ವಿಸ್ತಾರತ್ವವಾಗಿದೆ. ನಾವು ವಿಶ್ವವಿಡೀ ಸಾಧನೆ ಸಿದ್ಧಿಸಿದರೂ ತವರೂರಲ್ಲಿ ಕನಿಷ್ಠ ಮಟ್ಟದ ಉದ್ಯಮ ನಡೆಸಿದಾಗ ಮಾತ್ರ ನಮ್ಮೂರ ಸಾಧಕರೆಣಿಸಲು ಸಾಧ್ಯವಾಗುವುದು. ಕ್ಷೌರ್ಯವೃತ್ತಿ ಮೂಲಕ ಮುಂಬಯಿ, ಮಂಗಳೂರು ಮಹಾನಗರಗಳಲ್ಲಿ ಹೆಸರುವಾಸಿಯಾದ ಶಿವಾಸ್ ಭವಿಷ್ಯದಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ಪಸರಿಸಿ ಇಡೀ ರಾಷ್ಟ್ರಕ್ಕೆ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಅಂತರಾಷ್ಟ್ರೀಯ ಪ್ರಸಿದ್ಧ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಎಂದರು.
ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಮಂಗಳೂರು ಕದ್ರಿ ಇಲ್ಲಿನ ಶಾಂಘೈಗುಡ್ಡೆಯಲ್ಲಿನ ಎಸ್.ಕ್ಯೂಬ್ ಸಾಂಟ್ರೋ ಕಟ್ಟಡದಲ್ಲಿ ಬಾಲಿವುಡ್‌ನ ಪ್ರಸಿದ್ಧ ಹೇರ್ ಡಿಸೈನರ್ ಡಾ| ಶಿವರಾಮ ಕೆ.ಭಂಡಾರಿ ಕಾರ್ಕಳ ಆಡಳಿತ್ವದ ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್‌ನ ೨೬ನೇ ಹಾಗೂ ಮಂಗಳೂರು ನಗರದಲ್ಲಿನ ದ್ವಿತೀಯ ಶಾಖೆಯನ್ನು ಮಧುರ್ ಭಂಡಾರ್ಕರ್ ಮತ್ತು ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪುರಸ್ಕೃತ ಬಾಲಿವುಡ್ ಅಭಿನೇತ್ರಿ ಆಯೀಷಾ ಎಸ್.ಐಮನ್ ರಿಬ್ಬನ್ ಕತ್ತರಿಸಿ ಸೇವಾರ್ಪಣೆ ಗೊಳಿಸಿದ್ದು ಭಂಡಾರ್ಕರ್ ಶುಭಾರೈಸಿ ಮಾತನಾಡಿದರು.
ಅತಿಥಿ ಅಭ್ಯಾಗತರುಗಳಾಗಿ ಅಶೋಕ್ ಮುನ್ಸಿ (ಪರಶರ್ ಹೀಲಿಂಗ್), ರಾಜಕೀಯ ಧುರೀಣರಾದ ಅಡ್ವಕೇಟ್ ಪದ್ಮರಾಜ್ ಆರ್.ಪೂಜಾರಿ, ಪ್ರಾಚಾರ್ಯ ವಿಠಲ ಅಬುರ, ಎ.ಜೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಕೆ.ಪ್ರಸಂತ್ ಮಾರ್ಲಾ, ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಉದ್ಯಮಿ ಎಂ.ವಿ ಸತೀಶನ್(ಎಸ್.ಕ್ಯೂಬ್), ನಿತ್ಯಾನಂದ ಭಂಡಾರಿ ತಲಪಾಡಿ, ಕೆ. ಹಿರೇಮಠ್, ನಕುಲ್ ಪೂಜಾರಿ ಗುಲ್ಬರ್ಗ, ಯತಿಕ್ ರಾಜ್, ಎಸ್.ಸಾಧನಾ ಮತ್ತಿತ ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.
ಪರಿಶುದ್ಧ ಮನಸ್ಸುಗಳ ಬೆಸುಗೆ ಪರಸ್ಪರ ಉದ್ಯಮಶೀಲತೆ ಜೊತೆಗೆ ಸಾಧನಾಶೀಲರನ್ನಾಗಿಸುತ್ತದೆ. ಬಾಲ್ಯದಲ್ಲೇ ವೃತ್ತಿನಿಷ್ಠೆಯನ್ನು ರೂಢಿಸಿ ಕೊಂಡ ನನ್ನನ್ನು ಇಂದು ಕುಲವೃತ್ತಿಯೇ ಸಾಧಕರನ್ನಾಗಿಸಿದೆ ಎಂದು ಡಾ| ಶಿವರಾಮ ಭಂಡಾರಿ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಶಿವರಾಮ ಕೆ.ಭಂಡಾರಿ ಮತ್ತು ಅನುಶ್ರೀ ಶಿವರಾಮ್ ದಂಪತಿ, ಕು| ಆರಾಧ್ಯ ಎಸ್.ಭಂಡಾರಿ ಉಪಸ್ಥಿತರಿದ್ದು ಕುಲದೇವರು ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ದೀಪ ಬೆಳಗಿಸಿ, ಸ್ವರ್ಗೀಯ ಮಾತೃಶ್ರೀ ಗುಲಾಬಿ ಕೆ.ಭಂಡಾರಿ ಅವರನ್ನು ಸ್ಮರಿಸಿ, ಪೂಜಾಧಿಗಳ ಯಜಮಾನತ್ವ ವಹಿಸಿ ಶುಭಾರಂಭಕ್ಕೆ ಚಾಲನೆಯನ್ನಿತ್ತರು. ವಿದ್ವಾನ್ ಶ್ರೀ ನಾಗರಾಜ್ ಭಟ್ ಧರೆಗುಡ್ಡೆ ತನ್ನ ಪೌರೋಹಿತ್ಯದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು. ಕಳೆದ ಸೋಮವಾರ ರಾತ್ರಿ ವಾಸ್ತು ಹೋಮ, ಸುದರ್ಶನ ಹೋಮ ನಡೆಸಿ ಇಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ, ಸತ್ಯನಾರಾಯಣ ಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು.
ಕಾರ್ಯಕ್ರಮದಲ್ಲಿ ಅರ್‍ಕಿಟೆಕ್ಟ್ ದೀಪಕ ಬಾಳಿಗ, ವಿನಯಕುಮಾರ್ ಬಗಂಬಿಲ, ಶಿವಾ’ಸ್ ಪರಿವಾರದ ರಾಘವ ವಿ.ಭಂಡಾರಿ, ಶ್ವೇತಾ ಆರ್. ಭಂಡಾರಿ, ರವಿ ಭಂಡಾರಿ, ಮೊಹ್ಮದ್ ಇಸಾಕ್, ಸುದರ್ಶನ್ ಭಂಡಾರಿ, ಸಿಂಚನ ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಶುಭ ಕೋರಿದರು. ಶಿವರಾಮ ಕೆ.ಭಂಡಾರಿ ದಂಪತಿ ಅತಿಥಿವರ್ಯರಿಗೆ ಪುಷ್ಪಗುಚ್ಫ, ಸ್ಮರ್ಣಿಕೆಗಳನ್ನಿತ್ತು ಗೌರವಿಸಿದರು.
ಸಂಸ್ಥೆಯ ಸಿಇಒ ಡಾ| ವಿನೋದ್ ಚೋಫ್ರ್ರಾ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿ.ಜೆ ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ್ ಭಂಡಾರಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.