
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,ಮಾ.೨೩: ಪ್ರಸ್ತುತ ಕಾಲದಲ್ಲಿ ನೆನಪಿನಲ್ಲಿಟ್ಟು ಕೊಳ್ಳುವುದೇ ಬಹಳ ಮಾನ್ಯ ವಿಷಯ ಮತ್ತು ಸುಂದರ ಮನಸ್ಸಿನ ಮಾತುಗಳಾಗಿದೆ. ಯಕ್ಷಗಾನವು ಸಮಗ್ರ ಸಾಹಿತ್ಯವಿದ್ದ ಕಲೆಯಾಗಿದೆ. ಕರ್ನಾಟಕದ ಗಂಡು ಕಲೆ ಎಂದೆಣಿಸಿದ ಯಕ್ಷಗಾನವು ತುಳು ಕನ್ನಡಿಗರು ಮುಂಬಯಿಗೆ ಬಂದಾಗಿನಿಂದ ಮಾಯಾನಗರಿಯಲ್ಲಿ ನೆಲೆಯಾಗಿದೆ. ಇದು ಎಲ್ಲರ ಪ್ರೀತ್ಯಾಧಾರದ ಕಲೆಯಾಗಿದ್ದು ಇಂತಹ ಕಲೆ ಮತ್ತು ಸಾಹಿತ್ಯವನ್ನು ಪೋಷಿಸಿ ಬೆಳೆಸುವಲ್ಲಿ ಇಂತಹ ಪ್ರಶಸ್ತಿಗಳು ಪೂರಕವಾಗಿದೆ. ಇಂತಹ ಪ್ರಾಧನ್ಯತೆಯ ಪ್ರಶಸ್ತಿಗಳು ಪುಣ್ಯವಂತರಿಗೆಯೇ ಪ್ರಾಪ್ತಿಸುವುದು ಎಂದು ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ನಿವೃತ್ತ ಪ್ರಾಧ್ಯಾಪಕ ಪ್ರೊ| ಡಾ| ವಿಶ್ವನಾಥ ಕಾರ್ನಾಡ್ ತಿಳಿಸಿದರು.
ಇಂದಿಲ್ಲಿ ರವಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಮಾಜಿ ಗೌರವ ಪ್ರಧಾನ ಸಂಪಾದಕ ದಿ| ಎಂ.ಬಿ ಕುಕ್ಯಾನ್ ಪ್ರಾಯೋಜಿತ ೨೦೨೪ನೇ ಸಾಲಿನ ರಜಕ ವಾರ್ಷಿಕ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ಜಯ ಸಿ.ಸುವರ್ಣ ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ಕೊಡಮಾಡಿದ ಈ ಬಾರಿಯ ೨೧ನೇ ವಾರ್ಷಿಕ ‘ಯಕ್ಷಗಾನ ಕಲಾ ಪ್ರಶಸ್ತಿ’ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಪ್ರೊ| ಕಾರ್ನಾಡ್ ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ.ಅವಿನ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭಕ್ಕೆ ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ದೀಪ ಪ್ರಜ್ವಲಿಸಿ ಆಶೀರ್ವಚನಗೈದರು. ಅತಿಥಿಗಳು ನಾಡಿನ ಪ್ರಸಿದ್ಧ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣ ಅವರಿಗೆ ‘ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಹಾಗೂ ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಸಾಲ್ಯಾನ್ ಅವರಿಗೆ ‘ಯಕ್ಷಗಾನ ಕಲಾ ಪ್ರಶಸ್ತಿ’ ಪ್ರದಾನಿಸಿದರು ಹಾಗೂ ಇತ್ತೀಚೆಗೆ ಆಯ್ಕೆಯಾದ ಬಾಂಬೇ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ ಕೆ.ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಶ್ರೀನಿವಾಸ ಉಡುಪ ಅನುಗ್ರಹ ನುಡಿಗಳನ್ನಾಡಿ ಜೀವನವೇ ಒಂದು ಅತ್ಯಂತ ಮಹತ್ವದ್ದಾಗಿದ್ದು ಸಾಧನೆ ಮಾಡಿದಾಗ ಜೀವನ ಅರ್ಥಪೂರ್ಣವಾಗುತ್ತದೆ. ಭಗವಂತನ ಆರಾಧನೆ ಮತ್ತು ಮಾತೃ, ಪಿತೃ, ಗುರುದೇವೋಭವಗಳಂತೆ ಭಕ್ತಿಪೂರ್ವಕವಾಗಿ ನಿತ್ಯ ನಿರಂತರ ಆರಾಧನೆಯಿಂದ ಸಾಧನೆ ಮಾಡಬೇಕು. ಇದೇ ಸಾರ್ಥಕತೆಯ ಜೀವನ. ಅಸೋಸಿಯೇಶನ್ ಅಂದಾಗ ಎರಡು ಹೆಸರುಗಳು ಸ್ಪಷ್ಟವಾಗುವುದು ಒಂದು ನಾರಾಯಣಗುರುಗಳು ಎರಡಯೇಯದು ಜಯ ಸಿ.ಸುವರ್ಣರು. ಅವರ ಮಾರ್ಗದರ್ಶನದ ಸಂಸ್ಮರಣೆ, ಪ್ರೇರಣೆ ಮತ್ತು ಅನುಕರಣೆಗಳಿಂದ ಇಂತಹ ಕಾರ್ಯಕ್ರಮಗಳು ಜೀವಂತವಾಗಿವೆ. ಅವರ ಹೆಸರಿನ ಪ್ರಶಸ್ತಿಗಳನ್ನು ಪಡೆಯುವ ಕಲಾವಿದರೂ ಪ್ರಶಂಸನೀಯರು ಎಂದರು.
ಬಿಲ್ಲವರ ಅಸೋಸಿಯೇಶನ್ ಕಲೆ, ಸಾಹಿತ್ಯವನ್ನು ಪೋಷಿಸಿ ಬೆಳೆಸಿದ ಮಹಾನ್ ಸಂಸ್ಥೆಯಾಗಿದೆ. ಮುಂಬಯಿಯಲ್ಲಿ ಎಲ್ಲರೂ ಸಮಾನರಾಗಿ ಸಹೋದರತ್ವದ ಬಾಳ್ವೆಯನ್ನು ಮೈಗೂಡಿಸಿ ಬಾಳುವವರಾಗಿದ್ದು, ಬೇರೆ ಬೇರೆ ಸಮಾಜದವರಾಗಿದ್ದರೂ ಐಕ್ಯತೆಯಿಂದ ಬದುಕು ಕಟ್ಟಿಕೊಂಡವರಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವನುಸಾರದ ಬದುಕೇ ಇದಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಹರೀಶ್ ಅವಿನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಬಾಂಬೇ ಬಂಟ್ಸ್ ಎಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಸಮಾಜ ಸೇವಕಿ ಲಕ್ಷ್ಮೀ ಎನ್.ಕೋಟ್ಯಾನ್, ಪ್ರಶಸ್ತಿ ಪ್ರಾಯೋಜಕರಲ್ಲಿನ ವಿನೇಶ್ ಎಂ.ಕುಕ್ಯಾನ್ ಹಾಗೂ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್.ಕೋಟ್ಯಾನ್, ಜಯಂತಿ ವಿ.ಉಳ್ಳಾಲ್, ಮೋಹನ್ ಸಿ.ಕೋಟ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡುಇನ್ನಾ, ಕಾರ್ಯದರ್ಶಿ ನವೀನ್ ಎಲ್.ಬಂಗೇರ ವೇದಿಕೆಯಲ್ಲಿ ಆಸೀನರಾಗಿದ್ದರು.
ಮನೋರಂಜನಾ ಕಾರ್ಯಕ್ರಮವಾಗಿ ಅಸೋಸಿಯೇಶನ್‌ನ ಸ್ಥಳೀಯ ಕಚೇರಿಗಳ ಕಲಾವಿದರು ಸಾಂಸ್ಕೃತಿಕ ನೃತ್ಯ ವೈಭವ ಪ್ರಸ್ತುತ ಪಡಿಸಿದರು. ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ‘ಶ್ರೀ ಕೃಷ್ಣಲೀಲೆ ಕಂಸವಧೆ’ ಯಕ್ಷಗಾನವನ್ನು ಪ್ರದರ್ಶಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎ.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಗಿರೀಜಾ ಚಂದ್ರಶೇಖರ್ ಪ್ರಾರ್ಥನೆಯನ್ನಾಡಿದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಅಕ್ಷಯ ಮಾಸಿಕದ ಪ್ರಧಾನ ಸಂಪಾದಕ ಡಾ| ಈಶ್ವರ ಅಲೆವೂರು ಪ್ರಶಸ್ತಿಗಳ ಬಗ್ಗೆ ಮಾಹಿತಿಯನ್ನಿತ್ತರು. ಅಕ್ಷಯ ಸಂಪಾದಕ ಹರೀಶ್ ಹೆಜ್ಮಾಡಿ ಮತ್ತು ಎಸ್.ಕೆ ಸುಂದರ್ ಹಾಗೂ ಸಹಾಯಕ ಸಂಪಾದಕ ಹರೀಶ್ಚಂದ್ರ ಜಿ.ಕುಂದರ್ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಅಕ್ಷಯ ನಿರ್ವಾಹಕ ಸಂಪಾದಕ ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದ ರು. ಗೌ| ಪ್ರ| ಕೋಶಾಧಿಕಾರಿ ರವಿ ಎಸ್.ಸನಿಲ್ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.