Skip to main content

ನಾಸಿಕ್ನ ಪೇಜಾವರ ಮಠದ ಶಾಖೆಯಲ್ಲಿ ಆಚರಿಸಲ್ಪಟ್ಟ ಶ್ರೀ ರಾಮ ನವಮಿ.

By March 30, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಮಾ.೨೭: ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ಯಾತ್ರಾ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ನಾಸಿಕ್‌ನ ಗೋದಾವರಿ ನದಿ ತೀರದ ಪಂಚವಟಿಯಲ್ಲಿ ಉಡುಪಿ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಪೇಜಾವರ ಅಧೋಕ್ಷಜ ಮಠದ ಶಾಖೆಯಲ್ಲಿ ಕಳೆದ ಗುರುವಾರ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆದೇಶ ಮತ್ತು ಆಶೀರ್ವಾದಗಳೊಂದಿಗೆ ವಾರ್ಷಿಕ ಶ್ರೀ ರಾಮನವಮಿ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪುರೋಹಿತ ವಿಷ್ಣು ತೀರ್ಥ ಸಾಲಿ ರಾಮದೇವರಿಗೆ ವಿಶೇಷ ಅಲಂಕಾರಗೈದು ದೇವರಿಗೆ ಸೇವೆಪೂಜೆ ನೆರವರಿಸಿ ನೆರವೇರಿದ ಸದ್ಭಕ್ತರಿಗೆ ಹರಸಿದರು.

ನಾಸಿಕ್ ಪೇಜಾವರ ಮಠದ ವ್ಯವಸ್ಥಾಪಕ ಶ್ರೀನಿವಾಸ್ ದೇಶಪಾಂಡೆ ಆಚಾರ್ಯ ಮತ್ತು ಅನಿಲ್ ಆಚಾರ್ಯ ಹಾಗೂ ಮಠದ ಪಾಕ ಪ್ರವೀಣ ರಾದ ಪಂಡಿತ ಬಲರಾಮ ಪಾಂಡೆ, ಸಹಾಯಕ ಲಕ್ಷ ಣ್ ದುಬೆ, ಸಹಾಯಕಿ ಅದಿತಿ ದೇಶಪಾಂಡೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಭಜನೆಯೊಂದಿಗೆ ಶ್ರೀ ರಾಮನ ಸ್ತುತಿಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.