kallianpurdotcom: 9741001849
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಆ.೨೫: ಆರಾಧ್ಯ ಶಕ್ತಿಗಳನ್ನು ಪೂರ್ವಿಕರು ಆರಾಧನಾ ಕೇಂದ್ರಗಳಳನ್ನಾಗಿಸಿದ್ದು ನಂಬಿಕಸ್ಥ ಗ್ರಾಮಾ ಸ್ಥರು, ಊರ ಹತ್ತು ಸಮಸ್ತರು ಇದನ್ನು ಸಂಸ್ಕೃತೀಕರಣ ಗೊಳಿಸಿ ಆರಾಧಿಸಿಕೊಂಡು ಬಂದಿರುತಾರೆ. ಗರೋಡಿಗಳು ಪಾವಿತ್ರ್ಯತೆಯ ಪೂಜಾ ಸ್ಥಳಗಳಾಗಿವೆ. ಇದರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಪರಮ ಕರ್ತವ್ಯವಾಗಬೇಕು. ನಾವು ಸಂಪ್ರದಾಯಸ್ಥರಾಗಿ ಇದನ್ನು ಮುನ್ನಡೆಸುತ್ತಾ ನಮ್ಮ ಭಾವೀ ಜನಾಂಗಕ್ಕೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯಪ್ರವೃತ್ತಿಯಾಗಿದೆ ಎಂದು ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದರು.
ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ಕಿರು ಸಭಾಗೃಹದಲ್ಲಿ ನಡೆಸ ಲ್ಪಟ್ಟ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಆರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ನಿತ್ಯಾನಂದ ಕೋಟ್ಯಾನ್ ಸಭೆಯನ್ನುದ್ದೇಶಿಸಿ ಮಾತನಾಡಿ ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಸರ್ವೋನ್ನತಿ ಗಾಗಿ ಸೇವಾನಿರತ ಗರೋಡಿ ಸೇವಾ ಟ್ರಸ್ಟ್ ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯನ್ನೂ ನಿಭಾಯಿಸುವಲ್ಲಿ ಸಕ್ರೀಯವಾಗಿದೆ ಎಂದರು.
ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುವಿಗೆ ಪೂಜೆ ಸಲ್ಲಿಸಿ ಆರತಿಗೈದ, ಕೋಟಿ ಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅಧ್ಯಕ್ಷರು ಮಹಾಸಭೆಗೆ ಚಾಲನೆಯನ್ನಿತ್ತು ಕಾರ್ಣಿಕ ಜಾಗದ ಚಾಕ್ರಿ ಮಾಡುವುದು ಭಾಗ್ಯವಾಗಿರುತ್ತದೆ ಎಂದರು.
ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ಡಿ.ಬಿ ಅವಿನ್, ಮತ್ತು ವಿಶ್ವನಾಥ ತೋನ್ಸೆ, ಗೌರವ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ವೇದಿಕೆಯಲ್ಲಿದ್ದರು. ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ರವಿರಾಜ್ ಕಲ್ಯಾಣ್ಫುರ್ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಜೊತೆ ಕೋಶಾಧಿಕಾರಿ ವಿಜಯ್ ಸನಿಲ್ ಸಂಘದ ಸೇವಾ ಮುನ್ನೋಟ ತಿಳಿಸಿದರು.
ಸಂಘದ ೨೦೨೪-೨೦೨೫ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಯೊಗೇಶ್ ಪೂಜಾರಿ ಎಂಡ್ ಅಸೋಸಿಯೇಟ್ಸ್ ಚಾರ್ಟರ್ಡ್ ಎಕೌಂಟೆಂಟ್ಸ್ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಯಿತು. ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಸಲಾಗಿದ್ದು ೨೦೨೪-೨೦೨೭ನೇ ಸಾಲಿಗೆ ಹಾಲಿ ಸಮಿತಿಯ ಪದಾಧಿಕಾರಿಗಳನ್ನೇ ಸಭೆಯು ಆಯ್ಕೆಗೊಳಿಸಿತು. ಸದಸ್ಯರಲ್ಲಿನ ಅಶೋಕ್ ಎಂ.ಕೋಟ್ಯಾನ್, ವಿಠಲ್ ಸಿ.ಪೂಜಾರಿ, ಸುರೇಶ್ ಅಂಚನ್, ಮತ್ತು ಡಿ.ಬಿ ಅವಿನ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಟ್ರಸ್ಟ್‌ನ ಸೇವೆಗೆ ಹಾರೈಸಿದರು.
ಗತ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾನ್ವಿತರಿಗೆ ಸಭೆಯ ಮಧ್ಯಾಂತರ ದಲ್ಲಿ ಗೌರವಿಸಲಾಯಿತು. ಅಂತರಾಷ್ಟ್ರೀಯ ಕ್ರೀಡಾಪಟು ಮಾ| ಆದಿ ರವಿ ಪೂಜಾರಿ ಮತ್ತು ಮಾ| ರಿತೇಶ್ ಪೂಜಾರಿ ಇವರಿಗೆ ಸರ್ವೋತ್ಕೃಷ್ಟ ಸಾಧನಾ ಪುರಸ್ಕಾರ ಪ್ರದಾನಿಸಲಾಯಿತು (ಅನುಪಸ್ಥಿತಿಯಲ್ಲಿ ಮಾ| ಆಕಾಸ್ ಎಸ್. ಪೂಜಾರಿ ಸ್ವೀಕರಿಸಿದರು). ಕು| ಗೌತಮಿ ಪೂಜಾರಿ ಹಾಗೂ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಕು| ವಿನಾಕ್ಷಿ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಸಿದ್ಧ ಕಲಾವಿದ ರಾಜು ಬಿ.ತೋನ್ಸೆ ಅವರಿಗೆ ಅವರಿಗೆ ವೈದ್ಯಕೀಯ ನೆರವು ನೀಡಲಾಗಿದ್ದು ಪ್ರತೀಕ್ ಪಿ.ಪೂಜಾರಿ ಇವರ ಶೈಕ್ಷಣಿಕ ದತ್ತು ಸ್ವೀಕಾರಿಸಲಾಯಿತು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮ ಸುವರ್ಣ, ವಿಜಯ್ ಪಾಲನ್, ಉದಯ ಎನ್.ಪೂಜಾರಿ, ಮಹಿಳಾ ವೃಂದದ ಭಾರತಿ ಎಸ್. ಸುವರ್ಣ, ಜಾನಕಿ ಎ.ಕೋಟ್ಯಾನ್, ಮೃದುಲಾ ಎ.ಕೋಟ್ಯಾನ್, ಸುಲೋಚನಾ ಆರ್.ಪೂಜಾರಿ, ಸವೀತಾ ಎನ್.ಕೋಟ್ಯಾನ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.
ಮಹಿಳಾ ವೃಂದದ ಪ್ರಾರ್ಥನೆ ಹಾಗೂ ಶ್ರೀ ಬ್ರಹ್ಮ ಬೈದರ್ಕಳರಿಗೆ ನಮಿಸಿ ಮಹಾಸಭೆ ಆರಂಭಿಸಲಾಯಿತು. ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್‌ನ ಮಾಜಿ ಗೌರವಾಧ್ಯಕ್ಷ ಶಂಕರ್ ಸುವರ್ಣ ಮತ್ತು ಹಿತೈಷಿಗಳು ಹಾಗೂ ಕೊಡುಗೈ ದಾನಿ ಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸಲ್ಲಿಸಲಾಯಿತು. ವಿಶ್ವನಾಥ ತೋನ್ಸೆ ಈ ಪ್ರತಿಭಾನ್ವಿತರ ಮಾಹಿತಿ ನೀಡಿ ಅಭಿನಂದಿಸಿದರು. ಸಂಜೀವ ಪೂಜಾರಿ ತೋನ್ಸೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.