Skip to main content
www.kallianpur.com | Email : kallianpur7@gmail.com | Mob : 9741001849

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್‌ನ ಮಹಿಳಾ ವಿಭಾಗದ ತ್ರಿಂಶತಿ ವಾರ್ಷಿಕೋತ್ಸವ.

By April 16, 2025Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಎ. 16  : ಮುಂಬಯಿಯ ಹಿರಿಯ ಸಂಸ್ಥೆಗಳಲ್ಲೊಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಇದರ  ಮಹಿಳಾ ವಿಭಾಗವು ತನ್ನ ೩೦ನೇ ವಾರ್ಷಿಕೋತ್ಸವವನ್ನು ಕಳೆದ ಭಾನುವಾರ (ಎ. 13 ) ಮೀರಾರೋಡಿನಲ್ಲಿನ ಸಂಘದ ಸಭಾಗೃಹ  “ಪ್ರಿಯಾ” ಶ್ರೀ  ವಿಶ್ವಕರ್ಮ ಭವನದಲ್ಲಿ ಜರಗಿತು . ಸಂಘದ ಅಧ್ಯಕ್ಷ ರವೀಶ್ ಜಿ.ಆಚಾರ್ಯ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೇಲ್ ಇದರ ಮಹಿಳಾವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಜನಾರ್ಧನ ಆಚಾರ್ಯ ಇವರು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವತ್ತು ನಮಗೆಲ್ಲ ಸಂತಸದ ಸಮಯ ಯಾಕಂದರೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮನೆಯವರ ಬೆಂಬಲದೊಂದಿಗೆ , ಸಂಘದ ಎಲ್ಲ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಿ ಸಂಘದ ಬೆನ್ನೆಲುಬಾಗಿ ನಿಂತಿರುವುದು ಬಹಳ ಖುಷಿ ತರುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ರವೀಶ್ ಜಿ. ಆಚಾರ್ಯ ಮಾತನಾಡಿ ನಮ್ಮ ಮಹಿಳೆಯರು ಮನೆಯ ಜವಾಬ್ದಾರಿ, ಮಕ್ಕಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ  ಪೂರೈಸಿ ಸಂಘಕ್ಕಾಗಿ ಸಂಘಟಿತರಾಗಿ, ಸಂಘದ ಬೆನ್ನಲುಬಾಗಿ  ಇಂದು ೩೦ ವರ್ಷ ಪೂರೈಸಿರುವುದು ಮತ್ತು ಒಂದು ಉತ್ತಮ ಕಾರ್ಯಕ್ರಮವನ್ನು ಏರ್ಪಡಿಸಿರುವುದು ತುಂಬ ಸಂತಸದ ವಿಷಯ. ಇವರಿಗೆ ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವ ಮಹನೀಯರಿಗೆ ಸಂಘವು ಅಭಾರಿ ಯಾರುತ್ತದೆ. ಹಾಗೆಯೆ  ಸಂಘವು ತನ್ನ ೮೦ನೇ ವರ್ಷಾಚರಣೆಯ ಹಾದಿಯಲ್ಲಿದ್ದು ಅದಕ್ಕೂ ಇನ್ನಷ್ಟು ಮಹಿಳೆಯರು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಎಲ್ಲರಿಗೂ ಅಭಿನಂದಿಸಿದರು.

ಉಪ ಕಾರ್ಯಾಧ್ಯಕ್ಷೆ ವೀಣಾ ಶಿವಾನಂದ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು,  ಈ ಸಂದರ್ಭದಲ್ಲಿ ಮಹಿಳಾ ವಿಭಾಗವನ್ನು ಸದೃಢ ಗೊಳಿಸುವಲ್ಲಿ ಮಹತ್ತರ ಸೇವೆ ಸಲ್ಲಿಸಿರುವ  ಶುಭ ಸುನಿಲ್ ಆಚಾರ್ಯ, ಕಲ್ಪನಾ ಚಂದ್ರಕಾಂತ ಆಚಾರ್ಯ, ಮಂಜುಳಾ ರಾಮಚಂದ್ರ ಆಚಾರ್ಯ, ಚಂದ್ರಕಲಾ ಶ್ರೀಧರ ಆಚಾರ್ಯ ಮತ್ತು ಯೋಗಿನಿ ರಾಘವ ಆಚಾರ್ಯರವರನ್ನು ಅತಿಥಿsಗಣ್ಯರ ಸಮ್ಮುಖದಲ್ಲಿ ಸನ್ಮಾನಿಸ ಲಾಯಿತು.  ಹಿರಿಯ ಸದಸ್ಯೆ ರೂಪಾ ಪ್ರಭಾಶಂಕರ್ ಆಚಾರ್ಯ ಅವರಿಗೆ ವಿಶೇಷ ಗೌರವದೊಂದಿಗೆ ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ,  ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವ ಕುಮಾರಿ ಶ್ರೇಯಾ ಗಣೇಶ್  ಆಚಾರ್ಯ ಹಾಗು ಇಕಾನಾಮಿಕ್ಸ್ ಟೈಮ್ಸ್ ವಾರ್ಷಿಕ ಪ್ರಶಸ್ತಿ ಪಡೆದ ನ್ಯಾಯವಾದಿ ಮೀನಾಕ್ಷಿ  ಆಚಾರ್ಯ ಇವರುಗಳನ್ನು ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿದ ಕಲ್ಪನಾ ಆಚಾರ್ಯ ಮತ್ತು ಶುಭ ಸುನಿಲ್ ಆಚಾರ್ಯರು ತಮ್ಮ  ಅನಿಸಿಕೆ ಗಳನ್ನು ಹಂಚಿ ಕೊಂಡರು.

ಇದೇ ಸಂದರ್ಭದಲ್ಲಿ  ಸಂಘದ ಮಾಜಿ ಅಧ್ಯಕ್ಷರುಗಳಾದ  ಎಂ ಎ ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಗೋಪಾಲಕೃಷ್ಣ ಟಿ. ಆಚಾರ್ಯ  ಹಾಗೂ ನಿಕಟ ಪೂರ್ವ ಅಧ್ಯಕ್ಷ  ಕಲ್ಯಾಣಪುರ ಸದಾನಂದ ಆಚಾರ್ಯ ಅವರುಗಳನ್ನು ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ  ಸದಸ್ಯರುಗಳ ಮಕ್ಕಳು ಹಾಗು ಯುವ ಮತ್ತು ಮಹಿಳಾ ವಿಭಾಗದ ಕಾರ್ಯಕರ್ತೆಯರುಗಳು ವೈವಿಧ್ಯಮಯ ನೃತ್ಯ ಪ್ರದರ್ಶನಗಳನ್ನು ಪ್ರಸ್ತುತಪಡಿಸಿದರು. ಮುಂಬಯಿಯ ಹೆಸರಾಂತ ನಾಟಕಕಾರ, ಹಾಸ್ಯಚಕ್ರವರ್ತಿ ಬಿರುದಾಂಕಿತ ಶ್ರೀ  ಅಶೋಕ್ ಕುಮಾರ್ ಕೊಡ್ಯಡ್ಕ ನಿರ್ದೇಶನದ  ” ಸರಕಾರಿ ಶಾಲೆಯ ಕಿರಿ ಕಿರಿ ಮಕ್ಕಳು” ಎಂಬ ಹಾಸ್ಯಮಯ  ಕಿರು  ಪ್ರಹಸನವನ್ನು ಮಹಿಳಾ ವಿಭಾಗದ ಸದಸ್ಯೆಯರು ಪ್ರದರ್ಶಿಸಿದರು. ಸಂಘದ ಹಿರಿಯ ಸದಸ್ಯರುಗಳು  ಮಹಿಳೆಯರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮಕ್ಕಳು ಉಪಸ್ಥಿತರಿದ್ದರು.

ಮಹಿಳಾ ವಿಭಾಗ ಸದಸ್ಯೆಯರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ  ಸುಜಾತಾ ಗೋಪಾಲ್ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ವಿಭಾಗವು ನಡೆದು ಬಂದ ಹಾದಿಯ ಬಗ್ಗೆ  ಮತ್ತು ಯುವ ವಿಭಾಗದೊಂದಿಗೊಡಗೂಡಿ ಮಾಡಿರುವ  ಕೆಲಸ ಕಾರ್ಯಗಳು ಬಗ್ಗೆ ಸಂಪೂರ್ಣ ವಿವರಣೆ ನೀಡಿದರು ಮತ್ತು ಎಲ್ಲರನ್ನು ಸ್ವಾಗತಿಸಿದರು. ಮಹಿಳಾ ವಿಭಾಗದ ಮಹಿಳಾ ವಿಭಾದ ಸಂಚಾಲಕರುಗಳಾದ ರಾಜೇಶ್ವರಿ  ಸತೀಶ್  ಆಚಾರ್ಯ ಹಾಗು ಅಮಿತಾ ಧರ್ಮಜ ಆಚಾರ್ಯ  ಅವರು ಜತೆಯಾಗಿ ಕಾರ್ಯಕ್ರಮ ನಿರೂಪಿಸಿ ದರು. ಸಂಚಾಲಕಿ ಅಮಿತಾ ಧರ್ಮಜ ಆಚಾರ್ಯ ಧನ್ಯವಾದಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.