kallianpurdotcom: 08/10/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಗುಜರಾತ್ (ಬರೋಡಾ), ಅ.೦೭: ತುಳುನಾಡ ಸಂಸ್ಕ್ರತಿಯನ್ನು ಗುಜರಾತ್‌ನಲ್ಲಿ ಸಂಭ್ರಮಿ ಸುವ ನಾವೂ ಧನ್ಯರು. ಅವಕಾಶ ಒದಗಿಸಿದ ಸಂಘದ ಸದಸ್ಯರೆಲ್ಲರೂ ಗೌರವಕ್ಕೆ ಪಾತ್ರರು. ತುಳುನಾಡ ಸಂಪ್ರದಾಯ ಸಂಸ್ಕ್ರತಿಯು ಕಂಪನದಾಯಕವಾಗಿದೆ ಎಂದು ಮಾಜಿ ಸಂಸದ ಮತ್ತು ಕರ್ನಾಟಕದ ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಗುಜರಾತ್ ಬರೋಡಾ ಕಲಾಲಿ ಇಲ್ಲಿನ ಸೌರಾಷ್ಟ್ರ ಜೈನ್ ಭವನ ದಲ್ಲಿ ತುಳು ಸಂಘ ಬರೋಡಾ ಸಂಸ್ಥೆಯು ಆಯೋಜಿಸಿದ್ದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಸೊರಕೆ ಮಾತನಾಡಿದರು.
ಸಂಘದ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಗೌರವಾಧ್ಯಕ್ಷ ದಯಾನಂದ್ ಬೋಂಟ್ರಾ ಬೆಳ್ಮಾಣ್ (ಬರೋಡಾ), ತುಳು ಸಂಘ ಅಹ್ಮಬಾದ್ ಗೌರವಾಧ್ಯಕ್ಷ ಮೋಹನದಾಸ್ ಎಂ.ಪೂಜಾರಿ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಅಹ್ಮದಾಬಾದ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಕನ್ನಡ ಸಂಘ ಸಾಂತಾಕ್ರೂಜ್ ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ವಿದ್ಯಾದಾಯಿನಿ ಸಭಾ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ ಸೂರತ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್ ವೇದಿಕೆಯಲ್ಲಿ ಅಸೀನರಾಗಿದ್ದು, ಪುರಸ್ಕ್ರತ ವಿಜೇತ ಪ್ರತಿಷ್ಠಿತ ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಪ್ರಮಿಳಾ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ರೂಪಲಕ್ಷ್ಮಿ ವಿಜಯ್ ಶೆಟ್ಟಿ, ವಿಶಿಷ್ಟ ವಿ.ಶೆಟ್ಟಿ, ಸಂಘದ ಸದಸ್ಯರಾದ ಮಾಧವ ಶೆಟ್ಟಿ ಫರಂಗಿಪೇಟೆ, ದಯನಂದ ಕೆ.ಸಾಲಿಯನ್, ಕಾರ್ತಿಕ್ ಗೌಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ನಾಟಕವನ್ನು ಅಭಿನಯಿಸಿದ ಕಲಾವಿದ ರೆಲ್ಲರನ್ನು ಸತ್ಕರಿಸಿದರು. ಸ್ವರಾಜ್ ಶೆಟ್ಟಿ, ರಮೇಶ್ ಕಲ್ಲಡ್ಕ, ರಜತ್ ಕದ್ರಿ, ನಿತೇಶ್ ಏಳಿಂಜೆ, ಪ್ರಿತೇಶ್ ಕುಮಾರ್ ಬಲ್ಲಾಳ್‌ಬಾಗ್, ವಿನೋದ್‌ರಾಜ್ ಕೋಕಿಲಾ, ವಿಶಾಲ್‌ರಾಜ್ ಕೋಕಿಲಾ, ರಮೇಶ್ ಕಲ್ಲಡ್ಕಾ, ಸಾಗರ್ ಮಡಂತ್ಯಾರು, ಸುದರ್ಶನ್ ಬಲ್ಲಾಳ್‌ಬಾಗ್, ವೀರ್‌ವಸಂತ್ ಬೈಕಂಪಾಡಿ, ಜಯರಾಮ ಆಚಾರ್ಯ ಮಂಜೇಶ್ವರ, ಕು| ರಕ್ಷಿತಾ ರಾವ್, ಮನೀಷ್ ಕದ್ರಿ, ಸಚಿನ್ ಉರ್ವಾಸ್ಟೋರ್, ಅಶ್ವತ್ ಅದ್ಯಪಾಡಿ, ಅಶ್ವತ್ ಉಡುಪಿ, ನಾಗರಾಜ್ ಉರ್ವಾಸ್ಟೋರ್, ರವಿಚಂದ್ರ ಸೋಮೇಶ್ವರ, ತಸ್ಮಯ ಶೆಟ್ಟಿ ಕೊಡಿಯಾಲ್‌ಬೈಲ್, ಶಬರಿ ಮಂಗಳದೇವಿ, ಆನೀಷ್, ಕಮಲಾಕ್ಷ ಪೂಜಾರಿ ಮಾಣಿ, ರಾಜೇಶ್ ಕುಡ್ಲ ತಂಡವು ನಾಟಕ ಪ್ರದರ್ಶನಕ್ಕೆ ಸಹಕರಿಸಿತು. ಎ.ಕೆ ವಿಜಯ್ ಕೋಕಿಲಾ ಸಂಗೀತ ನೀಡಿದ್ದು, ನಾಟಕ ತಂಡದ ಸಂಘಟಕ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್ ಸಾರಥ್ಯದಲ್ಲಿ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ಪ್ರಶಸ್ತಿ ಪುರಸ್ಕ್ರತ ರಂಗತಜ್ಞ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ ಸೃಷ್ಟಿಯಾದ `ಶಿವದೂತೆ ಗುಳಿಗೆ’ ವಿಭಿನ್ನ ಶೈಲಿಯ ನಾಟಕವನ್ನು ಕಲಾಸಂಗಮ ಮಂಗಳೂರು ತಂಡದ ಕಲಾವಿದರು ಪ್ರದರ್ಶಿಸಿದರು. ಶಶಿಧರ ಬಿ.ಶೆಟ್ಟಿ ಸ್ವಾಗತಿಸಿದರು. ಸಂಘಟಕ ಮದನ್‌ಕುಮಾರ್ ಮೂಡಿಗೆರೆ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಧನ್ಯವಾದಗೈದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.