Skip to main content
www.kallianpur.com | Email : kallianpur7@gmail.com | Mob : 9741001849

ಉದ್ಯಾವರ : ಸ್ನೇಹಾಲಯಕ್ಕೆ ದಿನಸಿ ವಸ್ತುಗಳ ವಿತರಣೆ.

By September 27, 2024Kannada News
kallianpurdotcom: 9741001849
 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) 

ಉದ್ಯಾವರ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ ಉಡುಪಿ ಎರಡನೇ ವರ್ಷಕ್ಕೆ ಪಾದರ್ಪಣೆಗೊಂಡ ಹಿನ್ನೆಲೆಯಲ್ಲಿ ಉದ್ಯಾವರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾನ್ವೆಂಟನ ಸ್ನೇಹಾಲಯದ ವಿದ್ಯಾರ್ಥಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜ ವರು ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮೂಲ ಉದ್ದೇಶ ಮತ್ತು ಪ್ರೇರಣೆ ದಿ. ಫಾ ವಲೇರಿ ಯನ್ ಮೆಂಡೋನ್ಸ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಅಗಲುವಿಕೆ ನಮಗೆ ತುಂಬಲಾಗದ ನಷ್ಟವಾಗಿದೆ. ಅದರ ಸಲುವಾಗಿ ಈ ಕಾರ್ಯಕ್ರಮದ ಎಲ್ಲಾ  ಶ್ರೇಯಸ್ಸು ದಿ. ಫಾ ವಲೇರಿಯನ್ ಮೆಂಡೋನ್ಸ ಇವರಿಗೆ ಅರ್ಪಿಸುತ್ತೇನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಮೊದಲು ಮಾನಸ ಪುನರ್ವಸತಿ ಕೇಂದ್ರ ಪಾಂಬೂರು ಇಲ್ಲಿನ ವಿಶೇಷ ಚೇತನ ಮಕ್ಕಳೊಂದಿ ಗೆ ಆಚರಿಸಿಕೊಂಡಿದ್ದು, ಇಂದು ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್  ಚರ್ಚ್ ಉದ್ಯಾವರದ ಧರ್ಮ ಗುರು ಗಳಾದ ರೇ/ಫಾ/ ಅನಿಲ್ ಡಿಸೋಜ ಇವರು ಮಾತನಾಡಿ ಸಂಸ್ಥೆಯಿಂದ ಇನ್ನಷ್ಟು ಜವಾಬ್ದಾರಿಯುತವಾದ ಸಾಮಾಜಿಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಸೈಂಟ್ ಮೇರಿಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇಲ್ಲಿನ ಧರ್ಮ ಗುರುಗಳಾದ ಫಾ. ಲಾರೆನ್ಸ್ ಡೆವಿಡ್ ಕ್ರಾಸ್ತ ಇವರು ಮಾತ ನಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದಿ. ವಲೆರಿಯನ್ ಮೆಂಡೋನ್ಸ ಇವರು ನುಡಿದಂತೆ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯು ಬೆಳೆಯುತ್ತಾ ಇತರರನ್ನು ಬೆಳೆಸಿಕೊಂಡು ಸಾಗಲಿ ಎಂದು ಶುಭ ಹಾರೈಸಿ ದರು.

ಮುಖ್ಯ ಅತಿಥಿ ಸೀಮಾ ಎಸ್ ಹಳದಿಪುರರವರು ಮಾತನಾಡಿ, ಮಹಿಳೆಯರು ಇಂದು ಉನ್ನತ ಸ್ಥಾನವನ್ನು ಅಲಂಕರಿಸಿ ಕೊಂಡು ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರ ಗಳಲ್ಲಿಯೂ ಅವಿರತ ಪರಿಶ್ರಮದೊಂದಿಗೆ ಉನ್ನತ ಮಟ್ಟದಲ್ಲಿ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ. ಇಂದು ಚಪ್ಪಾಳೆ ತಟ್ಟುವ ಕೈಗಳು ಮುಂದೆ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುವುದೇ ಸಾಧನೆ ಎಂದು ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಕಿವಿ ಮಾತು ತಿಳಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.