kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಜೂ.೧೬: ಇಷ್ಟೊಂದು ಗೋವು ಗಳಿರುವ ನೀಲಾವರವು ಪವಿತ್ರವಾದ ಜಾಗವಾಗಿದೆ. ಆದುದರಿಂದಲೇ ನಾವು ಯಾವುದೇ ಒಂದು ಆಚರಣೆಯನ್ನು ಇಂತಹ ಪಾವಿತ್ರ‍್ಯತೆಯ ಜಾಗದಲ್ಲಿ ನೆರವೇರಿಸಿದರೆ ಅದಕ್ಕೆ ಅತಿಯಾದ ಶ್ರೇಯಸ್ಸು ಫಲಿಸುವುದು. ಒಂದು ಹಸುವಿಗೆ ನಾವು ಆಹಾರ (ಗೋಗ್ರಾಸ) ಉಣ್ಣಿಸಿದರೆ ನೂರು ಜನರಿಗೆ ಊಟ ನೀಡಿದ ಪುಣ್ಯವು ಪ್ರಾಪ್ತಿಸುವುದು. ಇಲ್ಲಿ ೧೮೦೦ ಹಸುಗಳಿಗೆ ಅದೆಷ್ಟೋ ಜನ್ಮಕ್ಕೆ ಪುಣ್ಯ ಲಭಿಸುವುದು. ಇಂತಹ ಸ್ಥಳಗಳಿಗೆ ಬಂದು ಬರಿ ಗೋದಾನ ಮಾಡುವುದಲ್ಲ ಈ ತರಹ ಕಾಯಕರ್ಮ ಮಾಡಿದರೆ ಇಡೀ ಕುಟುಂಬಕ್ಕೆ ಸೌಶೀಲ್ಯತೆ ಒಲಿಯುವುದು. ಇಲ್ಲಿನ ಹಸುಗಳನ್ನು ನೋಡಿದಾಗಲೇ ದೇಹದಲ್ಲಿನ ಸುಸ್ತು ಮಾಯವಾಗುವುದು ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು.
ಹಿರಿಯ ಧರ್ಮಿಷ್ಠ ಎಂ.ವಿ.ಹರಿ ಭಟ್ ಕಳೆದ ಸೋಮವಾರ ತನ್ನ ವೈಷ್ಣವಿ ಶಾಂತಿಯನ್ನು (೫೦ನೇ ಹುಟ್ಟುಹಬ್ಬದ ಆಚರಣೆ) ಉಡುಪಿ ಇಲ್ಲಿನ ನೀಲಾವರ ಶ್ರೀ ಗೋವರ್ಧನಗಿರಿ ಕ್ಷೇತ್ರದಲ್ಲಿ ಆಚರಿಸಿದ್ದು ಇಲ್ಲಿನ ಶ್ರೀದೇವರ ಸಾನಿಧ್ಯದಲ್ಲಿ ಪ್ರಾತಃಸ್ಮರಣೀಯ ಕೃಷ್ಣೆಕ್ಯ ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಿಶ್ವಪ್ರಸನ್ನತೀರ್ಥರು ಆಶೀರ್ವಚನ ನೀಡಿ ಶುಭ ಸಮಾರಂಭವನ್ನುದ್ದೇಶಿಸಿ ಮಾತನಾಡಿ ಅಭಿನಂದಿಸಿ ಎಂ.ವಿ.ಹರಿ ಭಟ್ ಮತ್ತು ಗಂಗಮ್ಮ ಮೂಡಬಿದ್ರೆ ದಂಪತಿಗೆ ಅನುಗ್ರಹಿಸಿದರು. ವಾಮಂಜೂರು ಶ್ರೀಹರಿ ಉಪಾಧ್ಯಾಯ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ವಿದ್ವಾನ್ ಹರಿ ಭಟ್ ಪುತ್ತಿಗೆ (ಪೇಜಾವರ ಮಠ) ಮತ್ತು ಸಂಧ್ಯಾ ಹರಿ ಭಟ್ ದಂಪತಿ ಪೂಜಾ ಯಜಮಾನತ್ವ ವಹಿಸಿದ್ದರು.
ಕು| ಸ್ಮತಿ ಭಟ್, ಕು| ಶ್ರೇಯಾ ಭಟ್, ಶ್ರೀ ಪೇಜಾವರ ಮಠದ ಮುಂಬಯಿ ಶಾಖಾ ಮುಖ್ಯ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ನಿರಂಜನ್ ಗೋಗ್ಟೆ, ಪುರೋಹಿತರಾದ ಮುಕುಂದ ಭಟ್ ಬೈತ್ತಮಂಗಳ್ಕರ್, ವಿಷ್ಣುತೀರ್ಥ ಸಾಲಿ, ಭಾರ್ಗ ವ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.