
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.೧೮: ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ಸಯಾನ್ ಮುಂಬಯಿ ಸಂಸ್ಥೆಯು ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಕಿಂಗ್ಸರ್ಕಲ್ನ ಶ್ರೀ ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭಾ ಇದರ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ರಾತ್ರಿ ‘ಸಂಪೂರ್ಣ ದಶಾವತಾರ’ ಅಪೂರ್ವ ಯಕ್ಷಗಾನ ಪ್ರದರ್ಶನವನ್ನು ಪ್ರದರ್ಶಿಸಿ ದಾಖಲೆ ನಿರ್ಮಿಸಿತು.
ಏಷಿಯಾ ಖಂಡದ ಅತೀದೊಡ್ದ ಭವ್ಯ ಸಭಾಗೃಹ ಎಂದೇ ಪ್ರಸಿದ್ಧ ಶ್ರೀ ಷಣ್ಮುಖಾನಂದ ಸಭಾಂಗಣದಲ್ಲಿ ಶನಿವಾರ ರಾತ್ರಿ ಗಂಟೆ ೮:೦೦ರಿಂದ ಬೆಳಿಗ್ಗೆ ಗಂಟೆ ೬:೦೦ರ ತನಕ ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ನಿರಂತರವಾಗಿ ಹತ್ತು ಗಂಟೆಗಳ ಕಾಲ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಅವರ ಸಮರ್ಥ ಸಾರಥ್ಯದೊಂದಿಗೆ ಪಾವಂಜೆ ಮೇಳ ಹಾಗೂ ತೆಂಕು-ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ದಶಾವತಾರ’ ಯಕ್ಷಗಾನ ಪ್ರದರ್ಶಿಸಿ ಮತ್ತೆ ಪುನರುಜ್ಜೀವ ಗೊಳಿಸಿದ ಕೀರ್ತಿಗೆ ಬಿಎಸ್ಕೆಬಿಎ ಪಾತ್ರವಾಗಿ ಶತಮಾನೋತ್ಸ ಮೈಲಿಗಲ್ಲು ಸಮಯದಿ ಕರ್ನಾಟಕದ ಗಂಡುಕಲೆಯ ಪ್ರದರ್ಶಗೈದು ಇತಿಹಾಸದ ಪುಟ ಸೇರಿಸಿ ಕೊಂಡಿತು.
ನಾಲ್ವತ್ತ ಎರಡು ವರ್ಷಗಳ ಹಿಂದೆ ಷಣ್ಮುಖಾನಂದ ಸಭಾಗೃಹದಲ್ಲಿ ಸ್ತಬ್ಧಗೊಂಡ ತವರೂರ ಯಕ್ಷಗಾನ ಮೇಳದ ಚೆಂಡೆ ನೀನಾದದಸ್ವರ ಹಾಗೂ ಬೃಹನ್ಮುಂಬಯಿಯಲ್ಲಿನ ಕಲಾ ಪ್ರದರ್ಶನದ ಕಾಲಮಿತಿಯಿಂದಲೂ ಮುಕ್ತಿಯನ್ನು ಪಡೆದು ಮತ್ತೆ ಯಕ್ಷಧ್ವನಿ ಮೊಳಗಿಸಿ ಮರುಜೀವ ತುಂಬಿಕೊಂಡ ಬಿಎಸ್ಕೆಬಿಎ ಪ್ರಯತ್ನಕ್ಕ್ಕೆ ಕಲಾಭಿಮಾನಿಗಳಲ್ಲಿ ಹಷದ ಹೊಳೆ ಹೊಳೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರನ್ನು ಬಿಎಸ್ಕೆಬಿಎ (ಗೋಕುಲ) ಪರವಾಗಿ ಬಿಎಸ್ಕೆಬಿಎ ಡಾ| ಸುರೇಶ್ ಎಸ್.ರಾವ್ ಕಟೀಲು, ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಕನ್ಯಾನ ಡಾ| ಸದಾಶಿವ ಕೆ. ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಿಶ್ವಾತ್ ಕೆಮಿಕಲ್ಸ್ನ ಕಾರ್ಯಾಧ್ಯಕ್ಷ ಬಿ. ವಿವೇಕ್ ಶೆಟ್ಟಿ, ಆಡ್ಲ್ಯಾಬ್ಸ್ ಕಾರ್ಯಾಧ್ಯಕ್ಷ ಮನ್ಮೋಹನ್ ಆರ್.ಶೆಟ್ಟಿ, ಚಾನ್ನೆಲ್ ಫ್ರೈಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಕಿಶನ್ ಜೆ.ಶೆಟ್ಟಿ, ಪ್ರಭಾಕರ ಶೆಟ್ಟಿ, ಅರುಣೋದಯ ಎಸ್.ರೈ, ಮೋಹನ್ ಸಿ ಶೆಟ್ಟಿ ಕಾಪು, ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ರೂಪಿ ಬಾಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ| ಎನ್.ಬಿ ಶೆಟ್ಟಿ, ಫೈಬರ್ ಪೊಲ್ಸ್ ಕಾರ್ಯಾಧ್ಯಕ್ಷ ದಿವಾಕರ್ ಎಸ್.ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ಹಾಗೂ ಬಿಎಸ್ಕೆಬಿಎ ಪದಾಧಿಕಾರಿಗಳು ಸೇರಿ ವಿಶೇಷವಾಗಿ ಯಕ್ಷಾಂಬುಧಿ ಚಂದ್ರಮ ಬಿರುದಿನೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಹಾಗೂ ಇತರ ಕಲಾವಿದರು, ಯಕ್ಷಗಾನದ ಪ್ರಾಯೋಜಕರಿಗೆ ವಿಶೇಷವಾಗಿ ಗೌರವಿಸಿದರು.
ಪಟ್ಲ ಸತೀಶ್ ಶೆಟ್ಟಿ ಇವರ ಪ್ರಧಾನ ಭಾಗವತಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ‘ದಶಾವತಾರ’ ಯಕ್ಷಗಾನದಲ್ಲಿ ಭರತ್ ಶೆಟ್ಟಿ ಸಿದ್ಧಕಟ್ಟೆ, ಮನ್ವಿತ್ ಶೆಟ್ಟಿ ಇರಾ ಭಾಗವತರಾಗಿದ್ದು, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ ಅವರುಗಳ ಚೆಂಡೆ-ಮದ್ದಳೆಗಳ ನೀನಾದಕ್ಕೆ ಪೂರ್ಣೇಶ್ ಆಚಾರ್ಯ ಚಕ್ರತಾಳ ವಾದನಗೈದರು. ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀ ಪಾತ್ರಧಾರಿ ಗಳಾಗಿ ಹಾಗೂ ಮವ್ವಾರು ಬಾಲಕೃಷ್ಣ ಮಣಿಯಾಣಿ, ಸಂದೇಶ್ ಮಂದಾರ ಹಾಸ್ಯಗಾರರಾಗಿ ಅಭಿನಯಿಸಿದರು. ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಣ ಶಿವಶಂಕರ ಭಟ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸಂತೋಷ್ ಕುಮಾರ್ ಮಾನ್ಯ, ರಾಕೇಶ್ ರೈ ಅಡ್ಕ, ಮಾಧವ ಕೊಳತ್ತಮಜಲ್, ಮೋಹನ್ ಬೆಳ್ಳಿಪಾಡಿ, ಮನೀಷ್ ಪಾಟಾಳಿ, ಲೋಕೇಶ್ ಮುಚೂರು, ರಂಜಿತ್ ಮಲ್ಲ, ರಮೇಶ್ ಪಟ್ರಮೆ, ದಿವಾಕರ ಕಾಣಿಯೂರು, ಮಧುರಾಜ್ ಪೆರ್ಮುದೆ, ಸುಹಾಸ್ ಪಂಜಿಕಲ್ಲು, ಲಕ್ಷಣ ಪೆರ್ಮುದೆ, ಭುವನ್ ಮೂಡುಜೆಪ್ಪು, ಮನ್ವಿತ್ ನಿಡ್ಡೋಡಿ ಪಾತ್ರಗಳನ್ನು ನಿಭಾಯಿಸಿ ಯಕ್ಷಗಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಅತಿಥಿ ಕಲಾವಿದರಾಗಿ (ತೆಂಕು ತಿಟ್ಟು) ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಟ್, ಅಮೃತ ಅಡಿಗ ಮುಮ್ಮೇಳದಲ್ಲಿ ಅಶೋಕ್ ಭಟ್ ಉಜಿರೆ, ವಾಸುದೇವ ರಂಗಾಭಟ್, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಅಕ್ಷಯ ಭಟ್ ಮೂಡುಬಿದ್ರೆ ಮತ್ತು (ಬಡಗು ತಿಟ್ಟು) ಹಿಮ್ಮೇಳದಲ್ಲಿ ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸನ್ನ ಭಟ್ ಬಾಳ್ಳಲ್, ಸುನಿಲ್ ಭಂಡಾರಿ ಕಡತೋಕ, ಸುಜನ್ ಹಾಲಾಡಿ, ಮುಮ್ಮೇಳದಲ್ಲಿ ಜಲವಳ್ಳಿ ವಿದ್ಯಾಧರ ರಾವ್, ಚಂದ್ರಹಾಸ ಗೌಡ, ಸಾಧವ ನಾಗೂರು, ಯುವರಾಜ ನಾಯ್ಕ ಅಭಿನಯಿಸಿ ಕಲಾವಿದರನ್ನು ರಂಜಿಸಿದರು.
ಬಿಎಸ್ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಉಪಾಧ್ಯಕ್ಷರುಗಳಾದ ವೈ.ಮೋಹನ್ರಾಜ್ ಮತ್ತು ಚಿತ್ರಾ ಎ.ಮೇಲ್ಮನೆ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಗೌರವ ಕೋಶಾಧಿಕಾರಿ ಗಣೇಶ್ ಭಟ್, ಗೌರವ ಜೊತೆ ಕಾರ್ಯದರ್ಶಿಗಳಾದ ಪಿ.ವಿನೋದಿನಿ ಆರ್.ರಾವ್ ಮತ್ತು ಪ್ರಶಾಂತ್ ಆರ್.ಹೆಲೆ, ಜೊತೆ ಕೋಶಾಧಿಕಾರಿ ಕುಸುಮಾ ಶ್ರೀನಿವಾಸ್ ಪಿ.ಬಿ, ಯುವ ವಿಭಾಗದಧ್ಯಕ್ಷೆ ಕು| ಲಕ್ಷ್ಮಿ ಎಸ್. ಉಡುಪ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಬಿ.ರಮಾನಂದ ರಾವ್, ಶೈಲಿನಿ ರಾವ್, ಆರ್.ಎಲ್ ಭಟ್ ಜೆರಿಮೆರಿ, ಶ್ರೀ ಷಣ್ಮುಖಾನಂದ ಸಂಸ್ಥೆಯ ಅಧ್ಯಕ್ಷ ಡಾ| ವಿ.ಶಂಕರ್, ಮತ್ತಿತರ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಸಂಚಾಲಕರು, ಸದಸ್ಯರ ನೇಕರು, ಅಪಾರ ಸಂಖ್ಯೆಯ ಸದಸ್ಯರು ಹಾಜರಿದ್ದರು.
ಆರಂಭದಲ್ಲಿ ಗೋಕುಲ ಸಂಕುಲದಲ್ಲಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೋಕುಲದ ಗೋಕುಲದ ಆರ್ಚಕ ಗಣೇಶ್ ಭಟ್, ಎಸ್.ರಾಮವಿಠಲ ಕಲ್ಲೂರಾಯ, ಆರ್ಚಕ ಅಕ್ಷಯ್ ಬಲ್ಲಾಳ್ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.
ಗೀತಾ ಆರ್.ಎಲ್ ಭಟ್ ಪ್ರಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಕ್ಕಳ ಸನ್ಮಾನಿತರನ್ನು ಪರಿಚಯಿಸಿದರು. ಕರ್ನೂರು ಮೋಹನ್ ರೈ ಸನ್ಮಾನ ಕಾರ್ಯಕ್ರಮ ನಿರೂಪಣೆಗೈದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.