Skip to main content
www.kallianpur.com | Email : kallianpur7@gmail.com | Mob : 9741001849

*ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಭಾರತವು ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಾಧ್ಯ* -ಪ್ರಸಾದ್ ರಾಜ್ ಕಾಂಚನ್.

By November 21, 2023News
kallianpurdotcom: 21/11/23

ಉಡುಪಿ: ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣಪುರ ಇಲ್ಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಚನ ಹುಂಡೈ ಮಾಲಕರು ಶ್ರೀ ಪ್ರಸಾದ್ ರಾಜ್ ಕಾಂಚನ್  ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಭಾರತವು ಇನ್ನಷ್ಟು ಬಲಿಷ್ಠ ರಾಷ್ಟ್ರ ವಾಗಲು ಸಾಧ್ಯ ಎಂದು ನುಡಿದರು.

ಸುಮಾರು 93 ವರ್ಷಗಳ ಕಾಲ ಭವ್ಯ ಇತಿಹಾಸವಿರುವ ಈ ಕನ್ನಡ ಮಾಧ್ಯಮ ಶಾಲೆಯನ್ನು ಪ್ರೌಢಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಕಥೋಲಿಕ ಶಿಕ್ಷಣ ಮಂಡಳಿಯನ್ನು ಅಭಿನಂದಿಸಿ ಕನ್ನಡ ಮಾಧ್ಯಮದ ವಿದ್ಯಾರ್ಥಿ ಗಳಿಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲು ಮತ್ತು ಅವಕಾಶಗಳನ್ನು ವಿದ್ಯಾರ್ಥಿಗಳು  ಸದುಪಯೋಗಪಡಿ ಸಿಕೊಳ್ಳಲು ವಿದ್ಯೆಯು ನೆರವಾಗುವಂತೆ ಪ್ರಸ್ತುತ ಜನಾಂಗವನ್ನು ಸಿದ್ಧಪಡಿಸಬೇಕು ಎಂಬ ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ಅತೀ ವಂ!  ವಲೇರಿಯನ್ ಮೆಂಡೋನ್ಸಾ ರವರು ಮಾತನಾಡಿ ಪ್ರಸಕ್ತ ಸಮಾಜದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಿಕೆಯಿಂದ ವಿದ್ಯಾರ್ಥಿಗಳು ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ. ಅದಕ್ಕಾಗಿ ಇಂದಿರುವ ಅವಕಾಶಗಳನ್ನು ಮುಂದಿರುವ ಭವಿಷ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ, ಜೀವರಸಾಯನ ಶಾಸ್ತ್ರ ವಿಭಾಗದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಇದರ ಪ್ರಾಧ್ಯಾಪಕರು ಆಗಿರುವ ಡಾಕ್ಟರ್ ರೇವತಿ ಪಿ.ಶೆಣೈ ಅವರು ಶಾಲಾ ದಿನಗಳನ್ನು ಮೆಲುಕು ಹಾಕಿ ಅಂದಿನ ಸಂಸ್ಕಾರಯುತ ಶಿಕ್ಷಣ ಇಂದಿನ ಬದುಕಿಗೆ ನಾಂದಿ ಹಾಡಿರುವುದನ್ನು ನೆನೆದರು.

ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಶ್ರೀ ಮಿಲಾಗ್ರಿಸ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೆಲ್ವಿನ್ ಸಿಕ್ವೇರಾ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಬ್ಯಾಪ್ಟಿಸ್ಟ್ ಡಾಯಸ್,  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸರಿತಾ, ಶಾಲಾ  ಮುಖ್ಯೋಪಾಧ್ಯಾಯನಿಯಾದ ಭಗಿನಿ ಅನಿತಾ ಡಿಸೋಜಾ ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು ದೃಶ್ಯ ಶ್ರಾವ್ಯ  ಮಾಧ್ಯಮದ ಮೂಲಕ ಶಾಲಾ ವರದಿಯನ್ನು ಮಂಡಿಸಿದ ಮುಖ್ಯೋಪಾಧ್ಯಾಯಿನಿಯವರು ಇಡೀ ವರ್ಷದ ಕಾರ್ಯಕ್ರಮಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿ ದರು. ಸರ್ವ ಶಿಕ್ಷಕ ಶಿಕ್ಷಕೇತರರ  ಸಹಕಾರದಿಂದ, ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಾರ್ಯ ಕ್ರಮ ಅರ್ಥ ಪೂರ್ಣ ವಾಗಿ ಮೂಡಿ ಬಂತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.