Skip to main content
www.kallianpur.com | Email : kallianpur7@gmail.com | Mob : 9741001849

ಕನ್ನಡ ಸಂಘ ಸಾಂತಕ್ರೂಜ್ ಆಯೋಜನೆಯ ವಾರ್ಷಿಕ ಹಳದಿ ಕುಂಕುಮ ಕಾರ್ಯಕ್ರಮ ಪರರ ಸೇವೆಯಿಂದ ಮಾನವ ಜನ್ಮ ಸಾರ್ಥಕ: ಮನೋರಮ ಶೆಟ್ಟಿ

By February 15, 2023February 20th, 2023Mumbai News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.೧೮: ಪರರ ಸೇವೆಯೊಂದಿಗೆ ಸಮಾಜ ಸೇವೆ ಮಾಡಿದಾಗಲೇ ಮಾನವ ಜನ್ಮ ಸಾರ್ಥಕವಾಗು ವುದು. ದೇವರು ನೀಡಿದ ವರದಲ್ಲಿ ಒಂದಿಷ್ಟನ್ನು ಸಮಾಜ ಸೇವೆಗೆ ಕೊಡುಗೈದಾನಿಗಳಾಗಿ ನೀಡಿದಾಗಲೇ ಸಂಪಾದನೆ ಫಲದಾಯಕವಾಗುವುದು. ಇದು ಪ್ರಸಕ್ತ ಯುವಪೀಳಿಗೆಗೆ ಆದರ್ಶವಾಗುವಂತಿ ರಬೇಕು. ಮಹಿಳೆಯರು ಮಕ್ಕಳಲ್ಲಿ ಆಚಾರ ವಿಚಾರ ತಿಳಿಸಿಕೊಟ್ಟು ಸಂಸ್ಕಾರಯುತ ಬದುಕನ್ನು ರೂಡಿಸಿ ಕೊಳ್ಳಬೇಕು.
ಮಹಿಳೆಯರು ಭಜನೆ ಮಾಡಿದಂತೆ ಮಕ್ಕಳಲ್ಲು ಭಜನೆಯಿಂದ ಭಕ್ತಿಯಭಾವ ರೂಪಿಸಿ ಶ್ರದ್ಧೆಯನ್ನು ಬಾಳಿಗೆ ಪ್ರೇರಕರಾಗಬೇಕು. ಮುಂಬಯಿಯಲ್ಲಿನ ಎಲ್ಲಾ ಕನ್ನಡಪರ ಸಂಸ್ಥೆಗಳು ಒಗ್ಗೂಡಿ ಭವ್ಯ ಕನ್ನಡ ಭವನವನ್ನು ರೂಪಿಸುವ ಯೋಜನೆ ಕೈಗೊಳ್ಳಬೇಕು ಎಂದು ತ್ರಿವೇಣಿ ಕನ್ಸಲ್ಟೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕಿ ಮನೋರಮ ಎನ್.ಬಿ ಶೆಟ್ಟಿ ನುಡಿದರು.

ಇಂದಿಲ್ಲಿ ಮಂಗಳವಾರ ಸಂಜೆ ಸಾಂತಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಕ್ರೂಜ್ ಸಂಸ್ಥೆಯು ಆಯೋಜಿಸಿದ್ದ ವಾರ್ಷಿಕ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿದ್ದು ದೀಪಹಚ್ಚಿ ಕಾರ್ಯಕ್ರಮ ಉದ್ಘಾಟಿಸಿ ಮನೋರಮ ಶೆಟ್ಟಿ ಮಾತನಾ ಡಿದರು.

ಸಂಘದ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಅರಸಿನ ಕಾರ್ಯ ಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಲ್.ವಿ ಅಮೀನ್, ಬಂಟ್ಸ್ ಸಂಘ ಮುಂಬಯಿ
ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಪಿ.ಶೆಟ್ಟಿ, ಕುಲಾಲ ಸುಧಾರಕ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಸುದೇಶ್ ಗುಜರನ್, ಸಮಾಜ ಸೇವಕಿ ಯಶೋಧಾ ಬಿ.ಆರ್ ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ|ಪೂರ್ಣಿಮಾ ಸುಧಾಕರ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಅತಿಥಿ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು ಶುಭಕಾಮನೆ ಸಲ್ಲಿಸಿದರು.

ದೇವರ ಕಾರ್ಯದಲ್ಲಿ ಹಳದಿಕುಂಕುಮ ಪ್ರಮುಖ ಮತ್ತು ಪಾವಿತ್ರ‍್ಯತಾವುಳ್ಳದ್ದಾಗಿದೆ. ಆದ್ದರಿದ ಸಂಸ್ಕ್ರತಿಯ ಮೂಲ ರೂಪವಾಗಿ ಮಹಿಳೆಯರು ಇದನ್ನು ಆಚರಿಸುತ್ತಿರು ವುದು ನೈಜ್ಯವಾಗಿದೆ. ಧಾರ್ಮಿಕ ಹಿನ್ನಲೆಯ ಭಾರತೀಯ ಮೂಲ ಸಂಸ್ಕ್ರತಿಯನ್ನು ಎತ್ತಿಹಿಡಿಯಲು ಇಂತಹ ಆಚರಣೆಗಳು ಅತ್ಯವಶ್ಯಕ. ಮಹಿಳೆಯರು ಮನೆಯಲ್ಲಿ ಮಕ್ಕಳನ್ನು ಮಾತ್ರ ಬೆಳೆಸಿ ಪೋಷಿಸದೆ ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ಸಂಘಟಿಸುವುದೂ ಶ್ಲಾಘನೀಯ ಸೇವೆಯಾಗಿದೆ ಎಂದು ಎಲ್.ವಿ ಅಮೀನ್ ನುಡಿದರು.

ನಿಮ್ಮೆಲ್ಲರ ಒಗ್ಗೂಡುವಿಕೆಯಿಂದ ಕನ್ನಡಾಂಭೆ ಭುವನೇಶ್ವರಿ ಹಾಗೂ ಸಂಘದ ಮಹಿಳಾ ಶಕ್ತಿಗೆ ಬಲ ಬಂದಂತಾಗಿದೆ. ಈ ಸಂಘವು ಆರೋಗ್ಯ, ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತುನೀಡಿ ಸಮಗ್ರ ಕನ್ನಡಿಗರ ಪರವಾಗಿ ಶ್ರಮಿಸುತ್ತಾ ೬೫ರ ಸೇವೆಯಲ್ಲಿ ಸಾಗುತ್ತಿದೆ. ಸರ್ವರಲ್ಲೂ ಸಮಾನತೆ ಸಾರುತ್ತಾ ಸಾಮರಸ್ಯದ ಧ್ಯೋತಕವಾಗಿ ಸಂಸ್ಥೆ ಮುನ್ನಡೆಯುತ್ತಿದ್ದು ಸಹೃದಯಿಗಳ, ಸೇವಾಕರ್ತರ ಸಹಯೋಗದಿಂದ ಸಂಸ್ಥೆಯನ್ನು ಇನ್ನಷ್ಟು ಬಲಾಢ್ಯ ಪಡಿಸುವ ಆಶಯ ಹೊಂದಿದ್ದೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಸುಜತಾ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅಮೀನ್, ಸದಸ್ಯರಾದ ಲಿಂಗಪ್ಪ ಬಿ.ಅಮೀನ್, ಸುಧಾ ಎ.ಅಮೀನ್, ಉಷಾ ವಿ.ಕೆ ಶೆಟ್ಟಿ, ಸುಮಾ ಎಂ. ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್, ಸಂಪಾ ಬಿಲ್ಲವ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯ್‌ಕುಮಾರ್ ಕೆ.ಕೋಟ್ಯಾನ್ ಹಾಗೂ ವಿಶೇಷ ಆಮಂತ್ರಿತರಾಗಿ ರೇಣುಕಾ ಪ್ರಕಾಶ್ ಭಂಡಾರಿ, ಸುಶೀಲಾ ಎಸ್.ದೇವಾಡಿಗ, ಪ್ರಮೋದಾ ಶಿವಣ್ಣ ಶೆಟ್ಟಿ, ಹರಿಣಿ ಶೆಟ್ಟಿ, ಯಮುನಾ ಶೆಟ್ಟಿ, ಶೋಭಾ ರೈ ಪೊವಾಯಿ, ಸವಿತಾ ಶೆಟ್ಟಿ, ಶೈಲಾ ಶೆಟ್ಟಿ ಪೊವಾಯಿ, ಅನಿತಾ ಯು.ಶೆಟ್ಟಿ ಸೇರಿದಂತೆ ಸಂಘದ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಭಜನೆ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ಶಿಕ್ಷಣ ಸಮಿತಿಯ ಕಾರ್ಯಾದರ್ಶಿ ಶಕಿಲಾ ಶೆಟ್ಟಿ, ಶಾಲಿನಿ ಜಿ.ಶೆಟ್ಟಿ, ಸುಮಿತ್ರಾ ದೇವಾಡಿಗ ಅತಿಥಿಗಳನ್ನು ಪರಿಚಯಿಸಿ ದರು. ಸಾಮಾಜಿಕ ಮತ್ತು ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೊಂಡಾ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.