Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರದ ಮಿಲಾಗ್ರಿಸ್ ಕೆಥೆದ್ರಾಲ್ ಚರ್ಚ್ – ಡಾ. ಜೆರಾಲ್ಡ್ ಪಿಂಟೊ, ಕಲ್ಯಾಣಪುರ

By September 22, 2022February 17th, 2023Articles

ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್ ಭಾರತದ ಅತೀ ಪ್ರಾಚೀನ ಚರ್ಚ್ ಒಂದಾಗಿದೆ. ೧೫-೧೨-೧೬೭೮ ರಂದು ಚೆನ್ನಮ್ಮ ರಾಣಿಯ ಪ್ರತಿನಿಧಿ ಬಸಪ್ಪ ನಾಯ್ಕ್ ಆನಿ ಪೊರ್ಚುಗಿಸ್ ಪ್ರತಿನಿದಿ ಗೋವದ ಗವರ್ನರ್ ಮದ್ಯೆ ಆದ ಒಪ್ಪಂದದ ಮೇರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್ ಸ್ಥಾಪನೆಗೊಂಡಿತು. ಇದಕ್ಕೆ ಬೇಕಾದ ಸ್ಥಳವನ್ನು ರಾಣಿಯವರು ದಾನವಾಗಿ ನೀಡಿದ್ದರು. ಇದಕ್ಕೆ ಕಾರಣ- ಇಲ್ಲಿಗೆ ವಿವಿದ ಕಾರಣಗಳಿಗಾಗಿ ಗೋವದಿಂದ ವಲಸೆ ಬಂದ ಕ್ರೆಸ್ತರು ಕುಶಲ ಕಾರ್ಮಿಕರು ಹಾಗೂ ಉತ್ತಮ ಕ್ರಷಿಕರಾಗಿದ್ದರು. ಕಲ್ಯಾಣಪುರದ ಮಿಲಾಗ್ರಿಸ್ ಕೆಥೆದ್ರಾಲ್ ಚರ್ಚ್ ಮುಲ್ಕಿಯಿಂದ ಕುಂದಾಪುರದವರೆಗೆ ಇರುವ ಹಲವಾರು ಚರ್ಚುಗಳಿಗೆ ತಾಯಿಯಾಗಿದೆ.

೧೬.೭.೨೦೧೨ ರಂದು ಪೋಪ್ ಜಗದ್ಗುರುಗಳು ಮಂಗಳೂರು ಧರ್ಮ ಪ್ರಾಂತ್ಯದಿಂದ ಸ್ವತಂತ್ರ ಉಡುಪಿ ಧರ್ಮ ಪ್ರಾಂತ್ಯ ಘೋಷಿಸಿದಾಗ , ಮಿಲಾಗ್ರಿಸ್ ಕೆಥೆದ್ರಾಲ್ ಚರ್ಚನ್ನು ಧರ್ಮ ಪ್ರಾಂತ್ಯದ ಪ್ರಮುಖ ಚರ್ಚ್ ಎಂದರೆ ಕಾಥೆದ್ರಾಲ್ ಎಂದು ಘೋಷಿಸಿದರು. ಕಾಥೆದ್ರಾಲ್ ಎಂದರೆ ಬಿಷಪರ ಪೀಠ ಎಂದು ಅರ್ಥ. ಮಿಲಾಗ್ರಿಸ್ ಇಗರ್ಜಿಯನ್ನು ಕಾಥೆದ್ರಾಲ್ ಎಂದು ಆರಿಸಲು ಇದಕ್ಕೆ ಹಲವಾರು ಕಾರಣಗಳು ಇವೆ. ಏಸು ಕ್ರಿಸ್ತನ ಹನ್ನೆರಡು ಅನುಯಾಯಿಗಳಲ್ಲಿ ಒಬ್ಬರಾದ ಬಾರ್ಥೊಲೋಮಿಯೊ ಇಲ್ಲಿ ಬಂದಿರುವುದಾಗಿ ಹಲವಾರು ಉಲ್ಲೇಕ ಗಳಿವೆ. ಕ್ರಿ.ಶ ೧೮೯೨ ಇಸವಿಯಲ್ಲಿ ಅಲೆಗ್ಸಾಂಡ್ರಿಯದ ಬಿಷಪ್ ದೆಮೊಟ್ರಿಯಾಸ್ ಪಾಂತೇಯಸ್ ಎಂಬ ಮಿಷನರಿಯನ್ನು ಕಲ್ಯಾಣಪುರಕ್ಕೆ ಕಳುಹಿಸಿದ್ದಾಗಿ ಸಂತ ಜೆರೊಮರು ಇಂಡಿಕಾ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಕ್ರಿ.ಶ ೬ ನೇ ಶತಮಾನದಲ್ಲಿ ಇಲ್ಲಿ ಒಂದು ಧರ್ಮಪ್ರಾಂತ್ಯ ವಿದ್ದು ಇಲ್ಲಿ ಒಬ್ಬ ಬಿಷಪರು ಇದ್ದಿದ್ದರು ಎಂಬುವುದಾಗಿ ಹೇಳಲಾಗುತ್ತದೆ. ಆದರೆ ೭ನೇ ಶತಮಾನದಿಂದ ೧೬ನೇ ಶತಮಾನವರೆಗೆ ಇಲ್ಲಿ ಕ್ರೆಸ್ತ ಧರ್ಮದ ಉಲ್ಲೇಖ ವಿಲ್ಲ. ಇಲ್ಲಿರುವ ಕೊಂಕಣಿ ಭಾಷಿಕರಾಗಿರುವ ಕಥೊಲಿಕ ಕ್ರೆಸ್ತರು ಗೋವದಿಂದ ಇಲ್ಲೆ ಬಂದವರಾಗಿದ್ದಾರೆ.

ಮಿಲಾಗ್ರಿಸ್ ಮಾತೆ ಮಿಲಾಗ್ರಿಸ್ ಚರ್ಚಿನ ಪಾಲಕಿ. ಮಿಲಾಗ್ರಿಸ್ ಪೊರ್ಚುಗೀಸ್ ಶಬ್ದವಾಗಿದ್ದು, ಇದರ ಅರ್ಥ ಪವಾಡ. ಏಸು ಕ್ರಿಸ್ತನ ತಾಯಿಯಾದ ಪವಾಡ ಮಾತೆಗೆ ಈ ದೆವಾಲಯ ಸಮರ್ಪಿಸಲಾಗಿದೆ. ಪೋರ್ಚುಗೀಸ್ ವಾಸ್ತುಸೈಲಿಯಲ್ಲಿ ಕಟ್ಟಿರುವ ಇಗರ್ಜಿಯ ಗರ್ಭಾಂಕಣ( ಆಲ್ತಾರ್) ಸುಂದರವಾಗಿದೆ. ೧೭೮೪ ಇಸವಿಯಲ್ಲಿ ಟಿಪ್ಪುವಿನ ಸೈನಿಕರು ಚರ್ಚನ್ನು ಕೆಡವಿದಾಗ ಪವಾಡ ಮಾತೆಯ ಮೂರ್ತಿಯನ್ನು ಸ್ಥಳೀಯ ಹಿಂದುಗಳು ಮನೆಯಲ್ಲಿ ಅಡಗಿಸಿ ರಕ್ಷಿಸಿದಸ್ದರು. ಇದನ್ನು ಚರ್ಚಿನ ಮುಂಬಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ.

ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್ ಕರಾವಳಿ ಕರ್ನಾಟಕದ ಶೈಕ್ಷಣಿಕ ಕೇಂದ್ರವಾಗಿದೆ. ಮೂರು ಪ್ರಾಥಮಿಕ ಶಾಲೆಗಳು, ಎರಡು ಪ್ರೌಡ ಶಾಲೆಗಳು, ಒಂದು ಪದವಿ ಪೂರ್ವ ಕಾಲೇಜು ಹಾಗೂ ಒಂದು ಪದವಿ ಕಾಲೇಜುಗಳನ್ನು ನಡೆಸುತ್ತದೆ. ಒಂದುವರೆ ಶತಮಾನದಿಂದ ಜಾತಿ-ಧರ್ಮ ಭೇದವಿಲ್ಲದೆ ಜನರಿಗೆ ಶಿಕ್ಷಣ ನೀಡುತ್ತಾ ಬಂದಿದೆ. ೧೮೯೨ ರಲ್ಲಿ ಸಂತ ಜೋಸೆಪ್ ಪ್ರಾಥಮಿಕ ಶಾಲೆ ಆರಂಬವಾಗಿತ್ತು. ಆದರ ಮೊದಲೆ ಇಲ್ಲಿಯ ಚರ್ಚಿನ ಜಗಲಿಯಲ್ಲಿ ಜನರಿಗೆ ಶಿಕ್ಷಣ ನೀಡಲಾಗುತಿತ್ತು. ೧೯೩೧ರಲ್ಲಿ ತಾಲೂಕು ಕೆಂದ್ರದ ಹೊರಗಿನ ಮೊತ್ತ ಮೊದಲಿನ ಪ್ರೌಢ ಶಾಲೆ-ಮಿಲಾಗ್ರಿಸ್ ಪ್ರೌಢ ಶಾಲೆ ಪ್ರಾರಂಬವಾಯಿತು. ಆರಂಭದಲ್ಲಿ ಇದು ಆಂಗ್ಲ ಮಾಧ್ಯಮ ಶಾಲೆಯಾಗಿದ್ದು ಸ್ವಾತಂತ್ರ ನಂತರ ಕನ್ನಡ ಮಾದ್ಯಮ ಶಾಲೆಯಾಗಿ ಮಾಡಲಾಯಿತು. ಇದರ ಜೊತೆಗೆ ಎಲ್.ವಿ.ಪಿ ಶಾಲೆಯನ್ನು ಮಿಲಾಗ್ರಿಸ್ ಚರ್ಚಿನ ಆಡಳಿತಕ್ಕೆ ಒಳಪಡಿಲಾಯಿತು. ಈ ಕನ್ನಡ ಮಾದ್ಯಮ ಶಾಲೆಗಳಲ್ಲಿ ಇಂದಿಗೂ ಸಾಕಷ್ಟು ಸಂಖೆಯ ವಿದ್ಯಾರ್ಥಿಗಳಿದ್ದು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ೧೯೬೭ರಲ್ಲಿ ಮಿಲಾಗ್ರಿಸ್ ಕಾಲೇಜನ್ನು ಹಾಗೂ ೧೯೮೧ ರಲ್ಲಿ ಮಿಲಾಗ್ರಿಸ್ ಚರ್ಚಿನ ಮೂರನೇ ಶತಮಾನದ ಆಚರಣೆಯ ಅಂಗವಾಗಿ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

ಕಲ್ಯಾಣಪುರದ ಮಿಲಾಗ್ರಿಸ್ ಚರ್ಚು, ಸಹೋದರತೆ ಹಾಗೂ ಸಹಬಾಳ್ವೆಗೆ ವಿಶೇಷ ಮಹತ್ವ ನೀಡುತ್ತದೆ. ವಿವಿದ ವಿದ್ಯಾರ್ಥಿವೇತನಗಳ ಮೂಲಕ ಬಡ ವಿದ್ಯಾರ್ಥಿಗಳಿಗೆ ಜಾತಿ-ಧರ್ಮ ಬೇದವಿಲ್ಲದೆ ಸಹಾಯ ನೀಡಲಾಗುತ್ತಿದೆ. ಕೊರೋನದಿಂದ ಸಂಕಷ್ಟಗೊಳಗಾದವರಿಗೆ ಸಹಾಯ ಮಾಡಲಾಗಿದೆ. ಮಣಿಪಾಲದ ಶಿಲ್ಪಿ ಡಾ.ಟಿ.ಎಂ.ಎ ಪೈ ಜನ್ಮಸ್ಥಳ ತೋನ್ಸೆ ಈ ಚರ್ಚಿನ ವ್ಯಾಪ್ತಿ ಒಳಗೆ ಇದ್ದು, ಇದು ನಮಗೆ ಹೆಮ್ಮೆಯ ವಿಷಯವಾಗಿದೆ.

ಈಗ ವಂದನೀಯ ವಲೇರಿಯನ್ ಮೆಂಡೋನ್ಸಾರವರು ಚರ್ಚಿನ ರೆಕ್ಟರ್ ಹಾಗೂ ಪ್ರದಾನ ಧರ್ಮಗುರುಗಳಾಗಿಯೂ, ವಂದನೀಯ ಜೊಯ್ ಅನ್ದ್ರದೆ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಿದ್ದಾರೆ. ಮೆಲ್ವಿನ್ ಸಿಕ್ವೆರಾ ಚರ್ಚಿನ ಪಾಲನ ಮಂಡಳಿಯ ಉಪಾದ್ಯಕ್ಷರಾಗಿ ಹಾಗೂ ಎವ್ಜಿನ್ ರೆಬೆಲ್ಲೊ ಕಾರ್ಯದರ್ಶಿಗಳಾಗಿ ಸೇವೆ ನೀಡಿತಿದ್ದಾರೆ.

 

 

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.