Skip to main content
www.kallianpur.com | Email : kallianpur7@gmail.com | Mob : 9741001849

ಕೊಂಕಣಿ ನಾಟಕ ಸಭಾ ಮಂಗಳೂರು ಎಂಬತ್ತರ ಸಂಭ್ರಮ

By February 21, 2023News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

ಕೊಂಕಣಿ ಭೀಷ್ಮಎರಿಕ್‌ಒಝೋರಿಯೋಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರದಾನ

ಮುಂಬಯಿ (ಆರ್‌ಬಿಐ), ಫೆ.೨೦: ಕೊಂಕಣಿ ನಾಟಕ ಸಭಾ ಮಂಗಳೂರು ಇದರ ಎಂಬತ್ತು ವರುಷದ ಸಂಭ್ರಮವನ್ನು ಕೊಂಕಣಿ ಭಾಷೆ ಸಂಸ್ಕೃತಿ ಹಾಗೂ ಭೀಷ್ಮಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರದಾನಿಸುವುದರೊಂದಿಗೆ ಸಂಭ್ರಮವು ಕಳೆದ ಭಾನುವಾರ (ಫೆ.೧೯) ಸಂಜೆ ಮಂಗಳೂರು ಅಲ್ಲಿನ ಡೋನ್ ಬೋಸ್ಕೋ ಸಭಾಂಗಣದಲ್ಲಿ ಸಂಭ್ರಮಿಸಿತು.

ವಂದನೀಯ ಧರ್ಮಗುರು ರೆ| ಫಾ| ರೋಕಿ ಡಿ ಕುನ್ಹಾ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಮಾಜಿ ಶಾಸಕ ಜೆ.ಆರ್ ಲೋಬೋ, ದಾಯ್ಜಿವಲ್ಡ್ ಮೀಡಿಯಾ ಇದರ ಸಂಸ್ಥಾಪಕ ವಾಲ್ಟರ್ ನಂದಳಿಕೆ, ರೋಶನ್ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕ ರೋಹನ್ ಮೋತೆರೋ ಉಪಸ್ಥಿತರಿದ್ದು ಮಾಂಡ್ ಸೊಭಾಣ್ ಸಂಸ್ಥಾಪಕ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.

ಸಂಭ್ರಮ ಪ್ರಯುಕ್ತ ಪುಟ್ಟಮಕ್ಕಳಿಗಾಗಿ ಬೇಬಿ ಶೋ, ವಿವಾಹಿತ ಜೋಡಿಗಳಿಗೆ ಭಾರತದ ಸಂಪ್ರದಾಯದ ಉಡುಗೆತೊಡುಗೆ ಮತ್ತು ನೃತ್ಯ ಸ್ಪರ್ಧೆ ಮತ್ತು ಕೇಕ್ ತಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅತಿಥಿಗಳು ಸ್ಪರ್ಧಾ ವಿಜೇತರಿಗೆ ಟ್ರೋಫಿಗಳನ್ನು ನೀಡಿ ಗೌರವಿಸಿದರು.

ಜೆರಾಲ್ಡ್ ಕೊನ್ಸೆಸೊ, ಕ್ಲಿಟಸ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದು ಕೊಂಕಣಿ ನಾಟಕ ಸಭಾ ಉಪಾಧ್ಯಕ್ಷ ಲಿಸ್ಟನ್ ಡಿಸೋಜಾ ಸ್ವಾಗತಿಸಿದರು. ಅಲೋಶಿಯಸ್ ಡಿಸೋಜಾ ಮತ್ತು ಸುನೀಲ್ ಮಿನೇಜಸ್ ಅವರು ಒಝೋರಿಯೋ ಅವರನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು. ಮನು ಬಂಟ್ವಾಳ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಫ್ಲೊಯ್ಡ್ ಡಿಮೆಲ್ಲೊ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.