Skip to main content
www.kallianpur.com | Email : kallianpur7@gmail.com | Mob : 9741001849

ಘಾಟ್ಕೋಪರ್‌ನಲ್ಲಿ ಕೊಂಕಣಿ ಸಭಾ ಮುಲುಂಡ್ ಆಯೋಜಿತ ಕೊಂಕ್ಣಿ ದಾಬಾಜೊ ಸಂಗೀತವು ಮನಸ್ಸುಗಳ ಸ್ವಸ್ಥತೆಗೆ ಮದ್ದಾಗಿದೆ : ಫಾ| ವಿನೋದ್ ಮಸ್ಕರೇನ್ಹಾಸ್

By February 20, 2023Kannada News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.೧೯: ಸಂಗೀತವು ಮನಸ್ಸುಗಳ ಸ್ವಸ್ಥತೆಗೆ ಮದ್ದಾಗಿದೆ. ಅದೂ ಮಾತೃ ಭಾಷೆಯ ಇಂಪಾದ ಹಾಡುಗಳು ಮನ ಸೇರಿದಾಗ ಹೃನ್ಮನÀಗಳು ಆನಂದಧಾಮಗಳಲ್ಲಿ ಸಂತುಷ್ಟ ಪಡುವಂತಾಗುತ್ತವೆ ಎಂದು ದಯಾ ಸ್ಪೆಶಿಯಲ್ ಚಿಲ್ಡ್ರನ್ ಸ್ಕೂಲ್ ಬೆಳ್ತಂಗಡಿ ಇದರ ನಿರ್ದೇಶಕ ರೆ| ಫಾ| ವಿನೋದ್ ಮಸ್ಕರೇನ್ಹಾಸ್ ತಿಳಿಸಿದರು.

ಇಂದಿಲ್ಲಿ ರವಿವಾರ ಪೂರ್ವಾಹ್ನ ಘಾಟ್ಕೋಪರ್ ಪೂರ್ವದ ಝವೆರ್‌ಬೆನ್ ಪೊಪಟ್‌ಲಾಲ್ ಸಭಾಗೃಹದಲ್ಲಿ ಕೊಂಕಣಿ ಸಭಾ (ರಿ.) ಮುಲುಂಡ್ ಆಯೋಜಿಸಿದ್ದ ಕೊಂಕ್ಣಿ ದಾಬಾಜೊ ಕಾರ್ಯಕ್ರಮವನ್ನುದ್ದೇಶಿಸಿ ಫಾ| ಮಸ್ಕರೇನ್ಹಾಸ್ ಅವರು ಮಂಗಳೂರುನ ಹೆಸರಾಂತ ಗಾಯಕಿ ವೆಲಿಟಾ ಸಿಬೊನ್ ಲೊಬೋ ಇವರಿಗೆ ಕೊಂಕಣ್ ಸ್ಟಾರ್ ಬಿರುದು ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.

ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸಾರಥ್ಯದಲ್ಲಿ ಜರುಗಿದ ಕೊಂಕ್ಣಿ ದಾಬಾಜೊ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಬಾಲಿವುಡ್‌ನ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂ ರು, ದಿವೋ ವಾರಪತ್ರಿಕೆಯ ಸಂಪಾದಕ ಲಾರೇನ್ಸ್ ಕುವೆಲ್ಲೋ, ಸೆಕ್ಯುಲರ್ ಸಿಟಿಝನ್ ಸಾಪ್ತಾಹಿಕದ ಪ್ರಕಾಶಕಿ ಸುಜನ್ಹಾ ಕುವೆಲ್ಲೋ, ಕೊಂಕಣ್ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ವಾಲ್ಟರ್ ಡಿಸೋಜಾ ಜೆರಿಮೆರಿ ಉಪಸ್ಥಿತರಿ ದ್ದು ಶುಭಾರೈಸಿದರು.

ಕೊಂಕಣಿ ಸಭಾದ ಉಪಾಧ್ಯಕ್ಷ ಫೆಲಿಕ್ಸ್ ಬರ‍್ನ್ಸ್ ಬಾರ್ಕೂರು, ಕೋಶಾಧಿಕಾರಿ ಗಿಲ್ಬರ್ಟ್ ಫುರ್ಟಾಡೊ, ಜತೆ ಕಾರ್ಯದರ್ಶಿ ಫಿದೆಲೇಸ್ ಫೆರ್ನಾಂಡಿಸ್, ಜತೆ ಕೋಶಾಧಿಕಾರಿ ಫ್ರಾನ್ಸಿಸ್ ಡಿಸೋಜಾ ವೇದಿಕೆಯಲ್ಲಿದ್ದರು.

ಸಭಾದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೆನ್ರಿ ಡಿಸೋಜಾ, ಪಾಸ್ಕಲ್ ಫೆರ್ನಾಂಡಿಸ್, ಜುಲಿಯಾ ಚೆನ್, ಸೈಮನ್ ಗೋಮ್ಸ್, ರಿಚ್ಚರ್ಡ್ ಲುವಿಸ್, ಬೆನೆಡಿಕ್ಟಾ ಡಿಸೋಜಾ, ರುಜಾಯ್ ಫೆರ್ನಾಂಡಿಸ್, ಮೆಲ್ವಿನ್ ಫೆರ್ನಾಂಡಿಸ್, ಕೊಂಕಣ್ ಚಾರಿಟೇಬಲ್ ಟ್ರಸ್ಟ್ನ ಕೋಶಾಧಿಕಾರಿ ಪ್ರಿತೇಶ್ ಕಾಸ್ತೆಲಿನೋ, ಜತೆ ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ ಮತ್ತಿತರರು ಉಪಸ್ಥಿತರಿದ್ದರು.

ವೆಲಿಟಾ ಲೊಬೋ ಮತ್ತು ತಂಡವು ಸಂಗೀತ ಕಾರ್ಯಕ್ರಮ ಮತ್ತು ಬಿಂದಾಸ್ ಪೆರ್ನಾಲ್ ತಂದವು ಮನೋರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಲೆವಿನ್ ಫೆರ್ನಾಂಡಿಸ್ ಜೆರಿಮೆರಿ, ಮ್ಯಾನುವೆಲ್ ಫೆರ್ನಾಂಡಿಸ್, ಪ್ರೀತಂ ಮಚಾದೋ, ಶಲ್ಡನ್ ವೇಗಸ್, ಸಿಲ್ವಿಯಾ ಫೆರ್ನಾಂಡಿಸ್, ಆ್ಯಂಡ್ರಿಯಾ ಸುವಾರಿಸ್ ಮರೋಲ್, ಅಭಿಗೇಲ್ ಮುಂತಾದ ಕಲಾವಿದರು ಕೊಂಕಣಿ ಸಂಗೀತ ಪ್ರಸ್ತುತ ಪಡಿಸಿದರು. ಸಂದೀಪ್ ಡೆವಿಡ್ ರೋಚ್ ಸಂಗೀತವನ್ನಿತ್ತರು. ಲಿಯೋ ಫೆರ್ನಾಂಡಿಸ್ ಸ್ವಾಗತಿಸಿದರು. ಸಭಾದ
ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚವನ್ನು ನೀಡಿ ಗೌರವಿಸಿದರು. ಅಧ್ಯಕ್ಷರು ಸ್ಮರಣಿಕೆಯನ್ನಿತ್ತು ಕಲಾವಿದರಿಗೆ ಗೌರವಿಸಿದರು. ಸಿರಿಲ್ ಕಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿ ಆಭಾರ ಮನ್ನಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.