Skip to main content
www.kallianpur.com | Email : kallianpur7@gmail.com | Mob : 9741001849

ನಾಸಿಕ್ ; ಬ್ರಹ್ಮ ಶ್ರೀ ನಾರಾಯಣ ಗುರುಗಳ ದಶವಾರ್ಷಿಕೋತ್ಸವ ಸಂಭ್ರಮಿಸಿದ ಬಿಲ್ಲವರ ಸೇವಾ ಸಂಸ್ಥೆ ನಾಸಿಕ್

By January 16, 2023Uncategorized

ಮುಂಬಯಿ (ಆರ್‌ಬಿಐ), ಡಿ.೧೪: ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಕಳೆದ ಭಾನುವಾರ (ಡಿ.೧೧) ನಾಸಿಕ್ ಗಿರ್ನಾರೆ ಜಿಪಿ ಫಾರ್ಮ್ನಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೦ನೇ ವಾರ್ಷಿಕೋತ್ಸವವನ್ನು ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯಿಂದ ಅದ್ದೂರಿಯಾಗಿ ಜರುಗಿಸಿತು.

ಬಿಲ್ಲವ ಸೇವಾ ಸಂಸ್ಥೆ ಇದರ ಸದಸ್ಯರಲ್ಲದೆ, ಶ್ರೀ ನಾರಾಯಣ ಗುರು ಟ್ರಸ್ಟ್ (ಎಸ್‌ಎನ್‌ಜಿಟಿ) ನಾಸಿಕ್, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಸತ್ಪುರ ನಾಸಿಕ್ ಮತ್ತು ಇತರ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಬೆಳಿಗ್ಗೆ ಗಣಹೋಮ ಮತ್ತು ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ನಂತರ ಪಂಚಾಭಿಷೇಕ ಪೂರೈಸಿ ಶ್ರದ್ಧಾಭಕ್ತಿಯಿಂದ ಗುರುಪೂಜೆ ನಡೆಸಲಾಗಿದ್ದು ನೆರೆದ ಭಕ್ತರು ಭಕ್ತಿಗೀತೆಗಳನ್ನು ಹಾಡಿದರು. ಮಹಾರತಿಯ ನಂತರ ಭಕ್ತರಿಗೆ ಮಹಾಪ್ರಸಾದವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜನಕಲ್ಯಾಣ ಬ್ಲಡ್ ಬ್ಯಾಂಕ್ ರಕ್ತದಾನ ಶಿಬಿರವೂ ನಡೆಸಿದ್ದು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ಎಸ್‌ಎನ್‌ಜಿ ಟ್ರಸ್ಟ್ ಮತ್ತು ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಹಿರಿಯ ಸದಸ್ಯರನ್ನು ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಅಧ್ಯಕ್ಷ ಗಂಗಾಧರ ಕೆ.ಅಮೀನ್ ಸನ್ಮಾನಿಸಿದರು.

ಜಯಾನಂದ ಪೂಜಾರಿ ಅವರು ಹವನ, ಅಭಿಷೇಕ, ರಮೇಶ್ ಕರ್ಕೇರ ಅವರು ಪೂಜಾಕಾರ್ಯಗಳನ್ನು ನೆರವೇರಿಸಿದರು. ದಾಮೋದರ ಪೂಜಾರಿ, ಗೋಪಾಲ್ ಪೂಜಾರಿ, ರಘುನಾಥ ಅಮೀನ್, ಕುಶಾಲ ಪೂಜಾರಿ, ಭಾಸ್ಕರ್ ಸಾಲಿಯಾನ್, ರತ್ನಕುಮಾರ್ ಕುದ್ರೋಳಿ, ನಾಗೇಶ್ ಪೂಜಾರಿ, ದೀಪಕ್ ಸಾಲಿಯಾನ್, ಮೋಹನ್ ಕರ್ಕೇರ, ಉದಯ ಪೂಜಾರಿ, ಲಕ್ಷ÷್ಮಣ ಅಮೀನ್, ರಾಮಕೃಷ್ಣ ಪೂಜಾರಿ, ಆನಂದ ಪೂಜಾರಿ, ಬಾಲಚಂದ್ರ ಕೋಟ್ಯಾನ್, ಪ್ರಮೀಳಾ ಜಿ.ಅಮೀನ್ ಮತ್ತು ಮಹಿಳಾ ಮಂಡಳಿ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.