Skip to main content
www.kallianpur.com | Email : kallianpur7@gmail.com | Mob : 9741001849

ಪ್ರಥಮ ಚಿಕಿತ್ಸೆ ವೈದ್ಯಕೀಯ ನೆರವು ಮಾತ್ರವಲ್ಲ ಮಾನವೀಯತೆಯ ಪ್ರತೀಕ : ಡಾ| ಕೀರ್ತಿ

By September 23, 2022November 4th, 2022News

ದೈನಂದಿನ ಬದುಕಿನಲ್ಲಿ ಅಪಘಾತಗಳು ಎಲ್ಲಿ ಬೇಕಾದರೂ ನಡೆಯಬಹುದು ಕೇವಲ ರಸ್ತೆಯಲ್ಲಿ ಮಾತ್ರವಲ್ಲ ಮನೆ, ಮೈದಾನ ಸಮಾರಂಭ ,ಪೂಜಾ ಸ್ಥಳಗಳಲ್ಲಿ ಕೂಡ . ಈ ಸಂದರ್ಭದಲ್ಲಿ ಗಾಯಾಳುವಿಗೆ ಧೈರ್ಯ ತುಂಬಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದಲ್ಲಿ ಜೀವ ಉಳಿಸಬಹುದು. ದೊಡ್ಡ ಗಂಡಾಂತರದಿಂದ ಪಾರು ಮಾಡಬಹುದು .ಪ್ರಥಮ ಚಿಕಿತ್ಸೆ ಕೊಟ್ಟು ವೈದ್ಯರ ಬಳಿ ತರುವುದು. ನಾವು ಮಾಡುವ ವೈದ್ಯಕೀಯ ನೆರವು ಮಾತ್ರವಲ್ಲ ನಮ್ಮ ಮಾನವೀಯತೆ ಎತ್ತಿ ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧಿಕೃತ ಪ್ರಥಮ ಚಿಕಿತ್ಸೆ ತರಬೇತುದಾರೆ ಡಾ| ಕೀರ್ತಿ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕ ಫ್ರೌಢ ಶಾಲಾ ವಿದ್ಯಾರ್ಥಿಗÀಳಿಗೆ ಆಯೋಜಿಸಿದ ಪ್ರಥಮ ಚಿಕಿತ್ಸೆಯ ಮಹತ್ವ ತರಬೇತು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಪ್ರಾತಕ್ಷಿಕೆಗಳ ಮೂಲಕ ತರಬೇತಿ ನೀಡಿದರು. ಮೂಳೆಮುರಿತ ಗುರುತಿಸುವಿಕೆ, ಪಟ್ಟಿ ಕಟ್ಟುವ ಕ್ರಮ, ಕೃತಕ ಉಸಿರಾಟ ನೀಡುವಿಕೆ ,ಗಾಯಾಳುವಿಗೆ ಧೈರ್ಯ ನೀಡುವ ರೀತಿ ಗಾಯಾಳುವಿನ ಸುತ್ತ ಗಾಳಿ ಬೆಳಕಿನ ಅಗತ್ಯತೆ ,ಮಲಗಿಸುವ, ಕುಳಿತು ಕೊಳ್ಳಿಸುವ ಭಂಗಿಗಳ ಬಗ್ಗೆ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಉಡುಪಿ ಜಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಭಾಗ್ಯಶ್ರೀ,ಶಿಕ್ಷಕಿಯರಾದ ಜಾನೆಟ್ ,ಲವೀನಾ ,ಮೀನಾ ಉಪಸ್ಥಿತರಿದ್ದರು. ಶಾಲಾ ಘಟಕದ ನಿರ್ದೆ಼ಶಕಿ ನ್ಯಾನ್ಸಿ ಸ್ವಾಗತಿಸಿದರು. ವಿದ್ಯಾರ್ಥಿನಿಯಾದ ದೀಯಾ ನೇತ್ರಾ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.