Skip to main content
www.kallianpur.com | Email : kallianpur7@gmail.com | Mob : 9741001849

ಮಲಬಾರ್ ವಿಶ್ವರಂಗ ಪುರಸ್ಕಾರ-೨೦೨೩ಕ್ಕೆ ಹಿರಿಯ ರಂಗನಟ ಮೋಹನ್ ಮಾರ್ನಾಡ್ ಆಯ್ಕೆ

By March 1, 2023Mumbai News

(ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಮಾ.೦೧: ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ ೨೦೨೩ನೇ ಸಾಲಿನ ಮಲಬಾರ್ `ವಿಶ್ವರಂಗ ಪುರಸ್ಕಾರಕ್ಕೆ ರಾಜ್ಯ ಮತ್ತುಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.

ಮುಂಬಯಿ ಅಲ್ಲಿನ ಹಿರಿಯ ರಂಗನಟ ಮೋಹನ್ ಮಾರ್ನಾಡ್(ಹೊರ ರಾಜ್ಯ), ಮೂರ್ತಿ ದೇರಾಜೆ (ರಂಗನಿರ್ದೇಶಕರು), ಶೋಭಾ ವೆಂಕಟೇಶ್ , ಬೆಂಗಳೂರು (ಮಕ್ಕಳ ರಂಗಭೂಮಿ) , ಎಂ.ಎಸ್. ಭಟ್ ಉಡುಪಿ ( ರಂಗನಟ), ಪ್ರಕಾಶ್ ನೊರೋನ್ಹ ಪಾಂಬೂರು (ರಂಗಸಂಘಟಕರು) ಇವರು ಆಯ್ಕೆ ಆಗಿದ್ದಾರೆ. ಮಾರ್ಚ್ ೨೬ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಸುತ್ತಿರುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ `ಮಲಬಾರ್ ವಿಶ್ವರಂಗ ಪುರಸ್ಕಾರ-೨೦೨೩ ಪ್ರದಾನ ಮಾಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.