Skip to main content
www.kallianpur.com | Email : kallianpur7@gmail.com | Mob : 9741001849

ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣಪುರದಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ.

By January 30, 2023February 2nd, 2023News

ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣಪುರದಲ್ಲಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ರವರನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಗೌರವವನ್ನು ಸಲ್ಲಿಸಲಾಯಿತು. ಶಾಲಾ ಸಂಚಾಲಕರಾದ ಅತೀ ವಂದನೀಯ ವಲೇರಿಯನ್ ಮೆಂಡೋನ್ಸರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಧ್ವಜಾರೋಹಣ ಮಾಡಿ, ಈ ದಿನದ ಸಂದೇಶವನ್ನು ನೀಡಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೇಲ್ವಿನ್ ಸಿಕ್ವೇರಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಿಚ್ಚರ್ಡ್ ಸಲ್ಡಾನ್ಹ, ಪಾಲನಾ ಮಂಡಳಿಯ ಸದಸ್ಯರು, ಶಿಕ್ಷಕ ಶಿಕ್ಷಕೇತರರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆರೆದ ಸರ್ವರಿಗೂ ಕಲ್ಯಾಣಪುರ ಡಾಟ್ ಕಾಂ. ನ ಮಾಲಕರಾದ ಶ್ರೀ ಪ್ರಶಾಂತ್ ಫರಾಯಸ್ ರವರು ಸಿಹಿತಿಂಡಿಯನ್ನು ವಿತರಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.