Skip to main content
www.kallianpur.com | Email : kallianpur7@gmail.com | Mob : 9741001849

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ೩೦ರ ನೆನಪು ವಿಚಾರ ಸಂಕಿರಣ ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ, ಸಂವಾದ

By February 25, 2023Mumbai News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಫೆ.೨೪ ಬಂಟ್ವಾಳ ಬಿ.ಸಿ.ರೋಡು ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ೩೦ರ ನೆನಪು ವಿಚಾರ ಸಂಕಿರಣ ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ-ತಜ್ಞ ಸಂವಾದ ಕಾರ್ಯಕ್ರಮ ಗುರುವಾರ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ಹೇಮಾವತಿ ವಿ. ಹೆಗ್ಗಡೆ ವಿಚಾರ ಸಂಕಿರಣ ಉದ್ಘಾಟನೆ ಗೈದು ಕೃತಿಕಾರರಾದ ಡಾ. ಪಿ.ಎನ್ ನರಸಿಂಹ ಮೂರ್ತಿ ಅವರ ಅಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಮತ್ತು ಐಗಳ್ ಎಂಬ ದ.ಕ. ಇತಿಹಾ ಸದ ದಂತಕಥೆ ಎಂಬ ಎರಡು ಕೃತಿಗಳ ಬಿಡುಗಡೆಗೊಳಿಸಿದರು.

ಡಾ| ಹೇಮಾವತಿ ಮಾತನಾಡಿ ಕೃಷಿಯ ಬಗ್ಗೆ ಆಳ- ಅರಿವು ತಿಳಿಯದವರಿಂದ ನಷ್ಟವುಂಟಾಗುತ್ತಿದೆ. ವಿದ್ಯಾವಂತರು ಕೃಷಿಗೆ ಬಂದರೆ ಕೃಷಿಯಲ್ಲಿ ಅಭಿವೃದ್ಧಿಯೊಂದಿಗೆ ಆದಾಯ ಪಡೆಯಲು ಸಾಧ್ಯವಿದೆ. ಕೃಷಿ ಸಂಸ್ಕ್ರತಿ ನಾಶವಾಗಿರುವುದರಿಂದ ಹಿಂದಿನ ತಲೆಮಾರಿನ ವಸ್ತುಗಳು ಮ್ಯೂಸಿಯಂ ವಸ್ತುಗಳಾಗಿವೆ. ದಿನಬಳಕೆ ವಸ್ತುಗಳು ಪ್ಲಾಸ್ಟಿಕ್ ಆಗಿ ಬಳಯಾಗುತ್ತಿದೆ .ಅವಿಭಕ್ತ ಕುಟುಂಬ ದ ಕಲ್ಪನೆಯನ್ನು ಕಟ್ಟಿಕೊಡಲು ಇಂತಹ ವಸ್ತು ಸಂಗ್ರಹಾಲಯಗಳು ಸಹಕಾರಿಯಾಗಿದೆ ಎಂದರು.

ವಸ್ತು ಸಂಗ್ರಹಾಲಯದಲ್ಲಿ ಹಳೇ ವಸ್ತುಗಳ ಸಂಗ್ರಹಣೆಯ ಜೊತೆಗೆ ಅದರ ಸಂರಕ್ಷಣೆಯು ಅಗತ್ಯವಾಗಿದ್ದು, ಡಾ. ತುಕಾರಾಮ ಅವರ ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ರಾಣಿ ಅಬ್ಬಕ್ಕಳ ಸಾಹಸ ಕಥನದ ಚಿತ್ರಗಳ ಜೊತೆಗೆ ತುಳು ಸಂಸ್ಕ್ರತಿಗೆ ಮರುಜೀವ ತುಂಬುವ ಕಾರ್ಯ ನಡೆದಿದೆ.

ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರೆ, ವಿದ್ವಾಂಸರಿಗೆ ಜ್ಞಾನ ಭಂಡಾರದ ಕೇಂದ್ರ ರೂಪುಗೊಂಡಿದೆ ಎಂದರು. ತುಳುನಾಡಿನ ವೈವಿಧ್ಯತೆಯ ಬದುಕು ಏಕತೆಕಡೆಗೆ ಹೋಗುತ್ತಿರುವುದರಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದೆ.ಬೇಡವೆಂದು ಮೂಲೆಗೆ ಬೀಸಾಕಿರುವಂತಹ ವಸ್ತುಗಳನ್ನು ಪ್ರಸ್ತುತ ದಿನಗಳಲ್ಲಿನೋಡುವುದೇ ಸೊಬಗು, ಡಾ.| ತುಕರಾಮ ದಂಪತಿ ತಮ್ಮ ಬದುಕನ್ನೇ  ವಸ್ತು ಸಂಗ್ರಹಾಲದ ಏಳಿಗೆಗೆ ಮೀಸಲಿಟ್ಟಿರು ವುದು ಅಭಿನಂದನೀಯ ಎಂದ ಅವರು ಈ ಸಂಗ್ರಹಾಲಯದ ಸಂಪತ್ತು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕತಾರ್ ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಅತಿಥಿ ಯಾಗಿ ಭಾಗವಹಿಸಿ ಡಾ.ತುಕರಾಮ ದಂಪತಿಗಳಿಂದ ಕಳೆದ ಮೂರು ದಶಕಗಳ ಪರಿಶ್ರಮ, ಸಾಧನೆ, ಇಚ್ಚಾಶಕ್ತಿಯ ಫಲವಾಗಿ ತುಳುಬದುಕು ವಸ್ತು ಸಂಗ್ರಾಹಾಲಯ ಅದ್ಬುತವಾಗಿ ಮೂಡಿ ಬಂದಿದ್ದು, ತುಳುನಾಡಿನ ಸಮಗ್ರ ಬದುಕು ಇಲ್ಲಿನ ವಸ್ತು ಸಂಗ್ರಹಾಲದಲ್ಲಿ ಪರಿಚಯವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ, ಉಡುಪಿ ಎಂಜಿಎಂ ಕಾಲೇಜ್ ನ ನಿವೃತ್ತ ಪ್ರಾಂಶುಪಾಲ ಡಾ| ಪಿ.ಎನ್ ನರಸಿಂಹಮೂರ್ತಿ ಸರ್ವಾಧ್ಯಕ್ಷತೆ ವಹಿಸಿದ್ದರು. ಹಿರಿಯ ಇತಿಹಾಸ ಸಂಶೋಧಕ ಡಾ| .ಪಿ.ಎನ್. ನರಸಿಂಹಮೂರ್ತಿ ಹಾಗೂ ಎಸ್. ವಿ.ಎಸ್ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ. ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಂ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆಗೈದು ವಿದ್ಯಾರ್ಥಿ ಸಮೂಹ, ಸಹಪಾಠಿಗಳು,ಸ್ಥಳೀಯರ ಸಹಿತ ನೂರಾರು ಮಂದಿಯ ಸಹಕಾರದಿಂದ ಸಂಸ್ಥೆ ಅಭಿವೃದ್ಧಿಯನ್ನು ಕಂಡಿದೆ. ಅಂತರಾಷ್ಟ್ರೀಯ ಮಟ್ಟದ ಚಿತ್ರಣಗಳು ಕೇಂದ್ರದಲ್ಲಿದ್ದು,ಆಸಕ್ತರು ಮಾತ್ರವಲ್ಲ ಇತಿಹಾಸಕಾರರು ಕೂಡ ಅಧ್ಯಯನಕ್ಕಾಗಿ ದೇಶ, ವಿದೇಶಗಳಿಂದ ಬರುತ್ತಿದ್ದಾರೆ. ವಸ್ತುಸಂಗ್ರಹಾಲಯವನ್ನು ಕೇವಲ ಅಬ್ಬಕ್ಕನ ಗ್ಯಾಲರಿಗೆ ಸೀಮಿತಗೊಳಿಸದೆ ಚರಿತ್ರೆ, ಸಾಂಸ್ಕ್ರತಿಕ ಚಟುವಟಿ ಕೆಗಳು ನಿರಂತರವಾಗಿ ನಡೆಯುತ್ತಿದೆ. ಅನೇಕ ಕಣ್ಮರೆಯಾಗುತ್ತಿರುವ ವಸ್ತುಗಳು, ಕುರುಹು ಗಳನ್ನು ಜತನದಿಂದ ಸಂರಕ್ಷಿಸುವ ಕಾರ್ಯ ಇಲ್ಲಿ ಮಾಡಲಾಗಿದೆ ಎಂದರು.

ಪತ್ರಕರ್ತೆ ನವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಕಾರ್ಯದರ್ಶಿ ಡಾ| ಆಶಾಲತಾ ಎಸ್.ಸುವರ್ಣ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.