Skip to main content
www.kallianpur.com | Email : kallianpur7@gmail.com | Mob : 9741001849

ಮಾರ್ಚ್-೦೨: ಐಲೇಸಾ ಜೂಮ್‌ನಲ್ಲಿ ಆರ್ಟಿಫೀಶಿಯಲ್ ಇಂಟೆಲಿಜನ್ಸ್ ಅರಿವು ಕೃತಕ ಬುದ್ದಿಮತ್ತೆ (ಎಐ) ಮುಂದಿನ ಅನಿವಾರ್ಯತೆ ವಿಚಾರ ಮಂಡನೆ.

By February 28, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್) 

ಮುಂಬಯಿ (ಆರ್‌ಬಿಐ), ಫೆ.೨೭: ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ ಆ ವೇಗಕ್ಕೆ ಹೊಂದಿಕೊಂಡು ನಮ್ಮ ವೃತ್ತಿ ಪ್ರವೃತ್ತಿ ಗಳನ್ನು ಬದಲಾಯಿಸಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯ ಗಳಲ್ಲಿ ಒಂದು. ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಯಾವ ಮಟ್ಟದಲ್ಲಿ ಮುಂದುವರಿದು ಇಡೀ ವಿಶ್ವಕ್ಕೆ ಬೆರಗನ್ನು ಹುಟ್ಟಿಸಿತು ಅನ್ನುವುದು ಈಗ ಇತಿಹಾಸ.

ಮುಂದಿನ ದಿನಗಳು ತಾಂತ್ರಿಕತೆಯ ಜೊತೆಗೆ ಅತ್ಯಂತ ವೇಗವಾಗಿ ಬದಲಾಗುವಂತಹುದು. ಯುವಜನರು ತುಂಬಿ ರುವ ಭಾರತ ಈ ಬದಲಾವಣೆಗಳನ್ನು ಅಪ್ಪಿಕೊಳ್ಳುವುದು ಬಲು ಸುಲಭ. ಒಂದಿಷ್ಟು ಪೂರ್ವ ತಯಾರಿಯೊಂದಿಗೆ ನಾವು ನಮ್ಮ ಯುವಸಂಪತ್ತನ್ನು ಈ ದಿಸೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಿದರೆ ಪ್ರಪಂಚ ಅನಿವಾ ರ್ಯವಾಗಿ ಭಾರತದತ್ತ ತಿರುಗಿ ನೋಡದೆ ಅನ್ಯಥಾ ವಿಧಿಯಿಲ್ಲ.

ವೃತ್ತಿಯ ಜೊತೆ ಜೊತೆಗೆ ಸಂಗೀತ ಸಾಹಿತ್ಯ ಮುಂತಾದ ಪ್ರವೃತ್ತಿ ಯಲ್ಲಿಯೂ ಕೃತಕ ಬುದ್ದಿಮತ್ತೆಯ (ಎಐ) ಇದರ ಅವಲಂಬನೆ ಅನಿವಾರ್ಯ ವಾಗಿರುವುದರಿಂದ ಅದಕ್ಕಾಗಿ ನಾವು ಈಗಿಂ ದೀಗಲೆ ಸಜ್ಜಾಗುವುದು ಅಗತ್ಯ. ಈ ವಿಷಯದಲ್ಲಿ ಒಂದಿಷ್ಟು ವಿಚಾರ ಮಂಡನೆ, ಅನುಭವ ಹಂಚಿಕೆ ಮತ್ತು ಸಂವಾದ ಮೂಲಕ ಜನಜಾಗೃತಿ ಮೂಡಿಸಲು ಐಲೇಸಾ ಇದರ ಜೂಮ್ ವೇದಿಕೆ ಯಲ್ಲಿ ಇಬ್ಬರು ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳಾದ ಇಂಡಿಯನ್ ಇನ್‌ಸ್ಟಿ ಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಾಜಿ ಧಾರವಾಡ ಇಲ್ಲಿನ ಸಂಶೋಧನಾ ವೃತ್ತಿಯ ಯುವ ಪ್ರತಿಭೆ ಪ್ರದ್ಯೋತ್ ಹೆಗ್ಡೆ ಮತ್ತು ಎಚ್‌ಕ್ಯೂ ಕನೆಕ್ಷನ್ಸ್ ಪ್ರೆವೇಟ್ ಲಿಮಿಟೆಡ್ ಸಿಂಗಾಪುರ ಅಲ್ಲಿನ ಪ್ರಿನ್ಸಿಪಲ್ ಕನ್ಸಲ್‌ಟೆಂಟ್ ಆಗಿರುವ ಉಡುಪಿ ಮೂಲದ ಉದ್ಯಮಿ ರಾಜೇಶ್ ಆಚಾರ್ಯ ಉತ್ಸುಕರಾಗಿದ್ದು ಇದೇ ಬರುವ ಮಾರ್ಚ್, ೦೨ನೇ  ಶನಿವಾರ ಸಂಜೆ ೭:೩೦ (ಭಾರತದ ಸಮಯ) ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಐಲೇಸಾದ ವಿವೇಕ್ ಮಂಡೆಕರ ನಡೆಸಿ ಕೊಡಲಿದ್ದು ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಸಹಕರಿಸಲಿದ್ದಾರೆ.

ಉದ್ಯೋಗಾಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಅವಶ್ಯಕ ಕಾರ್ಯಕ್ರಮವಾಗಿದ್ದು ಪೋಷಕರ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಜೂಮ್ ವೇದಿಕೆ ID :81674349733 ಪಾಸ್ ಕೋಡ್: ilesa ಮೂಲಕ ಭಾಗವಹಿಸಿ ಇದರ ಸದುಪ ಯೋಗ ಪಡೆದು ಕೊಳ್ಳಲು ಐಲೇಸಾ ಮಾಧ್ಯಮ ಸಂಚಾಲಕ ಸುರೇಂದ್ರ ಮಾರ್ನಾಡ್ ವಿನಂತಿಸಿದ್ದಾರೆ .

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.