kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್ಬಿಐ), ಏ. ೧೫: ತುಳು ಭಾಷೆಯ ಉಳಿವಿಗಾಗಿ ಮತ್ತು ಔನ್ನತ್ಯಕ್ಕಾಗಿ ಅಮೆರಿಕಾದ ಎಲ್ಲ ತುಳುವರ ನ್ನು ಸೇರಿಸಿಕೊಂಡು ಸ್ಥಾಪನೆಯಾದ ಆಲ್ ಅಮೆರಿಕಾ ತುಳು ಅಸೋಸಿಯೇಷನ್ (ಆಟ) ಎಂದಿನಂತೆ ಈ ವರ್ಷದ ಬಿಸು ಆಚರಣೆಯನ್ನು ಇದೇ ಬರುವ ಭಾನುವಾರ (ಏಪ್ರಿಲ್.೨೧) ಆಯೋಜಿಸಿದೆ. ಡಿಜಿಟಲ್ ವರ್ಚುಯಲ್ ವೇದಿಕೆ ಯಲ್ಲಿ ನಡೆಯುವ ಈ ಬಿಸು ಪರ್ಬ ಕಾರ್ಯಕ್ರಮ ಅಮೇರಿಕಾದ ಸಮಯ ಬೆಳಿಗ್ಯೆ ೧೧:೦೦ ಗಂಟೆಗೆ ನಡೆಯಲಿದ್ದು ಭಾರತದಲ್ಲಿ ತುಳುವರು ರಾತ್ರಿ ೮;೩೦ ರ ಸಮಯದಲ್ಲಿ ಯೂಟ್ಯೂಬ್ನ ನೇರಪ್ರಸಾರದಲ್ಲಿ https://www.aa tana.org/bisu _parba_2024 ಮೂಲಕ ನೋಡಬಹುದಾಗಿದೆ.
ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಕ್ಷೇತ್ರ ಇವರ ಶುಭ ಅಶೀರ್ವಚನದೊಂದಿಗೆ ಆರಂಭ ವಾಗುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್ಇಟಿಕೆ ಮತ್ತು ಕಲಾತರಂಗಿಣಿ ಸ್ಥಾಪಕ ಹಾಗೂ ಆಟ (ಎಎಟಿಎ) ಸಂಸ್ಥೆಯ ಮಹಾಪೋಷಕ ಅಮೆರಿಕಾದ ಹೆಮ್ಮೆಯ ತುಳುವ ಡಾ| ಸುಧಾಕರ್ ರಾವ್ ಮತ್ತು ತುಳು ಸಂಗೀತ ಸಾಹಿತ್ಯ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಇದರ ಸ್ಥಾಪಕ ಸದಸ್ಯ, ತುಳು ಕನ್ನಡ ಸಾಹಿತಿ ಶಾಂತಾರಾಮ ವಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ವಿದೇಶದಲ್ಲಿರುವ ತುಳು ಯುವಕ ಯುವತಿಯರಿಗೆ ಸಹಾಯಕವಾಗಲೆಂದು ವಿವಾಹ ವೇದಿಕೆ ಯೊಂದನ್ನು ಬಿಡುಗಡೆಗೊಳಿಸಲು ಸಂಸ್ಥೆ ತಯಾರಿ ಮಾಡಿದೆ. ಸಭಾ ಕಾರ್ಯಕ್ರಮದ ನಂತರ ಅಮೇರಿಕಾ ಮತ್ತು ಕೆನಡಾ ದೇಶದ ತುಳುವರು ಸೇರಿ ತುಳುವ ಸಂಸ್ಕ್ರತಿ ಬಿಂಬಿಸುವ ಸುಮಾರು ಎರಡು ಗಂಟೆಗಳ ಕಾಲದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಆಟ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ತಿಳಿಸಿದ್ದಾರೆ .
ದೇಶ ವಿದೇಶದ ಎಲ್ಲ ತುಳುವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಳು ಭಾಷೆಯ ಬೆಳವಣಿಗೆಯಲ್ಲಿ ಸಹಕರಿಸ ಬೇಕೆಂದು AATA ಸಂಸ್ಥೆಯ ಉಪಾಧ್ಯಕ್ಷ ಶಿರಿಶ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪೂಜಾ ಶೆಟ್ಟಿ, ಖಜಾಂಜಿ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ರಂಜನಿ ಅಸೈಗೋಳಿ, ಜೊತೆ ಕೋಶಾಧಿಕಾರಿ ಸುದೀಪ್ ಹೆಬ್ಬಾರ್, ಸಾಂಸ್ಕ್ರತಿಕ ಕಾರ್ಯದರ್ಶಿ ವಿವಸ್ವಾನ್ ಶೆಟ್ಟಿ, ಯುವ ರಾಯಭಾರಿ ಆರ್ಯಮಾನ್ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಮೋಹನ್ ಚಂದ್ರ ಕೆ.ಪಿ. ಹಾಗೂ ಭಾಸ್ಕರ್ ಶೇರಿಗಾರ್ ತಿಳಿಸಿದ್ದಾರೆ
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.