
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ನಾಸಿಕ್), ಎ.೨೭: ಇಲ್ಲಿನ ಧ್ರುವ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿಯರಾದ ಯಶೋಧರ ಲಕ್ಷ್ಮೀಕಾಂತ ನಾಯಿಕವಾಡಿ ಮತ್ತು ಆರಾಧ್ಯ ಜನಾರ್ದನ ಪೂಜಾರಿ ನೃತ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿದ್ದಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ನೃತ್ಯಕಲಾ ಭೂಷಣ ಬಾಲ ಪ್ರಶಸ್ತಿ ೨೦೨೬’ ಕ್ಕೆ ಭಾಜನರಾಗಿದ್ದಾರೆ.
‘ಕಲ್ಚರಲ್ ಫೌಂಡೇಶನ್ ಆಫ್ ಇಂಡಿಯಾ’ ವರ್ಷಂಪ್ರತಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಗಾಗಿ ದೇಶದಾದ್ಯಂತದ ಸಾವಿರಾರು ವಿದ್ಯಾರ್ಥಿ ಗಳು ತಮ್ಮ ಆಯ್ಕೆ ಅದೃಷ್ಟಕ್ಕಾಗಿ ಪ್ರಯತ್ನಿಸಿದ್ದು, ಈ ಪೈಕಿ ಧ್ರುವ ಗ್ಲೋಬಲ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕರಾವಳಿಯ ಬಂಟ್ವಾಳ (ಮಾಣಿ) ನೇರಳೆಕಟ್ಟೆ ನಿವಾಸಿ ಜನಾರ್ಧನ ಪೂಜಾರಿ ಮತ್ತು ಸವಣೂರು ಕಾಣಿಯೂರು ನಿವಾಸಿ ಅಶ್ವಿತಾ ಜೆ.ಪೂಜಾರಿ ದಂಪತಿಯ ೮ನೇ ತರಗತಿ ವಿದ್ಯಾರ್ಥಿನಿ ಕು. ಆರಾಧ್ಯ ಅವರು ಕಷ್ಟಕರವಾದ ಶಾಸ್ತ್ರೀಯ ನೃತ್ಯ ಶೈಲಿಯ ‘ಒಡಿಸ್ಸಿ’ ಯ ಅತ್ಯುತ್ತಮ ನಿರೂಪಣೆಯೊಂದಿಗೆ ತೀರ್ಪುಗಾರರ ಹೃದಯವನ್ನು ಗೆದ್ದಿದ್ದು, ಈಕೆಯ ಲಯ, ಮಯ ನೃತ್ಯಭಂಗಿಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ವಿದ್ಯಾರ್ಥಿಗಳು ತಿಂಗಳ ನಿರಂತರ ಅಭ್ಯಾಸ, ಗಂಟೆಗಳ ಕಠಿಣ ಪರಿಶ್ರಮ ಮತ್ತು ಉತ್ತಮ ಮಾರ್ಗದರ್ಶನ, ಶಾಲೆಯ ನೃತ್ಯ ತರಬೇತು ದಾರರಾದ ಸೋನಾಲಿ ಮಹಾಪಾತ್ರ ಮತ್ತು ಗಂಧರ್ವ ಪಲೈ ಅವರ ಅಮೂಲ್ಯ ತರಬೇತಿ ಈ ಗೌರವಕ್ಕೆ ಕಾರಣವಾಗಿದೆ. ಈ ಪ್ರಶಸ್ತಿಗಳ ವಿತರಣೆಯು ಕಳೆದ ಭಾನುವಾರ (ಎ.೨೬) ನಾಗ್ಪುರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಕಲಾವಿದರನ್ನು ಕಲಾ ಕ್ಷೇತ್ರದ ದಿಗ್ಗಜರು ಹಾಗೂ ಗಣ್ಯರ ಉಪಸ್ಧಿಯಲ್ಲಿ ಕಲ್ಚರಲ್ ಫೌಂಡೇಶನ್‌ನ ನಿರ್ದೇಶಕರುಗಳಾದ ಕುಲ್ದೀಪ್ ಕಗಡೆ ಮತ್ತು ಕುನಾಲ್ ಆನಂದಮ್ ಅವರು ಪ್ರಶಸ್ತಿ ಪತ್ರ, ಗೌರವ ಫಲಕ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ರಾಷ್ಟ್ರೀಯ ಗೌರವದ ಯಶಸ್ಸಿನ ಸಂದರ್ಭದಲ್ಲಿ ಶಾಲೆಯ ಕಾರ್ಯಾಧ್ಯಕ್ಷ ಡಾ.ಸಂಜಯ್ ಮಲ್ಪಾನಿ, ಅಧ್ಯಕ್ಷ ಗಿರೀಶ್ ಮಲ್ಪಾಣಿ, ಪ್ರಾಂಶುಪಾಲೆ ಅರ್ಚನಾ ಘೋರ್ಪಡೆ ಮತ್ತು ಶಿಕ್ಷಕ ವೃಂದವು ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.
Aaradhya Janardhan Poojary is one of the most talented,well-mannered and Respectful girl She is calm and focused,her dance moves have not just bought her medals and awards but also brought her grace and elegance
A girl who have made her parents,teachers,friends,village and all of us feel proud
Wish you Best of Luck Ahead, Keep growing and earning respect,fame,pride and grace
Witnessing Aaradhya since childhood was amazing her behaviour,actions and elegance have always made me feel proud of her
Today when she received such a great Achievement we all are amazed
Her devotion towards dance is inevitable
Her hardwork,loyalty towards dance and dedication have made her shine more brighter
Shine Brighter,Fly higher and Reach the height of success
Remember,Sky is the limit and you will surely reach beyond it
Best of Luck for your future Aaradhya
Stay happy and keep smilling
May you gain more medals and Achievements in the upcoming years
Congratulations Aaradhya