Skip to main content

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ತ್ರಿಶಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ.

By April 22, 2026Kannada News
kallianpurdotcom: Mob 9741001849

ಉಡುಪಿ : ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ  ಅತಿ ಕ್ಲಿಷ್ಟಕರವೆನಿಸಿದ  ಪರೀಕ್ಷೆಗಳಲ್ಲೊಂದಾದ  ಜೆಇಇ ಮೈನ್ಸ್ (ಸೆಷನ್-2) 2026 ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ, ತ್ರಿಶಾ ಪದವಿಪೂರ್ವ ಕಾಲೇಜು, ಕಲ್ಯಾಣಪುರದ  ಎಂಟು ಮಂದಿ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು, ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ.

ವಿದ್ಯಾರ್ಥಿ ನಿನಾದ್ ರಾಜೇಶ್ ನಾಯ್ಕ್ – 98.946358 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ, ಅನುರಾಗ್ ಶಿರಸಾತ್, ಅನುಷ್ಕಾ   ಜನಾರ್, ಉಲ್ಲಾಸ್ ವೈ ಪಾಟೀಲ್, ವೀಕ್ಷಿತ್ ಸದಾಶಿವ ಶೆಟ್ಟಿ, ಬಾಂಧವ್ಯ ಆಚಾರ್ಯ, ನಯನಾ ದುರ್ಗಯ್ಯ ಗೊಂಡ್, ಧನ್ಯಶ್ರೀ ಡಿ. ನಾಯ್ಕ್  ಉತ್ತಮ ಅಂಕಗಳನ್ನು ಪಡೆದುಕೊಂಡು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ.

ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು,ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಪರೀಕ್ಷೆಯ ಸಂಯೋಜಕರಾದ ಶ್ರೀ ವಿನಯ್ ಕುಮಾರ್ ಜೆ. ಪಿ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭ ಹಾರೈಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.