
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಬರೋಡಾ), ಎ.೧೫: ತುಳುವರ ಹೊಸ ವರ್ಷದ ಆರಂಭವೇ ಬಿಸು ಕಣಿ ಆಚರಣೆಯಾಗಿದೆ. ತುಳುವರ ನೂತನ ಸಂವತ್ಸರದ ಆರಂಭವನ್ನು ಬಿಸು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಏಪ್ರಿಲ್ ೧೪ರ ಸುಮಾರಿಗೆ ಆಚರಿಸಲಾಗುತ್ತಿದ್ದು, ಅಂದು ಮುಂಜಾನೆ ಎದ್ದ ಕೂಡಲೇ ‘ಕಣಿ’ ನೋಡುವುದು ಜೀವನದಲ್ಲಿ ಸಮೃದ್ಧಿ, ಸೌಭಾಗ್ಯ ಮತ್ತು ಶುಭವನ್ನು ತರಲಿದೆ ಎಂಬ ನಂಬಿPಯಿದ್ದು, ‘ಕಣಿ’ ಶುಭದ ಸಂಕೇತ ಸಾರುತ್ತದೆ. ಕೃಷಿ ಸಂಸ್ಕೃತಿಗೆ ಸಂಬಂಧಿತ ಈ ಹಬ್ಬವು ಕೃಷಿ ಆಧಾರಿತವಾಗಿದ್ದು, ಹೊಸ ಬೆಳೆಗಾಲದ ಶುಭಾರಂಭವನ್ನೂ ಸೂಚಿಸುತ್ತದೆ. ಆದ್ದರಿಂದ ಮನೆಯಲ್ಲಿರುವ ಹಿರಿಯರು ಕಣಿ ಸಿದ್ಧಪಡಿಸಿ, ಕುಟುಂಬದ ಸದಸ್ಯರಿಗೆ ತೋರಿಸುವುದು ಪಾರಂಪರಿಕ ಸಂಪ್ರದಾಯವಾಗಿದೆ. ಕಣಿಯಲ್ಲಿ ಹಣ್ಣು-ಹಂಪಲುಗಳು, ಧನ, ಧಾನ್ಯ, ಪುಷ್ಫಗಳು, ಕನ್ನಡಕ, ಇತ್ಯಾದಿಗಳನ್ನು ಇಡಲಾಗುತ್ತಿದ್ದು ಇವು ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತಗಳಾಗಿ ತಿಳಿದುಕೊಳ್ಳಗಾಗುತ್ತಿದೆ ಎಂದು ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರ ತಿಳಿಸಿದರು.
ಗುಜರಾತ್ ರಾಜ್ಯದ ಬರೋಡಾ ಇಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ವಾರ್ಷಿಕ ಕಳೆದ ಮಂಗಳವಾರ ತುಳುವರ ಹೊಸ ವರ್ಷ ‘ಬಿಸು ಪರ್ಬ’ವನ್ನು ಸಾಂಪ್ರದಾಯಿಕವಾಗಿ ಆಚರಿಸಿದ್ದು ದಯಾನಂದ ಬೋಂಟ್ರಾ ಸದಸ್ಯರಿಗೆ ಹೊಸ ವರ್ಷದ ಶುಭಕಾಮನೆ ಹಾರೈಸಿ ಮಾತನಾಡಿದರು.
ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಮಾರ್ಗದರ್ಶನದೊಂದಿಗೆ ಸಂಘದ ಸದಸ್ಯರು ನಡೆಸಲ್ಪಟ್ಟ ಧಾರ್ಮಿಕ ಮತ್ತು ಪರಂಪರಿಕಾ ಮೇಳೈಕೆಯಲ್ಲಿ ಭಜನೆ ಕೀರ್ತನೆಯೊಂದಿಗೆ ನೆರವೇರಿಸಲ್ಪಟ್ಟ ‘ಬಿಸು ಪರ್ಬ’ದಲ್ಲಿ ಪ್ರಮೀಳಾ ಶಶಿಧರ್ ಶೆಟ್ಟಿ ನೇತೃತ್ವದ ಮಹಿಳಾ ತಂಡವು, ಕಣಿಪೂಜೆ, ಕಣಿದರ್ಶನ ನಡೆಸಿತು.
ಬಿಸುಕಣಿ ತುಳುವರ ಪರಂಪರೆಯ ಆಚರಣೆಯಾಗಿದ್ದು, ಈ ಹಬ್ಬವು ಕುಟುಂಬ ಸದಸ್ಯರನ್ನು ಒಟ್ಟುಗೂಡಿಸಿ, ಸೌಹಾರ್ದತೆ ಮತ್ತು ಪ್ರೀತಿ ಹೆಚ್ಚಿಸುತ್ತದೆ. ಧಾರ್ಮಿಕ ಮಹತ್ವವುಳ್ಳ ಈ ಸಂಪ್ರದಾಯ ದೇವರಿಗೆ ಪೂಜೆ ಸಲ್ಲಿಸಿ, ಹೊಸ ವರ್ಷದ ಶುಭಾಶಯಗಳನ್ನು ಕೋರಲಾಗುವುದು. ಆದ್ದರಿಂದ ಬಿಸು ಕಾಣಿ ಆಚರಣೆ ತುಳುವರ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಘದ ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ತಿಳಿಸಿದರು.
ಹಿರಿಯ ಸದಸ್ಯರುಗಳಾದ ಕೆ.ಮಾಧವ ಶೆಟ್ಟಿ, ಮಹಾವೀರ್ ಜೈನ್, ಗೌರವ ಖಜಾಂಚಿ ಪಿ.ಬಾಲಚಂದ್ರ ಗೌಡ ವೇದಿಕೆಯಲ್ಲಿದ್ದು ಗುಜರಾತ್ ಮೂಲದವರಾಗಿದ್ದು ಮಂಗಳೂರುನಲ್ಲಿ ಶಿಕ್ಷಣ ಪೂರೈಸಿ ಕೆಲವು ವರ್ಷಗಳಲ್ಲಿ ಕೆಲಸ ನಿರ್ವಾಹಿಸಿದ್ದ ಸತೀಶ್ ಪಟೇಲ್ ಅವರು ತುಳು ಭಾಷೆ ಯಲ್ಲೇ ತುಳುವ ಸಂಸ್ಕೃತಿಯನ್ನು ಪ್ರಶಂಸಿಸಿ ತುಳುವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಸಂಘದ ಸದಸ್ಯರಾಗಿದ್ದು ನಿವೃತ್ತಿ ಜೀವನಕ್ಕಾಗಿ ಮೈಸೂರುಗೆ ನೆಲೆಸಲು ತೆರಳುವ ನಾಗರಾಜ್ ಅವರನ್ನು ಗಣ್ಯರು ಸನ್ಮಾನಿಸಿ ಶುಭಾರೈಸಿದರು.
ದಿನೇಶ್ ಶೆಟ್ಟಿ, ಪ್ರಮೀಳಾ ಶೆಟ್ಟಿ, ಪಲ್ಲವಿ ಶೆಟ್ಟಿ, ಮನೋಹರಿ ಶೆಟ್ಟಿ, ದಿನಕರ್ ಶೆಟ್ಟಿ, ಮದನ್‌ಕುಮಾರ್ ಮೂಡುಗೆರೆ, ಗಣವಿ ಮದನ್ ಗೌಡ, ಕೊರಗಪ್ಪ ಬಂಜನ್, ಡಾ| ಅನಿತಾ ಶೆಟ್ಟಿ, ಸುಭಾಷ್ ಶೆಟ್ಟಿ ಮತ್ತಿತರ ಸದಸ್ಯರು ಪ್ರಧಾನವಾಗಿ ಉಪಸ್ಥಿತರಿದ್ದರು. ಮಹಿಳೆಯರು ಪ್ರಾರ್ಥನೆ ಯನ್ನಾಡಿದರು. ಬಾಲಕೃಷ್ಣ ಎ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಿ.ಬಾಲಚಂದ್ರ ಗೌಡ ವಂದಿಸಿ ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.