Skip to main content

ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

By June 3, 2026Kannada News
kallianpurdotcom: Mob 9741001849

ಕಲ್ಯಾಣಪುರ: ದಿನಾಂಕ 01/06/2026 ರಂದು ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಮಿಲಾಗ್ರಿಸ್ ಪ್ರಧಾನ ದೇವಾಲಯದ ಸಹಾಯಕ ಗುರುಗಳಾಗಿರುವ ವಂದನೀಯ ರಿಕ್ಸನ್ ಮೊಂತೆರೊ, ರೋಟರಿ ಕ್ಲಬ್ ವತಿಯಿಂದ ಶ್ರೀ ವಿಜಯ ಮಾಯಾಡಿ, ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಬ್ಯಾಪ್ಟಿಸ್ಟ್ ಡಯಾಸ್ ಹಾಗೂ ಸದಸ್ಯರಾದ ಶ್ರೀಮ ಫ್ಲೇವಿಯಾ ಮಿನೇಜಸ್ ಮತ್ತು ಶ್ರೀ ಜೋಯೆಲ್ ಅಮ್ಮಣ್ಣ ಮಿಲಾಗ್ರಿಸ್ ಕಾಥೆದ್ರಾಲ್ ನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ  ಶ್ರೀ ಮೆಲ್ವಿನ್ ಸಿಕ್ವೇರಾ ರವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ಅನಿತಾ ಡಿಸೋಜರವರು ಸರ್ವರನ್ನು ಸ್ವಾಗತಿಸಿ ಸಂಕೇತಿಕವಾಗಿ ಉದ್ಘಾಟನೆಗೊಳ್ಳಲಿರುವ ಪೆನ್ಸಿಲ್ ನ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯುಕ್ತವಾಗಿ ದೀಪ ಬೆಳಗಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. ಪೆನ್ಸಿಲನ್ನು ಮುಖ್ಯ ಅತಿಥಿಗಳಿಂದ ಮುಖ್ಯೋಪಾಧ್ಯಾಯರಿಗೆ, ಮುಖ್ಯೋಪಾಧ್ಯಾಯರಿಂದ ಶಿಕ್ಷಕರಿಗೆ, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ, ಅಕ್ಷರಭ್ಯಾಸ ಮಾಡಿಸಲಾಯಿತು.

ಈ ಮೂಲಕ ಈ ವರ್ಷದ ಎಲ್ಲಾ ಚಟುವಟಿಕೆಗಳ ಮೇಲೆ ದೇವರ ಕೃಪ ಆಶೀರ್ವಾದಗಳನ್ನು ಕೋರಲಾಯಿತು ಹಾಜರಿದ್ದ ಶ್ರೀ ಭಕ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪ್ರತಿ ವರ್ಷ ದಾನಿಗಳ ಸಹಾಯದಿಂದ ಬರೆಯುವ ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿರುವ ಶ್ರೀ ದಿನೇಶ್ ಪೈ ಅವರಿಗೂ ಸಮವಸ್ತ್ರ ವಿತರಣೆಗೆ ಸಹಾಯ ಹಸ್ತ ನೀಡುವ ರೋಟೇರಿಯನ್ ರಾಜಾರಾಮ್ ಭಟ್ರವರಿಗೂ ರೋಟರಿ ಕ್ಲಬ್ಬಿನ ಇತರ ಸದಸ್ಯರನ್ನು ವಂದಿಸಿದರು.ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಶಿಕ್ಷಕಿ ಶ್ರೀಮತಿ ಸವಿತಾರವರು ಎಜುಟೆಕ್ ಸ್ಪೋಕನ್ ಇಂಗ್ಲಿಷ್ ಪುಸ್ತಕವನ್ನು ಶಾಲೆಗೆ ನೀಡಿದರು.

ಶಾಲಾ ಶಿಕ್ಷಕರಾದ ಶ್ರೀ ಅವಿನಾಶ್ ನಿರೂಪಿಸಿ, ಶ್ರೀ ಸಿಪ್ರಿಯನ್ ಕ್ರಾಸ್ತಾ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.