Skip to main content

ಸೊನಾಟಾ ಸಿಂಫನೀಸ್-ಎನ್‌ಕೆಇಎಸ್ ಸಂಯುಕ್ತ ಆಶ್ರಯದಲ್ಲಿ ಗೋಕುಲ್ ಸಭಾಗೃಹದಲ್ಲಿ ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ೮೦ನೇ ಜನ್ಮದಿನ ಸಂಭ್ರಮ.

By June 12, 2026Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಜೂ.12: ಸೊನಾಟಾ ಸಿಂಫನೀಸ್ ಹಾಗೂ ಎನ್‌ಕೆಇಎಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಗುರುವಾರ (ಜೂ.04) ಸಯನ್‌ನ ಗೋಕುಲ್ ಸಭಾಗೃಹದಲ್ಲಿ ಸಂಗೀತದ  ಗಾನಗಂಧರ್ವ ದಿ| ಎಸ್.ಪಿ  ಬಾಲಸುಬ್ರಹ್ಮಣ್ಯಂ ಅವರ ೮೦ನೇ ಜನ್ಮದಿನವನ್ನು ವಿನೂತನವಾಗಿ ಆಚರಿಸಲಾಯಿತು.

ವಿಶ್ವನಾಥ್ ಶೆಟ್ಟಿ ಕಾಪು ಅವರ ಮುತುವರ್ಜಿಯಲ್ಲಿ ಹಾಗೂ ಎನ್‌ಕೆಇಎಸ್ ಹಳೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಉಚಿತವಾಗಿ ಆಯೋಜಿಸ ಲಾಗಿದ್ದ ಸಂಗೀತ ಸಂಜೆಯಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ತಂಡದ ಹಾಡುಗಾರರು ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ, ಎಸ್‌ಪಿಬಿ ಅವರಿಗಾಗಿ ವಿಶೇಷವಾಗಿ ತಯಾರಿಸಲಾದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಸಂಭ್ರಮಿಸಿದರು.

ಸ್ವರ ಸೂರಿ ಮಾರ್ನಾಡ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಂಗೀತ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಅವರು ಹಾಡಿದ ಅಮರ ಗೀತೆಗಳನ್ನು ಆಯ್ದು ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಲಾಯಿತು.

ಗಾಯಕರಾದ  ವಿಶ್ವನಾಥ್ ಶೆಟ್ಟಿ ಕಾಪು,  ಸುರೇಶ್ ಶೆಟ್ಟಿ,  ಜಯೇಶ್ ಪೂಜಾರಿ,  ಕೇಶವ್ ಶೆಟ್ಟಿ ಕಲ್ಲಡ್ಕ, ಸಂಧ್ಯಾ ಸಿಂಗ್,   ಪ್ರತಿಮಾ ಆಚಾರ್ಯ, ಬೇಬಿ ಸ್ವರ ಮಾರ್ನಾಡ್,   ಮೀನಾಶ್ವಿ ಚೌಬೆ ಹಾಗೂ ನಮ್ರತಾ ಕದಂ ಅವರು ಮನಮೋಹಕವಾಗಿ ಹಾಡುಗಳನ್ನು ಪ್ರಸ್ತುತಪಡಿಸಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮಹಾನೀಯರನ್ನು ವೇದಿಕೆಗೆ ಆಹ್ವಾನಿಸಿ ಸತ್ಕಾರಿಸಲಾಯಿತು. ಬೃಹನ್ಮುಂಬಯಿಯಲ್ಲಿ ಇದೇ ಮೊದಲಾಗಿಸಿ ಹೊಸ ಮಾದರಿಯ ಸಂಗೀತ ಕಾರ್ಯಕ್ರಮದೊಂದಿಗೆ  ಹೊಸ ಆಯಾಮ ನೀಡಿದ ಈ ತಂಡದ ಪ್ರಯತ್ನ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಗಿ ವಿಶಿಷ್ಟ ಸಂಚಲನ ಮೂಡಿಸಿತು. ಶಾಹಿದ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.