Skip to main content
www.kallianpur.com | Email : kallianpur7@gmail.com | Mob : 9741001849

ಅಂಧೇರಿ-ಮುಂಬಯಿ ; ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ನಿಭಾಯಿಸಲಿದೆ ಪ್ರಯಾಣದ ತೊಂದರೆ.

By May 17, 2024Mumbai News
kallianpurdotcom: 9741001849
  (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.15: ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ-ಕರ್ನಾಟಕದ ಜನತೆಯ ಜನ್ಮಭೂಮಿ-ಕರ್ಮ ಭೂಮಿಯ ರೈಲು, ವಿಮಾನ, ಬಸ್ ಪ್ರಯಾಣದ ತೊಂದರೆ ನಿಭಾಯಿಸಲಿದೆ. ಕರ್ನಾಟಕದಂತೆ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂಡಿಯಾ ಕೂಟಕ್ಕೆ ವರದಾನವಾಗಲಿದೆ ಎಂದು ಕರ್ನಾಟಕದ ಸರ್ಕಾರದ ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರು ಬಾರಿಯ ಮಾಜಿ ಶಾಸಕ ಬಿ.ರಮಾನಾಥ ರೈ ತಿಳಿಸಿದರು.

ಇಂದಿಲ್ಲಿ ಬುಧವಾರ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹೊಟೇಲ್ ಸಾಯಿ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ರಮಾನಾಥ ರೈ ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು ನೀಡಿದ ಎಲ್ಲಾ ಭರವಸೆ ಗಳನ್ನು ಈಡೇರಿಸಲು  ವಿಫಲವಾಗಿದೆ. ಜನಪರ ಸೇವೆಯ ಬದಲಾಗಿ ಜನವಿರೋಧಿ ಧೋರಣೆಗಳು ಮತ್ತು ಸರ್ಕಾರಿ ಸೊತ್ತನ್ನು ಖಾಸಾಗಿಕರಣ ಗೊಳಿಸಿ ಬಂಡವಾಳಶಾಹಿಗಳ ಸಾಲಮನ್ನವೇ ಎನ್‌ಡಿಎ ಸಾಧನೆಯಾಗಿದೆ. ಇಂತಹ ಮುಂದಾಳುತ್ವದ ಎನ್‌ಡಿಎ ಸರ್ಕಾರದ ವೈಫಲ್ಯಗಳು, ಆಳ್ವಿಕೆಯ ರೀತಿ, ಸಂವಿಂಧಾನ ಮತ್ತು ಪ್ರಜಾಪ್ರಭುತ್ವದ ಜನವಿರೋಧಿ ನೀತಿಯನ್ನು ಮನವರಿಸಿ ಈ ಬಾರಿ ಮತದಾರರರು ಯಾಕೆ ಇಂಡಿಯಾ ಒಕ್ಕೂಟಕ್ಕೆ ಮತನೀಡಬೇಕೆಂದು ಮನವರಿಸಿದರು. ಬೃಹನ್ಮುಂಬಯಿ ಹಾಗೂ ಮಹಾರಾಷ್ಟ್ರದಲ್ಲೆದೆ ೨೦೨೪ನೇ ಸಾಲಿನ ಲೋಕಸಭೆಗೆ ಸ್ಪರ್ಧಿಸಿದ ಇಂಡಿಯಾ (ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್- ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಮೈತ್ರಿಕೂಟಕ್ಕೆ ಈ ಬಾರಿ ಕೇಂದ್ರದಲ್ಲಿ ಪರಿಪೂರ್ಣವಾದ ರಾಷ್ಟ್ರ ಕಟ್ಟುವ ಸರ್ಕಾರ ನಿರ್ಮಿಸಲು ಇಂಡಿಯಾ ಒಕ್ಕೂಟಕ್ಕೆ ಮತವನ್ನೀಡಲು ಮುಂಬಯಿವಾಸಿ ಮತದಾರರಲ್ಲಿ ಮನವಿ ಮಾಡಿದರು.

ವಿನಯಕುಮಾರ್ ಸೊರಕೆ ಮಾತನಾಡಿ ಮುಂಬಯಿ ದೊಡ್ಡ ಸಂಖ್ಯೆಯಲ್ಲಿ ತುಳುಕನ್ನಡಿಗರನ್ನು ಹೊಂದಿದ ಮಹಾನಗರ ವಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿಯ ಜನತೆಯದ್ದೇ ಹೆಚ್ಚಿನ ಕಾರುಬಾರು. ಹೊಟೇಲು ಉದ್ಯಮದಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದವರಾಗಿದ್ದಾರೆ. ಅಭಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೈನ್ ಸ್ವಿಚ್ ಮುಂಬಯಿಗರಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂಬ ಸುಳಿವು ನೀಡಿ ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್ ಬಗೆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿ ಲೋಕಸಭಾ ಚುನಾವಣೆಯ ನಂತರ ಶಿಂಧೆ ಸರ್ಕಾರವೇ ಪತನದ ಬಗ್ಗೆ ಅನುಮಾನವಿದೆ.

ಕರ್ನಾಟಕದ ಜನತೆ ಇಂಡಿಯಾ ಅಭ್ಯಥಿಗಳ ಪರವಾಗಿದ್ದು ರಾಷ್ಟ್ರದಾದ್ಯಂತ ಅಭೂತಪೂರ್ವ ಬೆಂಬಲ ಲಭಿಸುತ್ತಿದೆ.  ಈ ಬಾರಿ ಇಂಡಿಯಾ ಮೈತ್ರಿಕೂಟವೇ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೇಸ್ ಸಾರಥ್ಯದ ಇಂಡಿಯಾ ಕನಸು ನನಸಾಗಲಿದೆ ಆ ಮೂಲಕ ಭಾರತ ರಾಷ್ಟ್ರದ ಜನತೆ ಮತ್ತೆ ಭರವಸೆಯ ಬಾಳಿಗೆ ಮರಳಲಿದ್ದಾರೆ ಎಂದು ಐವಾನ್ ಡಿ’ಸೋಜಾ ತಿಳಿಸಿದರು.

ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಸುರೇಶ್ ಎಸ್.ಶೆಟ್ಟಿ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಮತ್ತು ಮಾಜಿ ಸಂಸದ ವಿನಯಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ, ಮಾಜಿ ಎಂಎಲ್‌ಸಿ ಐವಾನ್ ಡಿ’ಸೋಜಾ, ಮುಂಬಯಿ ಕಾಂಗ್ರೆಸ್ (ಐ) ಪಕ್ಷದ ಹಾಲಿ ಹಿರಿಯ ಉಪಾಧ್ಯಕ್ಷೆ, ಮಾಜಿ ಮಹಿಳಾ ಅಧ್ಯಕ್ಷೆ ಜಾನೆಟ್ ಎಲ್.ಡಿ’ಸೋಜಾ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ (ಬೂಡಾ) ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹಾಗೂ ಬೂಡ ಅಧ್ಯಕ್ಷ ಬೇಬಿ ಕುಂದರ್ ವೇದಿಕೆಯಲ್ಲಿ ದ್ದರು. ಎಐಸಿಸಿ ಮತ್ತು ಆಲ್ ಇಂಡಿಯಾ ಕಿಸಾನ್ ಕಾಂಗ್ರೇಸ್ ಇದರ ರಾಷ್ಟ್ರೀಯ ಜೊತೆ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ವಾಗತಿಸಿ ವಂದಿಸಿದರು. ವಿಫುಲ್ ರೋಡ್ರಿಗಸ್, ಸಂತೋಷ್ ಶೆಟ್ಟಿ ಮರೋಲ್, ಐವಾನ್ ಡಿ’ಸೋಜಾ ನಕ್ರೆ, ಜಯಕರ್ ಶೆಟ್ಟಿ ಸಿದ್ಧಕಟ್ಟೆ, ಪದ್ಮನಾಭ ಎಸ್.ಪಯ್ಯಡೆ, ರವಿ ಎಸ್.ಶೆಟ್ಟಿ, ಡೆನ್ಜಿಲ್ ಅಲ್ಲಿಪಾದೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.