
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.೦೨: ಸಸಿಹಿತ್ಲು ಶ್ರೀ ಭಗವತೀ ದೇವಸ್ದಾನದ ಆಡಳಿತ ಮುಕ್ತೇಸರ ಹಾಗೂ ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಇವರ ವಾರ್ಷಿಕ ಪೂಜೋತ್ಸವವು ಕಳೆದ ಶನಿವಾರ ಸಂಜೆ ಕಟೀಲು ಗಂಪ ಇಲ್ಲಿನ ದೇವಿ ಕೃಪಾ ನಿವಾಸದಲ್ಲಿ ನೆರವೇರಿಸಲ್ಪಟ್ಟಿತು. ಬಳಿಕ ೫೧ನೇ ವಾರ್ಷಿಕ ಹರಕೆಯ ಯಕ್ಷಗಾನ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕರುಗಳಾದ ಕಟೀಲು ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಶ್ರೀ ಕಟೀಲು ಅನಂತ ಪದ್ಮನಾಭ ಆಸ್ರಣ್ಣ, ಶ್ರೀ ಕಟೀಲು ಕಮಲಾದೇವಿಪ್ರಸಾದ ಆಸ್ರಣ್ಣ ಚಿತ್ತೈಸಿ ಅನುಗ್ರಹಿಸಿದರು. ಶ್ರೀ ಸುಬ್ರಹ್ಮಣ್ಯ ಹೆಬ್ಬಾರ್ ಚೌಕಿ ಪೂಜೆ ಇತ್ಯಾದಿಗಳನ್ನು ನಡೆಸಿ ಹರಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು ಶ್ರೀ ಸತ್ಯಹರೀಶ್ಚಂದ್ರ ಮತ್ತು ರತಿ ಕಲ್ಯಾಣ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಸುಜತಾ ಡಿ.ದೇವಾಡಿಗ, ಡಾ| ಪೂನಂ ರಾಹುಲ್, ಪದ್ಮನಾಭ ಸಸಿಹಿತ್ಲು (ಕಲಾ ಸೌರಭ), ಎಂಸಿಸಿ ಬ್ಯಾಂಕ್ ನಿರ್ದೇಶಕ ಅಡ್ವಕೇಟ್ ಎ.ಪಿ ಮೊಂತೇರೋ, ಸುಧಾಕರ್ ಬಿ., ಸದಾನಂದ ಬಿ., ರಾಜೇಂದ್ರ ಪ್ರಸಾದ್ ಎಕ್ಕಾರ್, ದಮಾಯತಿ ಶೆಟ್ಟಿ ಎಕ್ಕಾರು, ಮೆಹುಲ್ ಚಂದ್ರಶೇಖರ್, ಸಾಗರ್ ಕಟೀಲ್, ಶಶಾಂಕ್ ಕಟೀಲ್ ಸೇರಿದಂತೆ ನೂರಾರು ಗಣ್ಯರು ಉಪಸ್ಧಿತರಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.