Skip to main content
www.kallianpur.com | Email : kallianpur7@gmail.com | Mob : 9741001849

ಭಾರತ್ ಬ್ಯಾಂಕ್ ಕೇಂದ್ರ ಕಚೇರಿಗೆ ಗಣ್ಯರ ಸೌಹಾರ್ದ ಭೇಟಿ-ಗೌರವಾರ್ಪಣೆ ಆರ್ಥಿಕ ಸಂಸ್ಥೆ ಮುನ್ನಡೆಸುವುದು ಸುಲಭವಲ್ಲ : ಬಿ.ಎಂ ಸಂದೀಪ್.

By May 18, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.೧೮: ಕರ್ಮಭೂಮಿಯಲ್ಲಿ ತುಳು- ಕನ್ನಡಿಗರ ಸಾಮರಸ್ಯದ ಬದುಕು ಸ್ತುತ್ಯಾರ್ಹವಾಗಿದೆ. ರಾಷ್ಟ್ರದ ಆರ್ಥಿಕ  ಜಧಾನಿಯಲ್ಲಿನ ಜನತೆಯ ಜೀವನೋಪಯಕ್ಕೆ ಹಣಕಾಸು ಮೂಲಕ ಸ್ಪಂದಿಸುತ್ತಿರುವ ಭಾರತ್ ಬ್ಯಾಂಕ್‌ನ ಸೇವೆ ಶ್ಲಾಘನೀಯ. ಪ್ರಸ್ತುತ ಕಾಲಘಟ್ಟದಲ್ಲಿ ಆರ್ಥಿಕ ವ್ಯವಹಾರ ಅದರಲ್ಲೂ ಸಾರ್ವಜನಿಕವಾಗಿ ಹಣಕಾಸು ಸಂಸ್ಥೆ ಯನ್ನು ಮುನ್ನಡೆಸುವುದು ಸುಲಭವಲ್ಲ. ಬ್ಯಾಂಕ್‌ನ ಸ್ಥಾಪಕರ, ಬ್ಯಾಂಕನ್ನು ಈ ಮಟ್ಟಕ್ಕೆ ಮುನ್ನಡೆಸಿದ ಸ್ವರ್ಗೀಯ ಜಯ ಸಿ.ಸುವರ್ಣ ಅಂತಹವರ ದೂರದರ್ಶಿತ್ವದ ಫಲವೇ ಬ್ಯಾಂಕ್‌ನ ಈ ಮಟ್ಟದ ಮುನ್ನಡೆ ಸಾಧ್ಯವಾಗಿದೆ. ರಾಷ್ಟ್ರದ ಸರ್ವೋಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಸೇವೆ ಮಹತ್ತರದ್ದಾಗಿದ್ದು ಭಾರತ್ ಬ್ಯಾಂಕ್ ಇದಕ್ಕೆ ಪೂರಕವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರ ರಾಜ್ಯ ಪ್ರಭಾರಿ ಕಾರ್ಯದರ್ಶಿ ಬಿ.ಎಂ ಸಂದೀಪ್ (ಚಿಕ್ಕಮಗಳೂರು) ತಿಳಿಸಿದರು.

ಗೋರೆಗಾಂ ಪೂರ್ವದ ಮಾರುತಿಗಿರಿ ಇಲ್ಲಿನ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕೇಂದ್ರ ಕಛೇರಿಗೆ ಇಂದಿಲ್ಲಿ ಕರ್ನಾಟಕದ ಸರ್ಕಾರದ ಮಾಜಿ ಸಚಿವ ಬಿ.ರಮಾನಾಥ ರೈ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಕೋಶಾಧಿಕಾರಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಡ್ವಕೇಟ್ ಪದ್ಮರಾಜ್ ರಾಮಯ್ಯ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವಿನಿ ಜೈನ್, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ (ಬೂಡಾ) ಅಧ್ಯಕ್ಷ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಭೇಟಿ ನೀಡಿದರು.

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಸ್ವಾಗತಿಸಿ ಪುಷ್ಪಗುಚ್ಛ, ಸ್ಮರಣಿಕೆಗಳನ್ನಿತ್ತು ಅತಿಥಿವರ್ಯರನ್ನು ಗೌರವಿಸಿದರು. ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಮೋಹನ್‌ದಾಸ ಜಿ.ಪೂಜಾರಿ, ನಿರಂಜನ್ ಲಕ್ಷ್ಮಣ್ ಪೂಜಾರಿ (ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ೩ಕೆ ಪೂರ್ವ ಸಮಿತಿ ಸದಸ್ಯ) ಹಾಗೂ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ ಮತ್ತು ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದು ಗಣ್ಯರಿಗೆ ಸುಖಾಗಮನ ಬಯಸಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಕಿಸಾನ್ ಕಾಂಗ್ರೇಸ್ (ಐ) ರಾಷ್ಟ್ರೀಯ ಜೊತೆ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ, ಐವಾನ್ ಆನಂದ್ ಡಿಸೋಜಾ ನಕ್ರೆ, ಜಯಕರ್ ಶೆಟ್ಟಿ ಸಿದ್ಧಕಟ್ಟೆ, ಡೆನ್ಜಿಲ್ ಅಲ್ಲಿಪಾದೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.