kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, (ಆರ್‌ಬಿಐ) ಮೇ.೧೭: ಉಪನಗರ ಕಾಂದಿವಿಲಿ ಪಶ್ಚಿಮದ ಚಾರ್ಕೋಪ್ ಇಲ್ಲಿನ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯ ಸಂಸ್ಥಾಪಕ ಮೂಲ್ಕಿ ರಘುನಂದನ್ ಶ್ರೀನಿವಾಸ ಕಾಮತ್ (೭೦) ಅಲ್ಪಕಾಲದ ಅಸ್ವಸ್ಥತೆಯಿಂದ ಚೆರ್ನೀ ರೋಡ್‌ನ ಹೆಚ್.ಎನ್ ರಿಲಾಯನ್ಸ್ ಫೌಡೇಶನ್ ಆಸ್ಪತ್ರೆಯಲ್ಲಿ ಇಂದಿಲ್ಲಿ ರಾತ್ರಿ ನಿಧನ ರಾದರು.
ಮಂಗಳೂರು ಅಡ್ಯಾರ್ ಮೂಲತಃ ರಘುನಂದನ್ ಕಾಮತ್ ಅಂಧೇರಿ ಪಶ್ಚಿಮದ ಫೋರ್‌ಬಂಗಲೋ ಇಲ್ಲಿ ಸ್ವನಿವಾಸ ದಲ್ಲಿ ವಾಸವಾಗಿದ್ದ ಕಾಮತ್ ಅವರ್ ಟೈಮ್ಸ್ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಆಗಿದ್ದು ಉಪನಗರ ಕಾಂದಿವಿಲಿ ಪಶ್ಚಿಮದ ಚಾರ್ಕೋಪ್ ಇಲ್ಲಿನ ನ್ಯಾಚುರಲ್ ಐಸ್‌ಕ್ರೀಂ (ಐಸ್ ಕ್ರೀಂ ಆಫ್ ಜುಹೂ ಸ್ಕೀಮ್) ಮೂಲಕ ಲಿಮ್ಕಾ ರೆಕಾರ್ಡ್ ಪುರಸ್ಕ್ರತರಾಗಿದ್ದರು. ಸದ್ಯ ದೇಶ ವಿದೇಶಗಳಲ್ಲಿ ತಮ್ಮ ಐಸ್‌ಕ್ರೀಮ್ ಉದ್ಯಮವನ್ನು ವಿಸ್ತರಿಸಿ ಜಾಗತಿಕವಾಗಿ ಜನಾನುರೆಣಿಸಿದ್ದರು.
ಮೃತರು ಪತ್ನಿ, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಯು ಇನ್ನಷ್ಟೇ ನಿರ್ಧಾರಿಸಲಾಗುವುದು ಎಂದು ಕುಟುಂಬ ಮೂಲವು ತಿಳಿಸಿದೆ. ಜಿಎಸ್‌ಬಿ ಸಮುದಾಯದ ಹಿರಿಯ ಧುರೀಣರೂ, ಕೊಡುಗೈ ದಾನಿಯಾಗಿದ್ದರು.
ಕಡಲ ತೀರ ಛಲದಂಕಮಲ್ಲ ಮೂಲ್ಕಿ ರಘುನಂದನ ಕಾಮತ್.
ತನ್ನ ಭಾತೃ ಶ್ರೀ ಜಿ.ಎಸ್. ಕಾಮತ್‌ರ ಗರಡಿಯ ಕಟ್ಟು ನಿಟ್ಟಿನ ಆಡಳಿತ ವೈಕರಿಯಲ್ಲಿ ಪಳಗಿದ ಅನುಭವದ ಹಿನ್ನೆಲೆ ಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಘುನಂದನ ಕಾಮತ್‌ರಿಗೆ ‘ಶುದ್ಧತೆ ಮತ್ತು ಪರಿಶುದ್ಧತೆ’ಯ ಮಾನದಂಡದ ಪರಿವೆಯಿದ್ದು ದರಿಂದ ಐಸ್‌ಕ್ರೀಂ ತಯಾರಿಕೆಯಲ್ಲಿ ಹೊಸತನ ಹಾಗೂ ತಾಜಾತನವನ್ನು ಕಲೆ ಹಾಕಿ ಐಸ್‌ಕ್ರೀಂ ತಯಾರಿಕೆಯಲ್ಲಿ ಒಂದು ಚಕ್ರವ್ಯೂಹವನ್ನೇ ಸೃಷ್ಟಿಸಿದರು.
ಎಲ್ಲ ಜಾತಿಯವರ ಶ್ರದ್ಧಾಕೇಂದ್ರವಾಗಿರುವ ಪೂಜ್ಯ ಪಾವನಿ ಶಾಂಭವಿ ನದಿ ತಟದಲ್ಲಿನೆಲೆಸಿರುವ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ, ಮೂಲ್ಕಿಯ ಸನಿಹದಲ್ಲಿರುವ ಒಂದು ಪುಟ್ಟ ಗ್ರಾಮ. ಪುತ್ತೂರಿನಲ್ಲಿ ಆಂಬೆ ಮಾಮು ಎಂದೇ ಪ್ರಸಿದ್ದಿ ಪಡೆದ ಶ್ರೀನಿವಾಸ ಕಾಮತ್ ಮತ್ತು ಶಾಂತಾ ಬಾಯಿ ಯಾನೆ ಅನಸೂಯ ದಂಪತಿ ಅವರ ಎಂಟು ಮಕ್ಕಳಲ್ಲಿ ಅತಿ ಕಿರಿಯವರು ರಘು ನಂದನ ಕಾಮತ್.
ಇವರು ತಮ್ಮ ಸ್ವಗ್ರಾಮದಲ್ಲಿ ೭ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದರು. ಓದು ಬರಹದಲ್ಲಿ ಶ್ರೀ ರಘುನಂದನ ಕಾಮತ್ ನಿಸ್ಸಿಮರಲ್ಲದ ಕಾರಣ, ತಮ್ಮ ವ್ಯಾಸಂಗವನ್ನು ೭ನೇ ತರಗತಿಗೆ ಸೀಮಿತಗೊಳಿಸಿ ಮುಂಬಯಿಗೆ ತೆರಳಿ, ಅಲ್ಲಿ ಎನ್‌ಕೆಇಎಸ್ ಶಾಲೆಗೆ ಸೇರ್ಪಡೆಗೊಂಡರು. ಆದರೆ ವ್ಯಾಸಂಗದಲ್ಲಿ ಅಷ್ಟೊಂದು ಅಭಿರುಚಿ ಇಲ್ಲದಿದ್ದುದರಿಂದ, ಶ್ರೀಯುತ ಕಾಮತರು ವಿದ್ಯಾ ಭ್ಯಾಸಕ್ಕೆ ತಿಲಾಂಜಲಿ ಕೊಟ್ಟು ಹೊಟ್ಟೆಪಾಡಿಗಾಗಿ ತಮ್ಮ ಸ್ವಂತ ಅಣ್ಣ ಜಿ.ಎಸ್. ಕಾಮತ್ ಅವರ ಗೋಕುಲ್ ಐಸ್ ಕ್ರೀಮ್‌ನಲ್ಲಿ ಕೆಲಸಕ್ಕೆ ಸೇರಿ ತಮ್ಮ ಜೀವನ ಚೈತ್ರ ಪ್ರಾರಂಭಿಸಿದರು.
ಮುಂದಕ್ಕೆ ೧೯೮೩ರಲ್ಲಿ ಶ್ರೀ ರಘುನಂದನ ಕಾಮತ್ ಅವರ ವಿವಾಹ ಸಚ್ಚರಿಪೇಟೆಯ ಸಚ್ಚಾರಿತ್ರೆಯ ಹಿನ್ನೆಲೆಯ ಕುಟುಂಬದ ಹುಡುಗಿಯೊಂದಿಗೆ ನೆರವೇರಿದ್ದು ಮುಂಬಯಿಯಲ್ಲಿ ಶ್ರೀ ರಘುನಂದನ ಕಾಮತರ ಧರ್ಮಪತ್ನಿ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು ಮುಂಬಯಿಯಲ್ಲಿ ಬಾಳು ಬೆಳಗಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.