kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.೨೧: ಮುಂಬಯಿಯಲ್ಲಿ ಬಂಟ್ಸ್ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ಬಲಿಷ್ಠ ತುಳು ಕನ್ನಡಿಗರ ಎರಡು ಸಂಸ್ಥೆಗಳಾಗಿವೆ. ನಾವು ಜಾತಿಮತ ಮರೆತು ಒಟ್ಟಾಗಿ ಮಹಾನಗರದಲ್ಲಿನ ತುಳುಕನ್ನಡಿಗರಿಗೆ ಬೃಹತ್ ಕ್ರೀಡೋತ್ಸವ ಹಮ್ಮಿಕೊಂಡು ಕರ್ಮಭೂಮಿಯಾದ ಮಹಾರಾಷ್ಟ್ರದಲ್ಲಿ ನಮ್ಮ ಕೀರ್ತಿ ಪತಾಕೆ ಆರಿಸಬೇಕು. ಕ್ರೀಡೆ ಯಾವೊತ್ತೂ ವಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ಆಯುಷ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾನು ಅನಾರೋಗ್ಯ ಮುಕ್ತರಾಗಿ ಬಾಳಲು ಕ್ರೀಡೆಯನ್ನು ಜೀವನದ ಅವಿಭಾಜ್ಯಾಂಗವಾಗಿಸೋಣ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಮರೀನ್‌ಲೇನ್ ಪಶ್ಚಿಮದ ಮುಂಬಯಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಇಂದಿಲ್ಲಿ ರವಿವಾರ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಹಮ್ಮಿಕೊಂಡಿದ್ದ ೨೦೨೪ನೇ ವಾರ್ಷಿಕ `ಕೋಟಿ- ಚೆನ್ನಯ ಕ್ರೀಡಾಕೂಟ’ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿದ್ದು ಪ್ರವೀಣ್ ಶೆಟ್ಟಿ ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ.ಅಮೀನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಏಷಿಯಾಟಿಕ್ ಕ್ರೇನ್ ಸರ್ವೀಸ್ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಪೂಜಾರಿ, ವೈಷ್ಣವಿ ಮ್ಯಾನೇಜ್‌ಮೆಂಟ್ ಪ್ರೆವೇಟ್ ಲಿಮಿಟೆಡ್ ನಿರ್ದೇಶಕ ಮೋಹನ್ ಪೂಜಾರಿ, ಸಮಾಜ ಸೇವಕ ಮಕರಂದ್ ನಾರ್ವೇಕರ್, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕರುಗಳಾದ ಹರೀಶ್ ಮೂಲ್ಕಿ, ಪುರುಷೋತ್ತಮ ಎಸ್. ಕೋಟ್ಯಾನ್ ಉಪಸ್ಥಿತರಿದ್ದು ವಿಜೇತ ಸ್ಪರ್ಧಿಗಳಿಗೆ ಪಾರಿತೋಷಗಳನ್ನು ವಿತರಿಸಿ ಅಭಿನಂದಿಸಿದರು.
ಗಣೇಶ್ ಪೂಜಾರಿ ಮಾತನಾಡೀ ನಮ್ಮ ಜೀವನದಲ್ಲಿ ವಿದ್ಯೆ ಎಷ್ಟು ಅಗತ್ಯವೂ ಕ್ರೀಡೆಯೂ ಅಷ್ಟೇ ಪ್ರಧಾನವಾದುದು. ಕ್ರೀಡೆಯು ಪ್ರತಿಭಾ ನ್ವಿತರಿಗೆ ವರವಾಗಿದ್ದು ಈ ಮೂಲಕ ಸ್ವಂತಿಕೆಯ ಅಸ್ಮಿತೆಯನ್ನು ನ್ನು ಸಮಾಜದಲ್ಲಿ ಗುರುತಿಸಿ ಕೊಳ್ಳಬಹುದು. ಕರ್ಮ ಭೂಮಿಯಲ್ಲಿ ಬಿಲ್ಲವರ ಇಂತಹ ಸಾಧನೆ ನಿರಂತರವಾಗಿ ಸಾಗುತ್ತಾ ಬಿಲ್ಲವರ ಕೀರ್ತಿ ಇನ್ನಷ್ಟು ಪಸರಿಸುವಂತಾಗಲಿ ಎಂದರು.
ಮಕರಂದ್ ಮಾತನಾಡಿ ಕ್ರೀಡಾ ಮಾಧ್ಯಮದೊಂದಿಗೆ ಒಬ್ಬರು ಮತ್ತೊಬ್ಬರನ್ನು ಪರಸ್ಪರ ಸ್ನೇಹ ಬೆಳೆಸಿಕೊಳ್ಳ ಬಹುದು. ಇದೊಂದು ಪ್ರೀತಿಯ ಧ್ಯೋತಕವಾಗಿದ್ದು ಸಂಬಂಧ ಬೆಳೆಸು ವಲ್ಲೂ ಪಾತ್ರವಹಿಸುತ್ತದೆ. ಬಿಲ್ಲವರಿಂದ ಮುಂದೆಯೂ ಇಂತಹ ಕ್ರೀಡಾ ಉತ್ಸವವು ನಡೆಯುತ್ತಿರಲಿ ಎಂದು ಶುಭಾರೈಸಿದರು.
ನಮ್ಮ ಬಾಲ್ಯಾವಸ್ಥೆಯಲ್ಲಿ ನಮಗೆ ಕ್ರೀಡೆಗೆ ಪ್ರೋತ್ಸಾಹ ಇರಲಿಲ್ಲ. ನಾವು ಆಡಿದ್ದೇ ಆಟ. ಗೆದ್ದಿದ್ದೇ ಫಲಕ ಆಗಿತ್ತು. ಆದರೆ ಇಂದಿನ ಪೀಳಿಯು ಕ್ರೀಡಾ ಪ್ರೋತ್ಸಾಹದಿಂದ ವಂಚಿತರಾಗಬಾರದು ಎಂದು ಮೋಹನ್ ಪೂಜಾರಿ ಸಲಹಿದರು. ಹರೀಶ್ ಅಮೀನ್ ಅಧ್ಯಕ್ಷೀಯ ನುಡಿಗಳನ್ನಾಡಿ ಇದು ಬಿಲ್ಲವರಲ್ಲಿನ ಐಕ್ಯತೆಯ ಪಂತವಾಗಿದೆ. ಇಲ್ಲಿ ನಮ್ಮೊಳಗಿನ ಒಗ್ಗಟ್ಟನ್ನು ಕ್ರೀಡಾ ಸ್ಫೂರ್ತಿಯಲ್ಲಿ ಪ್ರದರ್ಶಿಸಲು ಅವಕಾಶವಾಗಿದೆ. ಪ್ರವೀಣ್ ಭೋಜ ಶೆಟ್ಟಿ ಅವರ ಆಶಯದಂತೆ ಮುಂದೊಂದುದಿನ ಬೃಹನ್ಮುಂಬಯಿಯಲ್ಲಿನ ಎಲ್ಲಾ ತುಳುಕನ್ನಡಿಗರು ಒಗ್ಗೂಡಿ ನಮ್ಮ ಏಕತೆಯ ಕೀರ್ತಿ ಪತಾಕೆ ಯನ್ನು ಎತ್ತಿಯಿಡಿಯೋಣ. ಕ್ರೀಡಾ ಕೂಟದಲ್ಲಿ ಭಾಗವಹಿಸುವುದರಿಂದ ಮನರಂಜನೆ ಲಭಿಸುವುದು ಮತ್ತು ಕ್ರೀಡಾ ಸ್ಫೂರ್ತಿ ಜೊತೆಗೆ ಸಂಬಂಧಗಳು ಬಲಗೊಳ್ಳು ವುದು. ಒಟ್ಟಾಗಿ ಏಕತೆಯನ್ನು ಸಾಧಿಸಲು ಸಹ ಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಬಿಲ್ಲವರ ಅಸೋಸಿಯೇಶನ್ ಫುಟ್ಬಾಲ್, ಕ್ರಿಕೆಟ್ ಪಂದ್ಯಾಟ ನಡೆಸಲು ಯೋಚಿಸಿದ್ದು ಆ ಮೂಲಕ ನಾವೆಲ್ಲರೂ ಒಗ್ಗೂಡೋಣ. ನಿಮ್ಮಲ್ಲಿರುವ ಕ್ರೀಡಾ ಇನ್ನಿತರ ಪ್ರತಿಭೆಗಳನ್ನು ಅಸೋಸಿಯೇಶನ್ ಜೊತೆ ಪರಿಚಯಿಸಿದ್ದಲ್ಲಿ ಅಸೋಸಿ ಯೇಶನ್ ಅವರನ್ನು ಬೆಂಬಲಿಸುವುದು. ಸಂಸ್ಥೆಯ ಬೈಲಾಸ್ ಪ್ರಕಾರವೇ ನಾವು ಸೇವೆಯಲ್ಲಿದ್ದು ಅಪಪ್ರಚಾರಕ್ಕೆ ಕಿವಿಗೊಡದಿರಿ. ಗುರು ತತ್ವ ದಂತೆಯೇ ಶ್ರಮಿಸಿ ನಿಮ್ಮ ವಿಶ್ವಾಸಕ್ಕೆ ಬದ್ಧರಾಗಿ ಸಂಸ್ಥೆ ಮತ್ತು ಸಮುದಾಯದ ಉನ್ನತಿಗಾಗಿ ಶ್ರಮಿಸುವೆವು ಎಂದರು.
ಪ್ರತಿಷ್ಠಿತ ಕ್ರೀಡಾಪಟುಗಳಾದ ದಿಲೀಪ್ ಅಮಿನ್, ಕು| ಆತ್ಮೀಕಾ ಪೂಜಾರಿ ಇವರನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು. ವೈದ್ಯಕೀಯ ಸೇವೆಗೈದ ಡಾ| ಶೃತಿ ಪೂಜಾರಿ, ಸೇವಾದಳದ ಸದಸ್ಯರಿಗೆ (ಪರವಾಗಿ ಕಾರ್ಯ ಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್ ಮತ್ತು ದಳಪತಿ ಗಣೇಶ್ ಕೆ.ಪೂಜಾರಿ), ಕ್ರೀಡಾ ಸಂಯೋಜನೆಗೈದ ರವಿ ಎಸ್. ಸನಿಲ್, ಸಹನಿಸ್ಟಾರ್ ಮಾಧ್ಯಮದ ಹರಿಣಿ ನಿಲೇಶ್ ಪೂಜಾರಿ ಸೇರಿದಂತೆ ಉಪಸ್ಥಿತ ದಾನಿಗಳನ್ನು ಅಧ್ಯಕ್ಷರು ಗೌರವಿಸಿ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಜಯಂತಿ ವಿ.ಉಳ್ಳಾಲ್, ಧರ್ಮಪಾಲ ಜಿ.ಅಂಚನ್, ಕೆ.ಸುರೇಶ್ ಕುಮಾರ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವ ವಿಭಾಗದ ಕಾರ್ಯದರ್ಶಿ ನವೀನ್ ಎಲ್.ಬಂಗೇರ, ಅಸೋಸಿಯೇಶನ್‌ನ ಸ್ಥಳಿಯ ಸಮಿತಿಗಳ ಮುಖ್ಯಸ್ಥರುಗಳಾದ ಕರುಣಾಕರ್ ಜಿ.ಅಮಿನ್ (ವಸಾಯಿ), ಗಣೇಶ್ ವಿ.ಸುವರ್ಣ (ನಾಲಾಸೋಫರಾ), ಜನಾರ್ದನ ಆರ್.ಪೂಜಾರಿ (ಭಾಂಡುಪ್), ಚಂದ್ರಹಾಸ ಎಸ್.ಪಾಲನ್ (ಡೊಂಬಿವಿಲಿ), ಮೋಹನ್ ಕೆ.ಸಾಲ್ಯಾನ್ (ಚೆಂಬೂರು), ಹರೀಶ್ ಟಿ.ಪೂಜಾರಿ (ಥಾಣೆ), ರತ್ನಾಕರ್ ಜಿ.ಪೂಜಾರಿ (ಭಿವಂಡಿ), ವಿಶ್ವನಾಥ್ ಕೆ.ಪೂಜಾರಿ (ನವಿ ಮುಂಬಯಿ),ಮೋಹನ್ ಬಿ.ಅಮಿನ್ (ಬೋರಿವಿಲಿ), ಕೃಷ್ಣ ಕೆ.ಪೂಜಾರಿ (ಘಾಟ್ಕೋಪರ್), ಹರೀಶ್ ಶಾಂತಿ (ಅಂಧೇರಿ), ಸದಾಶಿವ ಜಿ.ಸುವರ್ಣ (ಕಲ್ಯಾಣ್) ಹಾಗೂ ಇತರ ಸ್ಥಳಿಯ ಸಮಿತಿಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು ಬಿಲ್ಲವ ಕ್ರೀಡಾಸಕ್ತರಿಗೆ ಇದು ಅಥ್ಲೆಟಿಕ್ ಸ್ವರೂಪದ ಕ್ರೀಡಾಕೂಟವಾಗಿದೆ. ಇಲ್ಲಿ ಸಮಾಜ ಬಾಂಧವರ ಒಗ್ಗೂಡು ವಿಕೆಯೇ ಪ್ರಧಾನವಾದುದು. ಇದು ಆಟೋಟಗಳ ಹಬ್ಬವಾಗಿದ್ದು ನಮ್ಮ ಹಿರಿಯರ ಕನಸಿನ ಸ್ನೇಹಪರ ಸ್ಪರ್ಧೆ ಯಾಗಿದೆಯಷ್ಟೇ. ಮನೆಮಂದಿಯ ಸಮಾನತೆಯ ಸ್ಪರ್ಧೆಯೂ ಹೌದು ಎನ್ನುತ್ತಾ ಪ್ರಸ್ತಾವನೆಗೈದು ಸ್ವಾಗತಿಸಿದರು.
ದಿನಪೂರ್ತಿಯಾಗಿ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ವಸಾಯಿ ಸ್ಥಳೀಯ ಕಛೇರಿ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್‌ಶಿಪ್ ತನ್ನ ದಾಗಿಸಿತು. ಬೋರಿವಿಲಿ ಸ್ಥಳೀಯ ಕಛೇರಿ ದ್ವಿತೀಯ ಮತ್ತು ಘಟ್ಕೋಪರ್ ಸ್ಥಳೀಯ ಕಛೇರಿ ತೃತಿಯ ಸ್ಥಾನ ಗಳೊಂದಿಗೆ ಜಯಗಳಿಸಿತು.
ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕ್ರೀಡೋತ್ಸವ ಸಮಾಪನ ಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.