Skip to main content
www.kallianpur.com | Email : kallianpur7@gmail.com | Mob : 9741001849

ಚಾರ್ಕೋಪ್ ಕನ್ನಡಿಗರ ಬಳಗ ; ವಿಶೇಷ ಮಹಾಸಭೆ-ನೂತನ ಕಾರ್ಯಕಾರಿಸಮಿತಿ ಆಯ್ಕೆ ನೂತನ ಅಧ್ಯಕ್ಷರಾಗಿ ರವೀಂದ್ರ ಎಂ.ಶೆಟ್ಟಿ ಸರ್ವಾನುಮತದಿಂದ ಆಯ್ಕೆ.

By March 11, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಮಾ.೧೦: ಚಾರ್ಕೋಪ್ ಕನ್ನಡಿಗರ ಬಳಗ (ರಿ.) ಕಾಂದಿವಲಿ ಇದರ ವಿಶೇಷ ಮಹಾಸಭೆಯು ಇಂದಿಲ್ಲಿ ರವಿವಾರ ಸಂಜೆ ಉಪನಗರ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನಾದ ಸಭಾಗೃಹದಲ್ಲಿ ಬಳಗದ ತಾತ್ಕಾಲಿಕ ಸಮಿತಿ ಅಧ್ಯಕ್ಷ ಭಾಸ್ಕರ್ ವಿ.ಶೆಟ್ಟಿ ಅಧ್ಯಕ್ಷತೆ ಹಾಗೂ ಚಾರ್ಕೋಪ್ ಕನ್ನಡಿಗರ ಬಳಗದ ಗೌರವಾಧ್ಯಕ್ಷ ಗೋಪಾಲ ಸಿ.ಶೆಟ್ಟಿ (ಉತ್ತರ- ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ) ಮುಂದಾಳುತ್ವದಲ್ಲಿ ಜರುಗಿತು.

ಭಾಸ್ಕರ್ ವಿ.ಶೆಟ್ಟಿ ಮತ್ತು ಗೋಪಾಲ ಸಿ.ಶೆಟ್ಟಿ ಹಾಗೂ ಸದಸ್ಯರು ಶಾರದಾ ಮಾತೆಗೆ ದೀಪ ಪ್ರಜ್ವಲನೆಗೈದು ಸಭೆಗೆ ಚಾಲನೆ ನೀಡಿದರು. ಭಾಸ್ಕರವಿ.ಶೆಟ್ಟಿ ಪ್ರಸ್ತವಿಕನುಡಿಗಳನ್ನಾಡಿ ಸಭೆಯ ಉದ್ದೇಶ ಸಭಿಕ ಸದಸ್ಯರಿಗೆ ತಿಳಿಸಿದರು. ನನಗೆ ಈ ಒಂದು ಅವಕಾಶ ಕಲ್ಪಿಸಿಕೊಟ್ಟ ಕನ್ನಡಿಗರ ಬಳಗದ ಸಹಪಾಠಿ, ಸಂಗಡಿಗರಿಗೆ ನಾನು ಚಿರಋಣಿ ಆಗಿದ್ದೇನೆ ಎಂದರು.

ಗೋಪಾಲ ಸಿ.ಶೆಟ್ಟಿ ಮಾತನಾಡಿ ಮನಸ್ತಾಪಗಳೇನಿದ್ದರೂ ಪರಸ್ಪರ ಮುಖತಃ ಚರ್ಚಿಸಿ ಸಂಸ್ಥೆಯ ಮುನ್ನಡೆಗೆ ಬದ್ಧ ರಾಗಬೇಕು. ಸಂಘ ಸಂಸ್ಥೆಗಳಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯವಾದದ್ದು. ಅದನ್ನು ಹೊಂದಾಣಿಕೆಯೊಂ ದಿಗೆ ಪರಿಹಾರಿಸಿ ಕೊಳ್ಳಬೇಕು. ಸದ್ಯ ತಾಂತ್ರಿಕ, ಕಾನೂನುಬದ್ಧ ಕ್ರಮಗಳಿಂದ ಸಂಸ್ಥೆಗಳನ್ನು ಮುನ್ನಡೆಸುವುದೂ ಕಷ್ಟಕರ. ಅದಕ್ಕಾಗಿ ಆಧುನಿಕತೆಯ ಬದ್ಧರಾಗಿ, ಒಬ್ಬರನ್ನೊಬ್ಬರನ್ನು ತಿಳಿದುಕೊಂಡು ಸಂಸ್ಥೆಯ ಶ್ರೇಯೋಭಿವೃದ್ಧಿ ಮತ್ತು ಆ ಮೂಲಕ ಸಮಾಜದ ಉನ್ನತೀಕರಣಕ್ಕಾಗಿ ಶ್ರಮಿಸಬೆಕು. ಹಿರಿಯರು ಸ್ಥಾಪಿಸಿದ ಸಂಸ್ಥೆಯನ್ನು ಸುಸಾಂಗವಾಗಿ ಕಾರ್ಯ ನಿರ್ವಹಿಸಲು ಹಳೆ ಮತ್ತು ಹೊಸ ಸಮಿತಿಯ ಸದಸ್ಯರು ಅನ್ಯೋನ್ಯತೆಯಿಂದ ಸೇವಾ ನಿರತರಾಗಿ ಬಳಗದ ಭವಿಷ್ಯದ ಬಗ್ಗೆ ಯೋಚಿಸಬೇಕು. ಹಿರಿಯ ಸದಸ್ಯರುಗಳ ಮಾರ್ಗದರ್ಶನ ಪಡೆದು ಸಂಸ್ಥೆಯ ಗೌರವಕ್ಕೆ ಪಾತ್ರರಾಗ ಬೇಕು. ಆವಾಗ ನಮ್ಮ ಗೌರವವೂ ಹೆಚ್ಚುತ್ತದೆ. ಶಾಂತ ರೀತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಸಲು ಸಲಹಿ ಮುಂದೆ ಬರುವ ಹೊಸ ಸಮಿತಿಗೆ ನನ್ನಿಂದದ ಸಂಪೂರ್ಣ ಸಹಾಯ ನೀಡುದಾಗಿ ನುಡಿದರು.

ವಿಶ್ವಸ್ಥ ಸದಸ್ಯರುಗಳಾದ ಭಾಸ್ಕರ್ ಸರಪಾಡಿ, ಜಯ ಸಿ.ಶೆಟ್ಟಿ ಸದಸ್ಯರಾದ ಶಂಕರ ಡಿ.ಪೂಜಾರಿ, ಅಂತರಿಕ ಲೆಕ್ಕಪರಿ ಶೋಧಕ ಸದಾಶಿವ ಸಿ.ಪೂಜಾರಿ, ನ್ಯಾಯವಾದಿ ಗುರುಲಿಂಗ ಸಮಗೊಂಡ, ಕರುಣಾಕರ ಕನ್ನರ್ಪಾಡಿ, ಶಿವಯೋಗಿ ಸಣ್ಣಮನೆ ವೇದಿಕೆಯಲ್ಲಿ ಆಸೀನರಾಗಿದ್ದರು. ಶಶಿಧರ್ ಹೆಗ್ಡೆ, ವೀಣಾ ದೀಪಕ್ ಸುವರ್ಣ ಮತ್ತಿತರರು ಸಮಿತಿ ರಚನೆ ಬಗ್ಗೆ ಸಲಹೆ ಸೂಚನೆ ನೀಡಿದರು. ಕರುಣಾಕರ ಕನ್ನರ್ಪಾಡಿ ಆಯ್ಕೆಪ್ರಕ್ರಿಯೆ ನಡೆಸಿ ನೂತನ ಸಮಿತಿಯ ಯಾದಿ ವಾಚಿಸಿದರು.

ಸಭೆಯಲ್ಲಿ ಕನ್ನಡಿಗರ ಬಳಗಕ್ಕೆ ೨೦೨೪-೨೦೨೭ರ ಮೂರು ಸಾಲಿನ ಹೊಸ ಆಡಳಿತ ಸಮಿತಿ, ನೂತನ ಪದಾಧಿ ಕಾರಿಗಳ ಆಯ್ಕೆ ನಡೆಸಲಾಗಿದ್ದು ಗೋಪಾಲ ಸಿ.ಶೆಟ್ಟಿ (ಗೌರವಾಧ್ಯಕ್ಷರು), ರವೀಂದ್ರ ಎಂ.ಶೆಟ್ಟಿ ಪಳ್ಳಿ ಮಾಯಬೆಟ್ಟು ಗುತ್ತು (ಅಧ್ಯಕ್ಷರು), ಅವಿನಾಶ್ ಶೆಟ್ಟಿ (ಉಪಾಧ್ಯಕ್ಷರು), ಗುರುಪ್ರಕಾಶ್ ಎಂ. ಕೋಟಿಯನ್ (ಗೌರವ ಪ್ರಧಾನ ಕಾರ್ಯದರ್ಶಿ), ರಾಜೀವಿ ರಮೇಶ್ ಕೋಟಿಯನ್ (ಗೌರವ ಕೋಶಾಧಿಕಾರಿ), ಶಿವಯೋಗಿ ಸಣ್ಣಮನೆ (ಜೊತೆ ಕಾರ್ಯದರ್ಶಿ), ರಶ್ಮಿ ಆರ್.ಆಚಾರ್ಯ (ಜೊತೆ ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮೋಹನ್ ಎಸ್.ಶೆಟ್ಟಿ, ವಿಜಯಲಕ್ಷ್ಮಿ ಎಸ್.ಶೆಟ್ಟಿ, ವಿಶೇಷ ಸಲಹಾಗಾರರಾಗಿ ನ್ಯಾಯವಾದಿ ಗುರುಲಿಂಗ ಸಮಗೊಂಡ, ಶಶಿಧರ್ ಎಸ್.ಹೆಗ್ಡೆ, ಕರುಣಾಕರ ಕನ್ನರ್ಪಾಡಿ, ಪ್ರಶಾಂತ್ ಎಂ.ಭಟ್ ಮತ್ತು ಮಂಜುನಾಥ ಜಿ. ಬನ್ನೂರು (ಮಾಜಿ ಅಧ್ಯಕ್ಷರು), ಪದ್ಮಾವತಿ ಭಾಸ್ಕರ್ ಶೆಟ್ಟಿ (ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ), ಶಾಂತ ಎನ್.ಭಟ್ (ಸಂಚಾಲಕಿ, ಮಹಿಳಾ ವಿಭಾಗ),ಗೋಪಾಲ ತ್ರಾಸಿ (ಕಾರ್ಯಧ್ಯಕ್ಷರು, ಸಾಹಿತ್ಯ ಮತ್ತು ಸಂಸ್ಕ್ರತಿಕ ಸಮಿತಿ), ಸದಾಶಿವ ಸಿ.ಪೂಜಾರಿ (ಅಂತರಿಕ ಲೆಕ್ಕಪರಿಶೋಧಕ), ವಿನಯ ಭಟ್ (ಬಾಹ್ಯ ಲೆಕ್ಕಪರಿಶೋಧಕ) ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.

ಯಮುನಾ ಸಾಲಿಯಾನ್, ರಶ್ಮಿ ಆಚಾರ್ಯ, ರಾಜೀವಿ ಕೋಟಿಯನ್ ಪ್ರಾರ್ಥನೆಯನ್ನಾಡಿದರು. ಭಾಸ್ಕರ್ ಸರಪಾಡಿ ಸ್ವಾಗತಿಸಿದರು. ಜಯ ಸಿ.ಶೆಟ್ಟಿ ಮತ್ತು ಪದ್ಮಾವತಿ ಬಿ.ಶೆಟ್ಟಿ ಹೂಗುಚ್ಛ ನೀಡಿ ಗಣ್ಯರನ್ನು ಗೌರವಿಸಿದರು. ರಮೇಶ್ ಬಂಗೇರ, ಮೋಹನ್ ಶೆಟ್ಟಿ, ವಾಣಿ ಸಮಗೊಂಡ, ಕೌಷಿಕ್ ಬಂಗೇರ ಸಹಕರಿಸಿದ್ದು ಶಿವಯೋಗಿ ಸಣ್ಣಮನೆ ಸಭಾ ಕಲಾಪ ನಡೆಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ವಿಶೇಷ ಮಹಾ ಸಭೆ ಸಮಾಪನ ಕಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.