Skip to main content
www.kallianpur.com | Email : kallianpur7@gmail.com | Mob : 9741001849

ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿಗೈದ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ.

By September 5, 2023Kannada News
kallianpurdotcom: 05/09/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಸೆ.೦೫: ಬಂಟ ಸಮೂದಾಯದ ಉದ್ಯಮಿಗಳ ಒಕ್ಕೂಟ ಸಂಸ್ಥೆಯಾದ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಲಿಮಿಟೆಡ್ (ಐಬಿಸಿಸಿಐ) ಅಧ್ಯಕ್ಷ ಕೆ.ಸಿ ಶೆಟ್ಟಿ (ಕುತ್ಪಾಡಿ ಚಂದ್ರ ಶೆಟ್ಟಿ) ನೇತೃತ್ವದ ನಿಯೋಗವು ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಂದಾಳುತ್ವದಲ್ಲಿ ಕಳೆದ ಸೋಮವಾರ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (ಪ್ರಮುಖ ಮತ್ತು ಮಧ್ಯಮ ನೀರಾವರಿ ಸೇರಿದಂತೆ ಬೆಂಗಳೂರು ನಗರ ಅಭಿವೃದ್ಧಿ ಇನ್ನಿತರ ಖಾತೆ ಕ್ಯಾಬಿನೆಟ್ ಸಚಿವರು) ಅವರನ್ನು ಭೇಟಿ ಮಾಡಿತು.

ಕರ್ನಾಟಕದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವರೇ ನಿಯೋಗವು ಚರ್ಚಿಸಿದ್ದು ಈ ಬಗ್ಗೆ ಉಪ ಮುಖ್ಯಮಂತ್ರಿ ಅವರಿಗೆ ಕೆ.ಸಿ ಶೆಟ್ಟಿ ಅವರು ಸ್ಥೂಲವಾದ ಮಾಹಿತಿಯನ್ನಿತ್ತರು.

ಕರ್ನಾಟಕದಲ್ಲಿ ಬಂಟರ ಉದ್ಯಮಸ್ಥರ ಒಕ್ಕೂಟದ ಆಸಕ್ತಿಯನ್ನು ಪ್ರೋತ್ಸಾಹಿಸಿದ ಉಪ ಮುಖ್ಯಮಂತ್ರಿ ಅವರು ಉಭಯ ಜಿಲ್ಲೆಗಳಲ್ಲಿ ವ್ಯಾಪಾರ, ಉದ್ಯಮಗಳನ್ನು ಸುಲಭಗೊಳಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಸಿದರು. ಅಂತೆಯೇ ಕರ್ನಾಟಕದಲ್ಲಿ ವ್ಯಾಪಾರ ಮತ್ತು ವ್ಯಾಪಾರದ ಕಾರಣವನ್ನು ಉತ್ತೇಜಿಸಲು ಐಬಿಸಿಸಿಐಯೊಂದಿಗೆ ಸ್ಪಂದಿಸಿ ಕೆಲಸ ಮಾಡುವ ಉತ್ಸಾಹವನ್ನು ತೋರಿಸಿ ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವೆಂದು ಉಪ ಮುಖ್ಯಮಂತ್ರಿ ಪ್ರಶಂಸೆ ವ್ಯಕ್ಯಪಡಿಸಿದರು.

ಐಬಿಸಿಸಿಐ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಶೆಟ್ಟಿ, ಹಾಗೂ ಉದ್ಯಮಿಗಳಾದ ರೋಮಲ್ ಶೆಟ್ಟಿ (ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ, ಡೆಲ್ಲೋಯಿಟ್ ಸೌತ್ ಏಷ್ಯಾ), ರಾಜೇಶ್ ಶೆಟ್ಟಿ (ಸಿಎಂಡಿ, ಶಂಕರ್ ಇಲೆಕ್ಟ್ರಿಕಲ್ಸ್), ಉಪೇಂದ್ರ ಶೆಟ್ಟಿ (ಸಿಎಂಡಿ ಯುನಿವರ್ಸಲ್ ಎಜ್ಯುಕೇಶನ್ ಇನ್‌ಸ್ಟ್ಟಿಟ್ಯೂಷನ್ ಗ್ರೂಪ್), ಅಶ್ವಿನ್ ಹೆಗ್ಡೆ (ಸಿಎಂಡಿ, ವಿಶಾಲ್ ಗ್ಲೇಜರ್ಸ್ ಪ್ರೈವೇಟ್ ಲಿಮಿಟೆಡ್), ಬಾಗ್ಜುನ್ ಶೆಟ್ಟಿ (ಎಂಡಿ, ಲುಮೆನ್ಸ್ ಏರ್‌ಕಾನ್ ಪ್ರೈವೇಟ್ ಲಿಮಿಟೆಡ್) ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.