Skip to main content
www.kallianpur.com | Email : kallianpur7@gmail.com | Mob : 9741001849

ಗುಜರಾತ್ ಬಿಲ್ಲವ ಸಂಘ ಬರೋಡಾ, ಜಗದ್ಗುರು ನಾರಾಯಣ ಗುರುಗಳ ೧೬೯ನೇ ಜನ್ಮೋತ್ಸವ.

By September 4, 2023Mumbai News
kallianpurdotcom: 04/09/23
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಸೆ.೦೪: ದೇಶ ಸೇವೆಯೇ ಈಶ ಸೇವೆ ಎಂಬುವುದನ್ನು ಬೋಧಿಸಿದ್ದ ಯುಗಪುರುಷ ಜಗದ್ಗುರು ನಾರಾಯಣ ಗುರುಗಳ ೧೬೯ನೇ ಜನ್ಮೋತ್ಸವವನ್ನು ಗುಜರಾತ್ ಬಿಲ್ಲವ ಸಂಘವು ಶ್ರದ್ಧಾಭಕ್ತಿಪೂರ್ವ ಕ ಸಂಭ್ರಮದಿಂದ ಅಚರಿಸಿತು.

ಕಳೆದ ಭಾನುವಾರ ಗುಜರಾತ್ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದ ಬೈದಶ್ರೀ ಸಾಂಸ್ಕ್ರತಿಕ ಕೇಂದ್ರದಲ್ಲಿ ಗುಜರಾತ್ ಬಿಲ್ಲವ ಸಂಘವು ಗೌರವಾಧ್ಯಕ್ಷ ದಯಾನಂದ ಬೋಂಟ್ರ (ಬೆಳ್ಮಾಣ್) ಬರೋಡಾ ಅವರ  ಮಾರ್ಗದರ್ಶನದಲ್ಲಿ ಸಂಪನ್ನ ಗೊಂಡಿತು. ಬಿಲ್ಲವ ಸಂಘದ ಸದಸ್ಯರು ಮತ್ತು ಬಿಲ್ಲವ ಪರಿವಾರ ಹಾಗೂ ಭಕ್ತರು ಬೆಳಿಗ್ಗೆಯಿಂದ ಸ್ಥಳೀಯ ಕಾಯವರೋಹಣ ಗಾಯತ್ರಿ ಶಕ್ತಿಪೀಠದ ಅನುಯಾಯಿಗಳಿಂದ ಶೋಡಷೋಪಚಾರದೊಂದಿಗೆ ಗುರುಪೂಜೆ, ಪಾದುಕಾ ಪೂಜೆ ತದನಂತರ ಮಕ್ಕಳಿಂದ ಭಕ್ತಿಪೂರ್ವಕ ಮಾತ್ರöಸಂಪೂಜನೆ (ಜೀವನದ ಪ್ರಥಮ ಗುರುಗಳಾದ ತಂದೆ ತಾಯಿಯರ ಪೂಜೆ)ಸಂಪನ್ನ ಗೊಂಡಿತು.

ಗಾಯತ್ರಿಪರಿವಾರದ ಪ್ರಜ್ಞಾಪುತ್ರಿ ಉಮಾಬೆನ್ ಹಾಗೂ ಅನಿಲ್ ಭಾಯಿ ರಾವಲ್ ಅವರು ಮಕ್ಕಳ ಜೀವನದಲ್ಲಿ ಮಾತಾಪಿತರ ತ್ಯಾಗ ಬಲಿದಾನ ಮತ್ತು ಸ್ಥಾನ ದ ಕುರಿತು ಮನದಟುವ ಪ್ರವಚನಗೈದು ದೈವೀಮಯ ಹಾಗೂ ಭಾವನಾತ್ಮಕ ವಾತಾವರಣ ನಿರ್ಮಾಣ ಗೊಳಿಸಿದರು.

ಆರಂಭದಲ್ಲಿ ಗಣ್ಯರು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಆರತಿಗೈದು ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸಂಘದ ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ ಮತ್ತು ಅಮಿತಾ ವಿ.ಪೂಜಾರಿ ದಂಪತಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉಪಾಧ್ಯಕ್ಷರುಗಳಾದ ಹರೀಶ ಪೂಜಾರಿ, ಲೊಕಯ್ಯ ಪೂಜಾರಿ, ಪ್ರಭಾಕರ ಪೂಜಾರಿ, ವಾಸುಪಿ.ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಖಜಾಂಚಿ ಸುದೇಶ್ ವೈ.ಕೋಟಿಯಾನ್, ರವಿ ಸಾಲಿಯಾನ್, ರೋಹಿದಾಸ ಪೂಜಾರಿ, ದಯಾನಂದ ಕೆ. ಸಾಲಿಯಾನ್, ವಸಂತ ಕುಂದರ್, ಸುಮನ್ ಕೊಡಿಯಾಲ್‌ಬೈಲ್, ಮಹಿಳಾ ವಿಭಾಗದ ಶೋಭಾ ಡಿ.ಬೋಂಟ್ರ, ಜಯಂತಿ ಎಸ್ಕೆ ಸಾಲಿಯಾನ್, ಸರಿತಾ ಪೂಜಾರಿ, ರಜಿತಾ ಮನೋಜ್ ಪೂಜಾರಿ, ಎಂ.ಎಸ್ ರಾವ್ ಅಹ್ಮದಾಬಾದ್, ಮುಂತಾದ ಗಣ್ಯರು ಪ್ರಮುಖರಾಗಿ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.