Skip to main content
www.kallianpur.com | Email : kallianpur7@gmail.com | Mob : 9741001849

ಡಾ| ಫ್ರ‍್ಯಾಂಕ್ ಫೆರ್ನಾಂಡಿಸ್ ಹಾಗೂ ಪ್ರದೀಪ್ ಬರ್ಬೊಜಾ ಕಾಂಬಿನೇಷನ್‌ನ “ಕಥೆ ಮುಗಿದಿದೆ….” ಚಲನಚಿತ್ರದ ಪೋಸ್ಟರ್ ಬಿಡುಗಡೆ

By March 18, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಮಾ.೧೭: ಕರ್ನಾಟಕ ಕರಾವಳಿಯ ಉಡುಪಿ ಇಲ್ಲಿನ ದುಬಾಯಿ ಉದ್ಯಮಿ, ಕೊಡುಗೈದಾನಿ ಹಾಗೂ ಕಲಾಸ್ನೇಹಿ ಡಾ| ಡೇವಿಡ್ ಫ಼್ರ್ಯಾoಕ್ ಫೆರ್ನಾಂಡಿಸ್ ತೊಟ್ಟಂ ಅವರು ನಿರ್ಮಾಪಕರಾಗಿ ಕೊಂಕಣಿ, ತುಳು ಭಾಷೆಯ ಚಿತ್ರ ನಿರ್ದೇಶಕ ಪ್ರದೀಪ್ ಬರ್ಬೊಜಾ ಅವರ ಚೊಚ್ಚಲ ಕನ್ನಡ ಚಿತ್ರವು ಬಿಡುಗಡೆಯ ತಯಾರಿಯಲ್ಲಿದ್ದು ಇಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

“ಕಥೆ ಮುಗಿದಿದೆ….” ಎಂದು ಹೆಸರಿಟ್ಟಿರುವ ಈ ಚಿತ್ರವು ವಿಭಿನ್ನ ಕಥಾ ಹಂದರವನ್ನೊಳಗೊಂಡಿದೆ. ಕಳೆದ ಜೂನ್- ಜುಲಾಯಿ ತಿಂಗಳುಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು ಪ್ರಶಸ್ತಿ ವಿಜೇತ ಸಿನೆಮಾ `ನೀಲಿ ಹಕ್ಕಿ’ ಖ್ಯಾತಿಯ `ಅಮನ್ ಕರ್ಕೇರ’ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನೆಮಾ `ಸಪ್ತಸಾಗರದಾಚೆ’ ಖ್ಯಾತಿಯ ಮಾಸ್ಟರ್ `ಅಕ್ಷನ್ ಕರ್ಕೇರಾ’ ನಟನೆಯ `ಕಥೆ ಮುಗಿದಿದೆ’ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ತುಳು ರಂಗಭೂಮಿಯ ಹೆಸರಾಂತ ಕಲಾವಿದೆ ವಾಯ್ಲೆಟ್ ಕಟೀಲ್, ಕೊಂಕಣಿ ಕಲಾವಿದ ಮೆಲ್ಲು ವಾಲೆನ್ಶಿಯಾ, ತುಳು-ಕನ್ನಡ-ಕೊಂಕಣಿ ಚಿತ್ರನಟ ದೀಪಕ್ ಪಾಲಡ್ಕ ಹಾಗೂ ಈ ಚಿತ್ರದ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲಿ ಪ್ರದೀಪ್ ಬರ್ಬೊಜಾ ಪಾಲಡ್ಕ ಅಭಿನಯಿಸಿದ್ದಾರೆ. ಮೊದಲಬಾರಿಗೆ ಎಂಬಂತೆ ಕೊಂಕಣಿ ಬರಹಗಾರ, ಚಿಂತಕ ಸ್ಟ್ಯಾನಿ ಬೇಳ ಈ ಚಿತ್ರದಲ್ಲಿ ಅಥಿತಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಮೇ ತಿಂಗಳ ಮೊದಲ ವಾರಾದಲ್ಲಿ ಚಿತ್ರ ಬಿಡುಗಡೆಯ ತಯಾರಿ ನಡೆದಿದೆ. ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳ ಆಯ್ದ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಫ಼್ರ್ಯಾoಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.