kallianpurdotcom: 13/09/23
(ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಸೆ.೧೩: ಇಂಟರ್ ನ್ಯಾಷನಲ್ ಕಲ್ಚರಲ್ ಫೆೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಸಂಧ್ಯಾ ಕ್ರಿಯೇಷನ್ಸ್ ಇವೆಂಟ್ ನೆಟ್‌ವರ್ಕ್ ಟೀಂ ಯುಎಇ ಸಂಸ್ಥೆಗಳ ಸಹಯೋಗದೊಂದಿಗೆ ಚನ್ನಪಟ್ಣ ಕಲ್ಪಶ್ರೀ ಕಲಾ ಸಂಸ್ಥೆಯ ಸಹಕಾರದಲ್ಲಿ ಗಲ್ಫ್ ರಾಷ್ಟ್ರದ ದುಬೈ ಇಲ್ಲಿನ ಅಲ್ ಕುಸಿಸ್‌ನಲ್ಲಿರುವ ಫಾರ್ಚೂನ್ ಬಬಲ್ ಬಾಂಕ್ಬೆಟ್ ಸಭಾಂಗಣದಲ್ಲಿ ಇಂದಿಲ್ಲಿ ಬುಧವಾರ ಸಂಜೆ ಅಂತರಾಷ್ಟ್ರೀಯ ಸಾಂಸ್ಕ್ರತಿಕೋತ್ಸವ ಅದ್ಧೂರಿಯಾಗಿ ಜರಗಿತು.
ಕರ್ನಾಟಕದ ಸಿಟಿ-ಜಿಎಸ್‌ಟಿ ಜಂಟಿ ಆಯುಕ್ತ ಡಾ| ಎಸ್.ರಾಮಾನುಜ ದೀಪ ಬೆಳಗಿಸಿ ಸಾಂಸ್ಕ್ರತಿಕೋತ್ಸವ ಉದ್ಘಾಟಿಸಿ ಮಾತನಾಡಿ ದೇಶ ದೇಶಗಳ ನಡುವಿನ ಗಡಿಗಳೇ ಮಾಸಿಹೋಗಿವೆ ಎನ್ನುವಷ್ಟರ ಮಟ್ಟಿಗೆ ಜಗತ್ತು ಆರ್ಥಿಕವಾಗಿ ಹಾಗೂ ವೈಜ್ಞಾನಿಕವಾಗಿ ಮುಂದುವರೆದಿದೆ. ಆದರೆ ಮನಸು ಮನಸುಗಳ ನಡುವಿನ ಬಾಂಧವ್ಯದ ಗಡಿ ಮೃದು ಆಗುವುದರ ಬದಲಾಗಿ ಕೋಟೆ ಆಗುತ್ತಿರುವುದು ಖೇದಕರ ಎಂದರು. ಮಾತನ್ನು ಮುಂದುವರಿಸಿದ ಅವರು ಸಮಾಜಮುಖಿ ಸಹೃದಯತೆಯಿಂದ ಜಗತ್ತನ್ನು ಗೆಲ್ಲುವ ಪ್ರಯತ್ನ ಮಾಡೋಣ ಎಂದರು.
ಐಸಿಎಫ್‌ಸಿಐ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ೨೦೦೪ ರಿಂದ ಆರಂಭಗೊಂಡ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಸೌರಭ ಕಾರ್ಯಕ್ರಮವು ಈವರೆಗೆ ೩೩ ದೇಶಗಳಲ್ಲಿ ೪೧ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಉತ್ಸವ ನಡೆಸುವ ಮೂಲಕ ತನ್ನದೇ ಆದ ವಿಶೇಷ ವಿಶಿಷ್ಟ ರೀತಿಯಲ್ಲಿ ನಾಡು ನುಡಿಗೆ ಕೊಡುಗೆ ನೀಡುತ್ತಿದೆ ಎಂದರು.
ಇಂಡಿಯಾ ಅಥ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಡಾ| ಕೆ. ಬಿ. ನಾಗೂರ್ ಬಿಜಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಯಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಗೌರವ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ|ಡಿ.ಎಸ್. ವಿಶ್ವನಾಥ್, ಬಹರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್, ಸೆಂಟ್ ಅಧ್ಯಕ್ಷ ಶೋಧನ್‌ಪ್ರಸಾದ ಅತ್ತಾವರ ಮತ್ತು ಚನ್ನಪಟ್ಟಣದ ಕಲ್ಪಶ್ರೀ ನಿರ್ದೇಶಕ ಎಂ.ಸಿ ಸುಜೇಂದ್ರ ಬಾಬು ಉಪಸ್ಥಿತರಿದ್ದು ಸಾದನಾಶೀಲ ವ್ಯಕ್ತಿಗಳಾದ ಸುಗಮ ಸಂಗೀತ ಗಾಯಕ
ವೆಂಕಟಮೂರ್ತಿ ಶಿರೂರು, ಬಹುಮುಖ ಪ್ರತಿಭೆ ಪ್ರಭಾ ಎನ್.ಪಿಸುವರ್ಣ ಮುಂಬಯಿ, ಯಶಸ್ವಿ ಉದ್ಯಮಿ ರಮೇಶ್ ಸಂಪಂಗಿ ಹೈದರಾಬಾದ್ ಇವರಿಗೆ ಗೌರವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.
ಸಿಟಿ ಉಪ ಆಯುಕ್ತ ಹಾಗೂ ಲೇಖಕ ಮಹಮದ್ ರಫೀ ಪಾಶ ಅವರು ಕನ್ನಡ ನಾಡು ನುಡಿ ಮತ್ತು ಅಳಿ ವಿನಂಚಿನ ಭಾಷೆಗಳ ಕುರಿತು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಹೆಗ್ಗಡೆ ಮತ್ತು ತಂಡ ಮೈಸೂರು ಭರತನಾಟ್ಯ, ಮಧುಶ್ರೀ ಮತ್ತು ತಂಡ ಹೊಸಕೋಟೆ ಹಾಗೂ ನಂದಿನಿ ಮೈಸೂರು ಅವರು ಕುಚುಪುಡಿ ನೃತ್ಯ, ಅನನ್ಯ ಚನ್ನಪಟ್ಟಣ, ಪ್ರಸನ್ನ ಲಕ್ಷ್ಮಿ ಮತ್ತು ತಂಡ ಮೈಸೂರು , ವಿಜಯಲಕ್ಷ್ಮಿ ಹರಿಕುಮಾರ್ ತಂಡ ಹೈದರಾಬಾದ್ ಹಾಗೂ ಶ್ಲೋಕ ರೆಡ್ಡಿ ಹೈದರಾಬಾದ್ ನೃತ್ಯಾವಳಿಗಳನ್ನು, ಪೂರ್ಣಿಮಾ ಚತುರ್ವೇದಿ ಕಂಟೆಂಪರರಿ ಫ್ಯೂಸನ್ ಡಾನ್ಸ್ ಪ್ರದರ್ಶಿಸಿದರು. ವೆಂಕಟೇಶ್ ಮೂರ್ತಿ ಶೀರೂರು ಮತ್ತು ನಾಗಲಕ್ಷ್ಮಿ ಅವರಿಂದ ಭಾವ ಗೀತೆಗಳು, ಪ್ರಭಾ ಸುವರ್ಣ ಅವರು ಕವನ ವಾಚನಗೈದರು.
ಶ್ರೀಮತಿ ಗಣೇಶ್ ಮಂಗಳೂರು, ಶೈಲಾ ರಾಜಕುಮಾರಿ, ಹೈದಾರಬಾದ್ ಸಂಗೀತ ಕಛೇರಿ ನೀಡಿ ಯುಎಇ ಕನ್ನಡಿಗರ ಮನರಂಜಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.