
kallianpurdotcom: Mob 9741001849
ಉಡುಪಿ: ಕಲ್ಯಾಣಪುರದಲ್ಲಿರುವ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ಸಾಧಕ ವಿದ್ಯಾರ್ಥಿ ಸನ್ಮಾನ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಪ್ರತಿಭಾ ಪುರಸ್ಕಾರದ ಸಭಾ ಕಾರ್ಯಕ್ರಮವನ್ನು, ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು, ತದನಂತರ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸುವುದರ ಜೊತೆಗೆ, ಜೀವನದಲ್ಲಿ ನಮಗೆ ಸಿಗುವ ಉತ್ತಮ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಕಲೆಯನ್ನು ನಾವು ತಿಳಿಯಬೇಕು ಎಂದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ, ಡಾ. ಗಣನಾಥ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿಕೊಂಡಿದ್ದ, ಇನ್ನೋರ್ವ ಸಹ ಸಂಸ್ಥಾಪಕರಾದ, ಅಶ್ವತ್ ಎಸ್.ಎಲ್ ಅವರು “ಪ್ರಯತ್ನಂ ಸರ್ವ ಸಿದ್ದಿ ಸಾಧನಂ” ಯಶಸ್ಸಿಗೆ ಪ್ರಯತ್ನಗಳೇ ಸಾಧನಗಳು, ಒಬ್ಬ ವ್ಯಕ್ತಿ ತನ್ನ ಗುರಿಯನ್ನು ತಲುಪಲು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು, ಆಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ, ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಪ್ರತಿಭಾ ಪುರಸ್ಕಾರದ ನಂತರ, ಸಂಜೆ ಐದರಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಲಾಯಿತು, ನೀಟ್. ಜೆ.ಇ.ಇ. ಕೆ.ಸಿ.ಇ.ಟಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡ, ಕಾಲೇಜಿನ ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ, ಜಿ. ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ ಇದರ ಅಧ್ಯಕ್ಷರಾಗಿರುವ, ಪ್ರಕಾಶ್ ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಚಂದ್ರ ಶೆಟ್ಟಿ ಅವರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನ ವಹಿಸಿಕೊಂಡು, ಮಾತನಾಡಿದ ವಿದ್ವಾನ್ ಗಣಪತಿ ಭಟ್ ಅವರು, ವಿದ್ಯಾರ್ಥಿಗಳು ನಡೆ ನುಡಿಗಳಲ್ಲಿ ಪ್ರಾಮಾಣಿಕರಾಗಿರಬೇಕು, ತಂದೆ-ತಾಯಿಗಳ ಕನಸನ್ನು ಈಡೇರಿಸುವಲ್ಲಿ ಶ್ರಮಿಸಬೇಕು, ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀಮತಿ ಪ್ರೇಮಲತಾ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ ಎಸ್ ಪ್ರಸ್ತಾವಿಕ ನುಡಿಗಳನಾಡಿದರು. ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ, ರಾಮಕೃಷ್ಣ ಹೆಗಡೆ ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಸಹ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಗಣಪತಿ ಭಟ್ ಕೆ.ಎಸ್, ವಿಮಲ್ ರಾಜ್, ಆದರ್ಶ್ ಎಂ. ಕೆ, ಅಮೃತ್ ರೈ, ಹಾಗೂ ತ್ರಿಶಾ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ, ಪ್ರಭಾಕರ್ ವಿ ಭಂಡಾರಿ, ಶ್ರೀಮತಿ ಸರಿತಾ ಪಿ ಭಂಡಾರಿ, ಮತ್ತು ಶ್ರೇಷ್ಠ ಗುರುಗಳು ರೆಕ್ಟರ್ ಮಿಲಾಗ್ರೀಸ್ ಕ್ಯಾಥೆಡ್ರಲ್, ಕಲ್ಯಾಣಪುರ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ , ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಜೋಯಲ್ ಮನೋಜ್ ಫರ್ನಾಂಡಿಸ್, ಸರ್ವರನ್ನು ವಂದಿಸಿದರು. ಆಂಗ್ಲ ಭಾಷೆ ಉಪನ್ಯಾಸಕಿ ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿ ಗಳಿಂದ “ಸಿಂಧೂರ ಸಂಭ್ರಮ” ಎಂಬ ಪರಿಕಲ್ಪನೆಯಡಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
Good