Skip to main content
www.kallianpur.com | Email : kallianpur7@gmail.com | Mob : 9741001849

ಗುಜರಾತ್ ಬಿಲ್ಲವರ ಸಂಘದಿಂದ ಆಚರಿಸಲ್ಪಟ್ಟ ಧಾರ್ಮಿಕ ಸಭೆ ಆತ್ಮವನ್ನು ಪರಮಾತ್ಮನನ್ನಾಗಿಸಿ ಪಾವನರಾಗಿರಿ : ಕನ್ಯಾಡಿ ಬ್ರಹ್ಮಾನಂದಶ್ರೀ.

By October 4, 2023Kannada News
kallianpurdotcom: 04/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಅ.೦೧: ನಮ್ಮ ಜೀವನವನ್ನು ನಾವೇ ರೂಪಿಸುವ ಶಕ್ತಿಯನ್ನು ಪರಮಾತ್ಮನು ನಮಗೆ ನೀಡಿದ್ದು, ಆತ್ಮವನ್ನು ಪರಮಾತ್ಮ ನನ್ನಾಗಿಸಿ ಜೀವನ ಪಾವನಗೊಳಿಸಿ. ನಮ್ಮ ಕೈಯಿಂದಲೇ ನಾವು ಉತ್ತಮ ರೀತಿಯಲ್ಲಿ ಅನುಸರಿಸಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಆತ್ಮವನ್ನು ಪರಮಾತ್ಮ ನನ್ನಾಗಿಸಿ ಕೊಳ್ಳಬೇಕು. ನಾವು ಆರಾಧಿಸುವ ಕೋಟಿ-ಚೆನ್ನಯ ಹಾಗೂ ಜಗದ್ಗುರು ಬ್ರಹ್ಮಶ್ರೀ ಶ್ರೀನಾರಾಯಣಗುರು ಸ್ವಾಮೀಜಿ ಅವರ ಜೀವನ ಚರಿತ್ರೆಯನ್ನು ನಿರಂತರವಾಗಿ ವಾಚಿಸಿ ಅವಲೋಕಿಸಿ ಅವರ ಭೋದನೆಗಳನ್ನು ಅನುಸರಿ ಬಾಳು ಬೆಳಗಿಸಿ ಎಂದು ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಗುಜರಾತ್ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮ ಬೈದರ್ಕಳ ಸಭಾಗೃಹದ ಬೈದಶ್ರೀ ಸಾಂಸ್ಕ್ರತಿಕ ಕೇಂದ್ರದಲ್ಲಿ ಗುಜರಾತ್ ಬಿಲ್ಲವರ ಸಂಘವು ತನ್ನ ಬೆಳ್ಳಿಹಬ್ಬದ ಕಾರ್ಯಕ್ರಮವನ್ನಾಗಿಸಿ ಆಚರಿಸಿದ ಧಾರ್ಮಿಕ ಉತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಧ್ಯಾತ್ಮಿಕ ಪ್ರವಚನಗೈದು ನೆರೆದ ಸದ್ಭಕ್ತರನ್ನು ಕನ್ಯಾಡಿ ಬ್ರಹ್ಮಾನಂದಶ್ರೀ ಅನುಗ್ರಹಿಸಿದರು.

ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಬೆಳ್ಮಣ್ಣು (ಬರೋಡ) ಇವರ ದಕ್ಷ ಮಾರ್ಗದರ್ಶನ, ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಆರತಿ ನೆರವೇರಿಸಿ ಒಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಸುಮಾರು ರೂಪಾಯಿ ಒಂದು ಕೋಟಿ ೨೫ ಲಕ್ಷ ಮೌಲ್ಯದ ತಮ್ಮ ಸ್ವಂತ ಮಾಲಿಕತ್ವದ ಬ್ಯೆದಶ್ರೀ ಸಾಂಸ್ಕ್ರತಿಕ ಕೇಂದ್ರಕ್ಕೆ ತಾಗಿರುವ ಫ್ಲಾಟ್‌ನ್ನು ಸಂಘದ ಉಪಯೋಗಕ್ಕೆ ಅನುಕುಲವಾಗುವಂತೆ ಧರ್ಮಾರ್ಥವಾಗಿ (ದಾನಪತ್ರದ ಮೂಲಕ) ದಾನಗೈಯುತ್ತಿರುವುದನ್ನು  ಗೌರವಾಧ್ಯಕ್ಷ ದಯಾನಂದ ಬೋಂಟ್ರ ಹಾಗೂ ಶೋಭ ಬೋಂಟ್ರ ದಂಪತಿ ಘೋಷಿಸಿದರು. ಸುಮಾರು ೧೬ ವರುಷಗಳ ಹಿಂದೆ ಇದೇ ಬೈದ್ಯಶ್ರೀ ಸಾಂಸ್ಕ್ರತಿಕ ಕೇಂದ್ರದ ನಿರ್ಮಾಣಕ್ಕಾಗಿ ಶೋಭಾ ಡಿ.ಬೊಂಟ್ರ ಅವರ ಸದ್ಭಾವನೆಯ ಉದಾರ ಸಹಕಾರದ ನೆರವಿನ ರೂಪದ ಫಲವೇ ಬೈದಶ್ರೀ ಸಾಂಸ್ಕ್ರತಿಕ ಕೇಂದ್ರದ ನಿರ್ಮಾಣವಾಗಿರುವುದನ್ನು ದಯಾನಂದ ಬೋಂಟ್ರ ಈ ಸಂದರ್ಭದಲ್ಲಿ ಜ್ಞಾಪಿಸಿದರು.

ಸಂಘದ ಸ್ವಯಂಸೇವಕ ಸದಸ್ಯ ಬಂಧುಗಳಿಗೆ ಮತ್ತು ಗಾಯತ್ರಿ ಪರಿವಾರದ ಸದಸ್ಯರಿಗೆ ಸ್ವಾಮೀಜಿಯವªರು ಶಾಲು ಹೊದಿಸಿ, ಸ್ಮರಣಿಕೆ ಹೂಗುಚ್ಛಗಳೊಂದಿಗೆ ಸನ್ಮಾನಿಸಿದರು. ನಂತರ ಈ ವರ್ಷ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿದರು.

ಉಳ್ಳೂರು ಶೇಖರ್ ಶಾಂತಿ ಅವರು ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ಹರಸಿದರು. ದಯಾನಂದ್ ಶಾಂತಿ ತೀರ್ಥಪ್ರಸಾದ ವಿತರಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥ ಜಿ. ಪೂಜಾರಿ ಮತ್ತು ಅಮಿತಾ ವಿಶ್ವನಾಥ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್ ಮತ್ತು ರಜಿತಾ ಮನೋಜ್, ಕೋಶಾಧಿಕಾರಿ ಸುದೇಶ್ ವೈ.ಕೋಟಿಯಾನ್ ಮತ್ತು ಜ್ಯೋತಿ ಸುದೇಶ್, ಸೋಮನಾಥ ಪೂಜಾರಿ ಮತ್ತು ಸರಿತಾ ಸೋಮನಾಥ್, ಗಣೇಶ ಗುಜರಾನ್ ಮತ್ತು ವಸಂತಿ ಗಣೇಶ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ನಂತರ ೧೧ ಕುಂಡಗಳ ಗಾಯತ್ರಿ ಮಹಾಯಜ್ಞ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದ್ದು, ಬರೋಡ ಇಲ್ಲಿನ ಕಯವರೊಹನ್ ಗಾಯತ್ರಿ ಶಕ್ತಿಪೀಠದ ಪ್ರಜ್ಞಾಪುತ್ರಿ ವಿನಾಬೆನ್ ಖಬರಿಯಾ ಗಾಯತ್ರಿ ಯಜ್ಞ ನಡೆಸಿದರು. ಮಂಗಳಾರತಿ ಯೊಂದಿಗೆ ಯಜ್ಞ ಪೂರೈಸಿ ಮಹಾಪ್ರಸಾದ ವಿತರಣೆಯೊಂದಿಗೆ ಸಮಾಪನಗೊಳಿಸಲ್ಪಟ್ಟಿತು.

ಜಿಬಿಎಸ್ ಸ್ಥಾಪಕ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಉಪಾಧ್ಯಕ್ಷರುಗಳಾದ ಮತ್ತು ಲೋಕಯ್ಯ ಪೂಜಾರಿ (ಅಹ್ಮದಾಬಾದ್), ವಾಸು ವಿ.ಪೂಜಾರಿ (ಬರೋಡ), ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಜತೆ ಕಾರ್ಯದರ್ಶಿಗಳಾದ ಸರಿತಾ ಎಸ್.ಪೂಜಾರಿ ಮತ್ತು ದಯಾನಂದ ಸಾಲಿಯಾನ್, ಜತೆ ಕೋಶಾಧಿಕಾರಿ ರವಿ ಸಾಲಿಯಾನ್ ಮತ್ತಿತರ ಪದಾಧಿಕಾರಿಗಳು, ಮುಖ್ಯ ಸಲಹೆಗಾರ ಜಿನರಾಜ್ ಪೂಜಾರಿ, ಸಂಚಾಲಕ ರುಗಳಾದ ರೋಹಿದಾಸ್ ಪೂಜಾರಿ (ವಡೋದರ), ಸುಮನ್‌ಲಾಲ್ ಕೋಡಿಯಾಲ್‌ಬೈಲ್ (ಅಹ್ಮದಾಬಾದ್), ಪ್ರಭಾಕರ ಪೂಜಾರಿ (ಸೂರತ್), ಚೇತನ್ ಸಾಲಿಯಾನ್, ಗೌರವಾನ್ವಿತ ಸದಸ್ಯೆ ಶೋಭಾ ಬೋಂಟ್ರಾ ಬರೋಡಾ, ಜಯಂತಿ ಎಸ್ಕೆ ಸಾಲಿಯಾನ್, ಸೇರಿದಂತೆ ಸಂಘದ ಎಲ್ಲಾ ಶಾಖೆಗಳ ಸದಸ್ಯ ಬಂಧುಗಳು, ತುಳು ಕನ್ನಡಿಗರು ಮತ್ತು ಸ್ಥಳೀಯ ಗುಜರಾತಿ ಬಂಧುಗಳು ಭಾಗವಹಿಸಿದ್ದರು.

ವಿಶ್ವನಾಥ ಜಿ.ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಸು ವಿ.ಸುವರ್ಣ, ರೇವತಿ ಪೂಜಾರಿ, ಮಮತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರವಿ ಸಾಲಿಯಾನ್ ವಂದನಾರ್ಪಣೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.