Skip to main content
www.kallianpur.com | Email : kallianpur7@gmail.com | Mob : 9741001849

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಗೋಕುಲದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯ ಜಯಂತ್ಯುತ್ಸವ.

By May 1, 2023Kannada News

(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್) 

ಮುಂಬಯಿ (ಆರ್‌ಬಿಐ), ಮೇ.೦೧: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಯೋಗದೊಂದಿಗೆ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು ರವಿವಾರ (ಎ.೩೦)ರಂದು ಗೋಕುಲ ಸಭಾಗೃಹದಲ್ಲಿ ಸಂಭ್ರಮದಿಂದ ಆಚರಿಸಿತು.

ಉಡುಪಿಯಿಂದ ಆಗಮಿಸಿದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಯವರ ನೇತೃತ್ವ ಹಾಗೂ ಸಹ ಪುರೋಹಿತರುಗಳಾದ ಪ್ರತಾಪ್ ರಾವ್ ಮತ್ತು ನಾಗೇಶ್ ಶರ್ಮ ಅವರ ಸಹಭಾಗಿತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮದೊಂದಿಗೆ ಧಾರ್ಮಿಕ ವಿಧಿಗಳು ಪ್ರಾರಂಭವಾಗಿ ರುದ್ರ ಹವನ, ರುದ್ರಾಭಿಷೇಕ, ಶ್ರೀ ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಪೂಜಾವಿಧಿಗಳು, ಚಂದ್ರಶೇಖರ್ ಭಟ್, ಶಶಿಕಲಾ ದಂಪತಿ, ಸದಾಶಿವ ರಾವ್, ಮಮತಾ ರಾವ್ ದಂಪತಿ ರಾಮವಿಠಲ ಕಲ್ಲೂರಾಯ, ಜ್ಯೋತಿ ದಂಪತಿ, ಶ್ರೀಪಾದರಾಜ್ ಉಪಾಧ್ಯಾಯ, ದೀಪಾ ದಂಪತಿ ಯಜಮಾನತ್ವದಲ್ಲಿ ನೆರವೇರಿತು. ಗೋಕುಲ ಭಜನಾ ಮಂಡಳಿಯಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠನೆ ಮತ್ತು ಭಜನಾ ಸೇವೆ ನೆರವೇರಿತು.

ರುದ್ರ ಹವನದ ಪೂರ್ಣಾಹುತಿ, ಶಂಕರಾಚಾರ್ಯ ನಾಮಾರ್ಚನೆಯ ನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ಪುರೋಹಿತವರ್ಗದವರಿಂದ ವೇದಘೋಷ, ವಿದುಷಿ ಸಹನಾ ಪೋತಿಯವರಿಂದ ಸಂಗೀತ, ಕುಮಾರಿಯರಾದ ತನ್ವಿ ರಾವ್, ಜಾಹ್ನವಿ ಮತ್ತು ಭಾರ್ಗವಿ ಪೋತಿ, ಹಂಸಾ ಮತ್ತು ಮನಸ್ವಿ ಭಾರದ್ವಾಜ್ ಅವರಿಂದ ನೃತ್ಯ ಸೇವೆ ಜರಗಿತು.

ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಯವರು ತಮ್ಮ ಪ್ರಾರ್ಥನೆಯಲ್ಲಿ ಶ್ರೀ ಆದಿ ಶಂಕರಾಚಾರ್ಯರು ಅತ್ಯಂತ ಕಿರಿ ವಯಸ್ಸಿನಲ್ಲಿ ಮಹತ್ಸಾಧನೆಯನ್ನು ಮಾಡಿದ ಮಹಾಪುರುಷರು. ಅವರ ಜಯಂತಿಯ ಶುಭ ಸಂದರ್ಭದಲ್ಲಿ ಗುರುಗಳನ್ನು ಭಕ್ತಿ ಭಾವದಿಂದ ಸ್ಮರಿಸುವುದು ಶಿಷ್ಯರಾದವರೆಲ್ಲೆರ ಆದ್ಯ ಕರ್ತವ್ಯ. ವೇದೋಪನಿಷತ್ತುಗಳ ಸಾರವನ್ನು ಭಟ್ಟಿ ಇಳಿಸಿ, ಎಲ್ಲಾ ದೇವ ದೇವತೆಗಳ ಆರಾಧಕರಿಗೆ, ಜನಸಾಮಾನ್ಯರಿಗೆ ಅರ್ಥವಾಗುವಂತೆ, ನಿತ್ಯವೂ ಪಠಿಸುವಂತೆ ಸಹಸ್ರಾರು ಸರಳ ಸ್ತೋತ್ರಗಳನ್ನು ರಚಿಸಿ ಷಣ್ಮತ ಸ್ಥಾಪನಾರ್ಚರ್ಯನೆನಿಸಿದವರು ಗುರುಗಳು. ಇಂದು ನಾವು ಭಜನೆ, ಸ್ತೋತ್ರ ಪಠನೆ, ಹೋಮ ಹವನ ನಾಮಾರ್ಚನೆಗಳೊಂದಿಗೆ ಗುರುಗಳ ಆರಾಧನೆ ಮಾಡಿದ್ದೇವೆ. ಶ್ರೀ ಕ್ಷೇತ್ರಾಧಿಪತಿ ಶ್ರೀ  ಗೋಪಾಲ ಕೃಷ್ಣ ದೇವರು ಮತ್ತು ಗುರುಗಳು ಸರ್ವರಿಗೂ ಆಯುರಾರೋಗ್ಯ ಸಂಪನ್ನಿತ್ತು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.