(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಜೂ.೨೬: ಮು೦ಬಯಿ ಖ್ಯಾತ ಶಿವಾ’ಸ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಇನ್ನೋವೇಶನ್ಸ್ (ಸೀಪಿ) ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಯೊ೦ದಿಗೆ ಮೌಲ್ಯವರ್ಧಿತ ಮತ್ತು ಕೌಶಲ್ಯವರ್ಧಿತ ಹೇರ್ ಎಂಡ್ ಬ್ಯೂಟಿ ಥೆರಪಿ (Certificate Programme in Hair andBeaty Therapy (HBT) ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಸೈಯ್ನಿಂಗ್ ಎಂಡ್ ಟ್ರಿಟಿಂಗ್ ಹೇರ್ (Diploma Programme in Designing and Treating Hair (DTH) ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಗಳನ್ನು ಮ೦ಗಳೂರಿನಲ್ಲಿ ಆರ೦ಭಿಸಲಿದೆ ಎಂದು ಮು೦ಬಯಿ ಬಾಲಿವುಡ್ ರಂಗದಲ್ಲಿ ಹೇರ್ ಸ್ಟೆಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾ’ಸ್ ಹೇರ್‌ರ್ ಡಿಸೈರ‍್ಸ್ನ ಆಡಳಿತ ನಿರ್ದೇಶಕ, ಶಿವಾ’ಸ್ ಕಾಲೇಜ್ ಕಾರ್ಯಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ತಿಳಿಸಿದರು.
ಕಳೆದ ಬುಧವಾರ (ಜೂ.21) ಮ೦ಗಳೂರು ಅಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಡಾ| ಶಿವರಾಮ ಭಂಡಾರಿ ಅವರು ನಮ್ಮ ಗುಲಾಬಿ ಕೃಷ್ಣ ಭಂಡಾರಿ ಟ್ರಸ್ಟ್ ಸಂಚಾಲಕತ್ವದಲ್ಲಿ ಮ೦ಗಳೂರು ದೇರಳಕಟ್ಟೆಯಲ್ಲಿನ ಪ್ಲಾಮಾ ನೆಸ್ಟ್ ಕಟ್ಟಡದಲ್ಲಿ ಇದೇ ಆಗಸ್ಟ್ನಲ್ಲಿ ಈ ಕಾಲೇಜು ಅರ೦ಭಗೊಳಿಸಲಿದ್ದೇವೆ. ದ್ವಿತೀಯ ಪಿಯುಸಿ ಮತ್ತು ಉನ್ನತಶಿಕ್ಷಣ ಹೊಂದಿರುವ ಯಾರೂ ಇಲ್ಲಿನ ಕಾಲೇಜು ಸೇರಬಹುದು. ಇದು ಶೀಘ್ರಗತಿಯಲ್ಲಿ ಉದ್ಯೋಗ ಅಥವ ಸ್ವಉದ್ಯಮ ಪಡೆಯಲು ಅನುಕೂಲಕರವಾದ ಮೌಲ್ಯವರ್ಧಿತ ಮತ್ತು ಕೌಶಲ್ಯವರ್ಧಿತ ಹೇರ್ ಎಂಡ್ ಬ್ಯೂಟಿ ಥೆರಪಿ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಸೈಯ್ನಿಂಗ್ ಎಂಡ್ ಟ್ರಿಟಿಂಗ್ ಟ್ರಿಟಿಂಗ್ ಹೇರ್ ಪ್ರೋಗ್ರಾಂ ಆಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪದವಿಯನ್ನು ಒದಗಿಸುವ ರಾಷ್ಟ್ರದ ಮೊತ್ತಮೊದಲ ಏಕೈಕ ಸಂಸ್ಥೆ ಶಿವಾ’ಸ್ ಕಾಲೇಜ್ ಅರ್ಥತ್ ಸೀಪಿ ಸಂಸ್ಥೆಯಾಗಿದೆ ಎಂದೂ ಡಾ| ಭಂಡಾರಿ ತಿಳಿಸಿದರು.
ರಾಷ್ಟ್ರೀಯ ಶೈಕ್ಷಣಿಕ ನೀತಿ (NEP) ಅನುಸಾರ ಶಿವಾ’ಸ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಇನ್ನೋವೇಶನ್ಸ್ ಆರಂಭಿಸಿದ್ದೇವೆ. ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ವೃತ್ತಿಪರ ಸರ್ಟಿಫಿಕೇಟ್ ಯಾ ಡಿಪ್ಲೋಮಾ ಕೋರ್ಸ್ ಗಳನ್ನು ಪಡೆಯಲುದ್ದೇಶಿತ ವಿದ್ಯಾರ್ಥಿಗಳಿಗೆ ಕಾಲೇಜು ಸೇರ್ಪಡೆಗೆ ಇದೊಂದು ಸುವರ್ಣಅವಕಾಶ ಒದಗಿಸುತ್ತಿದೆ ಎ೦ದು ವಿವರಿಸಿದರು.
ನನ್ನ ತಾಯಿ ಗುಲಾಬಿ ಕೃಷ್ಣ ಭಂಡಾರಿಯವರ ಆಸೆಯನ್ನು ಪಾಲಿಸಲು ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ 1988ರಲ್ಲಿ ಶಿವಾಸ್ ಸಂಸ್ಥೆ ಸ್ಥಾಪಿಸಿದೆ. 1993ರಲ್ಲಿ ಸ್ಟೈಲೋ ಹೇರ್ ಪಾರ್ಲರ್, 2001ರಲ್ಲಿ ಶಿವಾಸ್ ಸ್ಟೈಲೋ, ಕ್ರಮೇಣ ಕೇಶ ವಿನ್ಯಾಸವನ್ನು ವೃತ್ತಿಪರ ಮೂಲವನ್ನಾಗಿ ಪರಿವರ್ತಿಸುವ ಮೂಲಕ ಯುವ ಪೀಳಿಗೆಗೆ ತರಬೇತಿ ನೀಡುವ ಸಲುವಾಗಿ 2009ರಲ್ಲಿ ಶಿವಾಸ್ ಅಕಾಡೆಮಿ ಸ್ಥಾಪಿಸಿರುವೆ. 2007ರಲ್ಲಿ ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್, 2022ರಲ್ಲಿ ಶಿವಾಸ್ ಸೆಲ್ಯೂಟ್ ಸಂಸ್ಥೆಗಳನ್ನು ನಡೆಸಿ ಎಲ್ಲವನ್ನೂ ಮುನ್ನಡೆಸುತ್ತಿದ್ದು ಇದೀಗ ಶಿವಾಸ್ ಸಮೂಹ ಮೂರು ದಶಕಗಳ ಸಾರ್ಥಕ ಸೇವೆಯಲ್ಲಿ ಸಾಗುತ್ತಿದೆ. ಕೇಶವೃತ್ತಿಯ ಜೊತೆಗೆ ಅತ್ಯಾಧುನಿಕ ಶೈಲಿಯ ಕೂದಲ ಆರೈಕೆ, ಕೂದಲ ವಿಸ್ತರಣೆ, ಚರ್ಮದ ಆರೈಕೆ, ದೇಹದ ಸ್ವಾಸ್ಥತೆ, ಚರ್ಮದ ಹಚ್ಚೆ, ಮಧುವಿನ ಶೃಂಗಾರ,ಉಗುರುಗಳ ಹೊಳಪು ಇತ್ಯಾದಿಗಳ ತರಬೇತಿ ನೀಡಿ ಶಿವಾ’ಸ್ ಅಕಾಡೆಮಿ ಸರ್ಟಿಫಿಕೇಟ್ ನೀಡಿ ವೃತ್ತಿಪರರನ್ನಾಗಿಸಿದೆ. ನಮ್ಮಲ್ಲಿ ತರಬೇತಿ ಪಡೆದ 98% ವಿದ್ಯಾರ್ಥಿಗಳು ಇಷ್ಟಾರ್ಥ ಉದ್ಯೋಗ ಅವಕಾಶಗಳನ್ನು ಪಡೆದಿರುವರು ಮಾತ್ರವಲ್ಲದೆ, ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಸವಾಲನ್ನು ಸ್ವೀಕರಿಸಿ ಆಥಿs೯ಕವಾಗಿ ಸ್ವತಂತ್ರರಾಗಿ ಯಶಸ್ವಿ ಸ್ವಉದ್ಯಮಿಗಳಾಗಿ ಮುನ್ನಡೆಯುತ್ತಿದ್ದಾರೆ ಎ೦ದ ಡಾ| ಶಿವಾ ಹೇಳಿದರು.
ಅಂತರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವ ಶಿವಾ’ಸ್ ಅಕಾಡೆಮಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ ಸಂಚಾಲಕತ್ವದಡಿ ಸೇವಾ ನಿರತವಾಗಿದ್ದು, ಜಗತ್ತಿನ ಹೆಸರಾಂತ ಟೋನಿ ಆಂಡ್ ಗೈ ಸಂಸ್ಥೆಯಿಂದ ಪ್ರಮಾಣೀಕರಣಪತ್ರ ಹೊಂದಿದೆ. ಇದೀಗ ವಿಶ್ವದ ಪ್ರತಿಷ್ಠಿತ ವಿಡಾಲ್ ಸಾಸೂನ್ ಸಂಸ್ಥೆಯಿಂದಲೂ ಸುಧಾರಿತ ಪ್ರಮಾಣೀಕರಣಪತ್ರಕ್ಕೆ ಭಾಜನವಾಗಿದೆ ಲಂಡನ್ (ಯುಕೆ) ಮೂಲದ ವಿಶ್ವಪ್ರಸಿದ್ಧ ಹೇರ್ ಸ್ಟೈಲಿಂಗ್ ಅಕಾಡೆಮಿ ಎಂದೆಣಿಸಿದ ಅರ್ಥ್ ಅಕಾಡೆಮಿ ಕೂಡಾ ಅಂತರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವ ಸಂಸ್ಥೆಯನ್ನು ಮಹಾರಾಷ್ಟ್ರ ರಾಜ್ಯದದ್ಯಾಂತ ವೃತ್ತಿಪರ ಶಿಕ್ಷಣ ಸಂಸ್ಥೆ ನಡೆಸಲು ಸಂಯೋಜಿತ ಅಧಿಕೃತ ಸಂಸ್ಥೆಯನ್ನಾಗಿಸಿ ಆಯ್ದುಕೊಂಡಿದೆ. ಈ ಮೂಲಕ ಬೃಹನ್ಮುಂಬಯಿಯಲ್ಲಿ ಎರಡು (ಅಂಧೇರಿ ಮತ್ತು ಡೊಂಬಿವಿಲಿ) ಶಿವಾ’ಸ್ ಅಕಾಡೆಮಿಗಳನ್ನು ನಡೆಸುತ್ತಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶಿವಾ’ಸ್ ಸಂಸ್ಥೆಯ ಸಾಧನೆಗಳ ಮುಂದುವರಿದ ಭಾಗವಾಗಿಸಿ ಮ೦ಗಳೂರಿನಲ್ಲಿ ಸೀಪಿ ಕಾಲೇಜ್ ಆರ೦ಭಿಸುತ್ತಿದೆ.ಶೇ. 100 ಉದ್ಯೋಗಾವಕಾಶ ಪಡೆಯಬಹುದಾಗಿದೆ ಎ೦ದರು.
ಹೆಚ್ಚಿನ ಮಾಹಿತಿಗೆ 9845224740 ಸ೦ಪಕಿ೯ಸಬಹುದಾಗಿದೆ. ಶಿವಾ’ಸ್ ಸಮೂಹದ ಸಿಇಒ ಡಾ| ವಿನೋದ್ ಚೋಪ್ರಾ, ಸೀಪಿ ಪ್ರಾ೦ಶುಪಾಲೆ ರೊವಿನಾ ಎಸ್.ಸೋನ್ಸ್, ಕ್ಯಾ೦ಪಸ್ ಮ್ಯಾನೇಜರ್ ಸೋಮಶೇಖರ ಎ೦. ಭ೦ಡಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.