Skip to main content
www.kallianpur.com | Email : kallianpur7@gmail.com | Mob : 9741001849

ಹರೇಕಳ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಗೋಡೆ ಕುಸಿತ ತೃತೀಯ ತರಗತಿ ವಿದ್ಯಾರ್ಥಿನಿ ದಾರುಣ ಸಾವು.

By May 21, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, (ಆರ್‌ಬಿಐ) ಮೇ.೨೦: ಮಂಗಳೂರು ಕೋಣಾಜೆ ಇಲ್ಲಿನ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತೃತೀಯ ತರಗತಿ ವಿದ್ಯಾರ್ಥಿನಿ ಇಲ್ಲಿನ ಶಾಲೆಯ ಆವರಣ ಗೋಡೆ ಕುಸಿದು ದಾರುಣ ವಾಗಿ ಸಾವನ್ನ ಪ್ಪಿರುವ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಸಂಜೆ ಸ0ಭವಿಸಿದೆ.

ಸಂಜೆ ಸಮಯ ಸುರಿಯುತ್ತಿದ್ದ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದ್ದು ನ್ಯೂಪಡ್ಪು ನಿವಾಸಿ ಸಿದ್ದೀಖ್ ಮತ್ತು ಜಮೀಲಾ ದಂಪತಿ ಸುಪುತ್ರಿ ಶಾಝಿಯಾ ಬಾನು (೭.) ಮೃತ ಬಾಲಕಿ ಎನ್ನಲಾಗಿದೆ.

ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿದ್ಯಾರ್ಥಿಗಳ ಶಿಬಿರ ನಡೆಯು ತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು. ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟ್‌ನಲ್ಲಿ ಆಟ ವಾಡುವ ಸಂದರ್ಭ ಗೋಡೆ ಬಾಲಕಿ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿ ಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.