(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
“ಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ|ಕೇಶವ ಹೆಗ್ಡೆ ಕೊರ್ಸೆ ಅವರಿಂದ ಉಪನ್ಯಾಸ”
ಮುಂಬಯಿ (ಆರ್‌ಬಿಐ), ಜೂ.೨೮: ಜಲ ಸಂರಕ್ಷಣೆಯ ಬಗ್ಗೆ, ಕೆರೆಗಳ ಪುನರುಜ್ಜೀವನದ ಬಗ್ಗೆ ಸಂಬಂಧಪಟ್ಟ ತಜ್ಞ ಸಂಪನ್ಮೂಲ ವ್ಯಕಿಗಳ ಭಾಗವಹಿಸುವಿಕೆಯೊಂದಿಗೆ ಸತತ ಕಾಯಕ್ರಮವನ್ನು ಮಾಡುತ್ತಿರುವ ಐ-ಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಸಾರಿ ಮಳೆ ನೀರು ಕೊಯ್ಲು, ಸಂಗ್ರಹಣೆ ಮತ್ತು ನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಗಮನ ಹರಿಸಿದೆ .
ಐ-ಲೇಸಾವು ಜು.೦೨, ಭಾನುವಾರ ಸಂಜೆ ೭:೩೦ ಗಂಟೆಗೆ ಝೂಮ್ ವಸ್ತುತಃ ವೇದಿಕೆಯಲ್ಲಿ ಮಳೆ ನೀರು ಕೊಯ್ಲು ಮತ್ತು ನೀರು ಇಂಗಿಸುವಿಕೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಶಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ, ಪರಿಸರ ಪ್ರೇಮಿಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ| ಕೇಶವ ಹೆಗ್ಡೆ ಕೊರ್ಸೆ ಇವರು ನೀರಿನ ಕೊಯ್ಲಿನ ಪ್ರಾಮುಖ್ಯತೆ, ಮನೆ ಮನೆಗಳಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಳೆಯ ನೀರನ್ನು ಅಂತರ್ಜಲವಾಗಿ ಭೂಮಿಗಿಳಿಸುವ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ತಿಳಿಸಿ ಕೊಡಲಿದ್ದಾರೆ. ಐ-ಲೇಸಾದ ಅನಂತ್ ರಾವ್ ನಡೆಸಲಿದ್ದಾರೆ.
ಆಸಕ್ತ ನಾಗರೀಕರು, ವಿದ್ಯಾರ್ಥಿಗಳು Zoom Meeting ID : 81978777104 ಮತ್ತು Passcode:ilesa ಬಳಸಿಕೊಂಡು ಈ ಅತ್ಯವಶ್ಯಕ ಮತ್ತು ಸಕಾಲಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮುಂದಿನ ಪೀಳಿಗೆಗೆ ನೀರು ಉಳಿಸುವಲ್ಲಿ ಮತ್ತು ನೀರಿನ ಬರಗಾಲ ತಪ್ಪಿಸುವಲ್ಲಿ ಸಹಕರಿಸ ಬೇಕೆಂದು ಐ-ಲೇಸಾ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಡಾ| ಕೇಶವ ಹೆಗ್ಡೆ ಕೊರ್ಸೆ
ಶಿರಸಿ ತಾಲೂಕು ಬಿಸಿಲ ಕೊಪ್ಪದ ಶಿವಳ್ಳಿಯ ಕೊರ್ಸೆಯಲ್ಲಿ ಮಹಾಬಲ ಹೆಗ್ಡೆ ಮತ್ತು ಗೌರಿ ಹೆಗ್ಡೆ ದಂಪತಿ ಸುಪುತ್ರನಾಗಿ ಜನಿಸಿದ ಕೇಶವ ಹೆಗ್ಡೆ ಬಾಲ್ಯ ಜೀವನದಲ್ಲಿ ಸದಾ ಹರಿದ್ವರ್ಣದ ಪಶ್ಚಿಮಘಟ್ಟ ಮತ್ತು ಸದಾ ಲವಲವಿಕೆಯ ಅಲೆಗಳ ಕಲೆಗಳ ನಾಡು ಕರಾವಳಿ ಪರಿಸರದಿಂದ ಪ್ರಭಾವಿತರಾದವರು. ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಒsಛಿ ಪಡೆದ ನಂತರ ಕೇಶವ ಹೆಗ್ಡೆಯವರು ಪಶ್ಚಿಮ ಘಟ್ಟದ ಮತ್ತು ಕರಾವಳಿ ಪ್ರದೇಶದ ಜೀವ ವೈವಿಧ್ಯ , ಜೈವಿಕ ಪರಿಸರ ಮತ್ತು ಔಷಧಿ ಗಿಡಮೂಲಿಕೆಗಳ ಕುರಿತು ಸಂಶೋಧನೆ ನಡೆಸಿ ಪಿಹೆಡಿ ಗಳಿಸಿದವರು. ಪರಿಸರದ ಬಗ್ಗೆ ಜನ ಜಾಗೃತಿ ಮತ್ತು ಬರವಣಿಗೆಯಲ್ಲಿ ತೊಡಗಿ ಕೊಂಡಿರುವ ಇವರು ಉಜಿರೆಯ ಎಸ್‌ಡಿಎಂ ಕಾಲೇಜ್‌ನಲ್ಲಿ ಸಸ್ಯಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದ ಬಗ್ಗೆ ಹಲವಾರು ವಿದ್ಯಾರ್ಥಿಗಳಿಗೆ ಎರಡು ದಶಕಗಳ ಕಾಲ ಅಧ್ಯಾಪನ ವೃತ್ತಿಯ ಮೂಲಕ ತನ್ನ ಜ್ಞಾನವನ್ನು ಧಾರೆಯೆರೆದವರು.
ಸಂಶೋಧನಾ ಪ್ರವೃತ್ತಿಯ ಕೃಷಿಕರಾಗಿರುವ ಡಾ| ಕೇಶವ ಹೆಗ್ಡೆ ಪ್ರಸ್ತುತ ಶಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಇಲ್ಲಿ ನಿರ್ದೇಶಕರಾಗಿದ್ದು, ಸಂತುಲಿತ ಕೃಷಿ ಮೂಲಕ ಸಸ್ಯ ಶಾಸ್ತ್ರದ ಸಂರಕ್ಷಣೆ ಹಾಗೆಯೆ ಸುಜ್ಞಾನ ಅಕಾಡೆಮಿ ಫಾರ್ ಎಜ್ಯುಕೇಶನಲ್ ರಿಸಾರ್ಚ್ ಎಂಡ್ ಟ್ರೆನಿಂಗ್ ಸೆಂಟರ್ ಇದರ ನಿರ್ದೇಶಕರಾಗಿದ್ದು ನವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂಫಿಲ್ ಮತ್ತು ಪಿಹೆಚ್‌ಡಿ ಬಗ್ಗೆ ಮಾರ್ಗದರ್ಶನ ನೀಡುತ್ತಾ ಸಮಾಜದ ಸುವ್ಯವಸ್ಥೆಯಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಸಮರ್ಪಿಸಿಕೊಡು ಬಂದವರು. ಅಮೆರಿಕಾದ ಜಾರ್ಜಿಯಾ ರಾಜ್ಯಪಾಲರಿಂದ Honorary Citizenship of Georgia ಗೌರವ ಪಡೆದಿರುವ ಡಾ| ಹೆಗ್ಡೆ ಪಶಿಮಘಟ್ಟ ಪರಿಸರ ಉಳಿಸುವಿಕೆಯಲ್ಲಿ ತೊಡಗಿ ಕರ್ನಾಟಕ ಸರಕಾರ ಕೊಡಮಾಡುವ `ಪರಿಸರ ಶ್ರೀ’ ಪಶಿಮಘಟ್ಟ ಟಾಸ್ಕ್ ಫೋರ್ಸ್ ಮತ್ತು ಔಷಧೀಯ ಸಸ್ಯಗಳ ಪ್ರಾಧಿಕಾರಕ್ಕೆ ಸಂಪನ್ಮೂಲ ಸಲಹೆಗಾರರಾಗಿ ಕರ್ನಾಟಕ ಸರಕಾರದಿಂದ ಆಯ್ಕೆಯಾಗಿದ್ದ ಇವರು ೨೦೦೮ರಲ್ಲಿ `ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಆಯ್ಕೆಯಾದವರು. ಪ್ರಸ್ತುತ ಶಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಜಲ ಮೂಲ ರಕ್ಷಣೆ , ಔಷಧೀಯ ಸಸ್ಯ ಸಂಕುಲ ರಕ್ಷಣೆಯಲ್ಲಿ ಸಂತುಲಿತ ಕೃಷಿಕನಾಗಿ ತೊಡಗಿಕೊಂಡು ಸಾವಿರಾರು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ರಾಗಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.