Skip to main content
www.kallianpur.com | Email : kallianpur7@gmail.com | Mob : 9741001849

ಐಲೇಸಾದಲ್ಲಿ ಯುವ ವಿಜ್ಙಾನಿ ಡಾ| ದಿನೇಶ್ ಶೆಟ್ಟಿ ಅವರಿಂದ ನೀರು ಜೀವಜಲ ಬೆಲೆ ಯಾಕಿಲ್ಲ ವಿಶಿಷ್ಠ ಜನ ಜಾಗೃತಿ ಕಾರ್ಯಕ್ರಮ

By May 20, 2023News

(ವರದಿ :  ರೋನ್ಸ್ ಬಂಟ್ವಾಳ್)

ಜೀವ ಜಲ ನೀರಿನ ಶುದ್ಧಿಕರಣ ಮತ್ತು ಅದರ ಪರಿಪೂರ್ಣ ಸಂರಕ್ಷೆಯ,ಸಂಸ್ಕರಣೆಯ ಬಗ್ಗೆ ಐಲೇಸಾ ದಿ ವಾಯ್ಸ್ ಆಫ್ ಓಶನ್(ರಿ) ಸಂಸ್ಥೆಯ ಜೂಮ್ ವೇದಿಕೆಯಲ್ಲಿ ವಿಶ್ವದ ಖ್ಯಾತ ಯುವ ವಿಜ್ಙಾನಿ ಖಲೀಫಾ ವಿಶ್ವ ವಿದ್ಯಾಲಯದ ರಾಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ| ದಿನೇಶ್ ಶೆಟ್ಟಿ ಕರ್ಕಿಯವರು ವಿಶದವಾಗಿ ತಿಳಿಸಿಕೊಡಲಿದ್ದಾರೆ. ಕಾರ್ಯಕ್ರಮವನ್ನು ಐಲೇಸಾದ ಅನಂತ್ ರಾವ್ ನಡೆಸಿಕೊಡಲಿದ್ದು ಕಾರ್ಯಕ್ರಮ ಮೇ ೨೧ ಭಾನುವಾರ ಭಾರತದ ಸಮಯ ಸಂಜೆ ೭:೩೦ ಸಮಯ ಐಲೇಸಾದ ಜೂಮ್ ವೇದಿಕೆಯಲ್ಲಿ ನಡೆಯಲಿದೆ.

ಅಸಕ್ತರು Meeting Id: 834 5783 5891, Pass Code:ilesa. ಬಳಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀವಜಲ ನೀರಿನ ಸಂರಕ್ಷಣೆಯಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಲು ಇದು ಸದಾವಕಾಶ ಎಂದು ಐಲೇಸಾದ ಮೀಡಿಯಾ ಮತ್ತು ಮುಂಬೈ ಸಂಚಾಲಕ ಸುರೇಂದ್ರ ಕುಮಾರ್ ಮಾರ್ನಾಡು ತಿಳಿಸಿದ್ದಾರೆ.

ಡಾ| ದಿನೇಶ್ ಶೆಟ್ಟಿ ಕರ್ಕಿಯವರ ಯಶೋಗಾಥೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಕೆರಾಡಿ ಬಿಡಿನ ಮನೆ ದಿವಂಗತ ಆನಂದ ಶೆಟ್ಟಿ ಮತ್ತು ಕರ್ಕಿ ಒಳಮನೆ ಸಾದಮ್ಮ ಶೆಟ್ಟಿ ಯವರ ಮಡಿಲ ಮಗನಾಗಿ ೧೯೮೨ ರಲ್ಲಿ ಹುಟ್ಟಿದ ದಿನೇಶ್ ಶೆಟ್ಟಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಂಭಿಸಿದ್ದು ಎಲ್ಲ ಕರಾವಳಿಗರಂತೆ ಗುಡ್ಡಿಯಂಗಡಿಯ ಒಂದು ಸರಕಾರೀ ಶಾಲೆಯಲ್ಲಿ. ಬಾಲ್ಯದಲ್ಲಿಯೇ ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸಿಕೊಂಡ ದಿನೇಶ್ ಉಜಿರೆಯ ಮಂಜುನಾಥ ಕಾಲೇಜಿನಲ್ಲಿ PU ಮುಗಿಸಿ ಮುಂದೆ ಕುಂದಾಪುರದ ಭಂಡಾರ್ಸ್ ಕಾರ್ ಕಾಲೇಜಿನಲ್ಲಿ ವಿಜ್ಞಾನ ಪದವಿಯಲ್ಲಿ ಆರನೇ ರಾಂಕ್ ಪಡೆಯುವ ಮೂಲಕ ವಿದ್ಯಾಕ್ಷೇತ್ರದಲ್ಲಿ ಗಮನ ಸೆಳೆದವರು .

ಕಲಿಕೆಯ ಜೊತೆಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ದಿನೇಶ್ ಶೆಟ್ಟಿಯವರು ನಾನು ಮತ್ತು ನನ್ನ ಕಿಟಕಿ, ಕಡತಗಳ ನಡುವೆ ಇಂತಹ ಕ್ರಿಯಾತ್ಮಕ ಕವನ ಮತ್ತು ಕತೆಗಳಿಂದ ವಿಜಯವಾಣಿ, ಉದಯವಾಣಿ ತರಂಗ ಪತ್ರಿಕಾ ಬಳಗದಲ್ಲಿ ತನ್ನ ಸಣ್ಣ ವಯಸ್ಸಲ್ಲೇ ಗುರುತಿಸಿಕೊಂಡ ವರು .

ಮಂಗಳೂರು ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದು ಬೆಂಗಳೂರಿನ ಪ್ರಸಿದ್ಧ ಬಯೋಕಾನ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ತಮ್ಮ ವೃತ್ತಿ ಆರಂಭಿಸಿದ ದಿನೇಶ್ ಶೆಟ್ಟಿಯವರು ಕೊರಿಯಾ ದೇಶದ ಸುಪ್ರಸಿದ್ಧ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿ ಕಾಲೇಜು ಒಫ್ ಮೆಡಿಸಿನ್ಸ್ ನಲ್ಲಿ ಕ್ಯಾನ್ಸರ್ ರೋಗವನ್ನು ಆರಂಭಿಕವಾಗಿ ಪತ್ತೆ ಹಚ್ಚುವ ಬಗ್ಗೆ ಸಂಶೋಧನೆ ನಡೆಸಿ ಕೊರಿಯಾ ದೇಶದಿಂದ ೨೦೦೯ರಲ್ಲಿ ಪ್ರತಿಷ್ಠಿತ ಯುವ ಸಂಶೋಧಕ ಮತ್ತು ಕ್ಯಾನ್ಸರ್ ಸಂಶೋಧಕ ಪ್ರಶಸ್ತಿ ಪಡೆದು ಸೈ ಎನಿಸಿಕೊಂಡವರು

೨೦೧೧ ರಲ್ಲಿ ಅಮೇರಿಕಾದ ಅಟ್ಲಾಂಟಾ Emory Winship cancer institute ನಲ್ಲಿ ತೀವ್ರಗತಿಯ ಮಿದುಳು ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಿ ೨೦೧೩ ರಲ್ಲಿ ಕೆನಡಾದ radio pharmaceutical science ಸಂಸ್ಥೆಯಲ್ಲಿ ಯುವ ಸಂಶೋಧಕರಾಗಿ ಆಯ್ಕೆಯಾದವರು. ಇವರು ಅಭಿವೃದ್ಧಿ ಪಡಿಸಿದ ಕಾನ್ಸರ್ ಇಮೇಜಿಂಗ್ ಸಿಸ್ಟಮ್ ಸದ್ಯಕ್ಕೆ ಜರ್ಮನಿಯ ಔಷಧಿ ಕಂಪೆನಿಯ ಮೂಲಕ ಕ್ಲಿನಿಕಲ್ ಟ್ರಯಲ್ ಪ್ರಯೋಗಕ್ಕೆ ಒಳಪಡುತ್ತಿದೆ.

ರಸಾಯನ ಶಾಸ್ತ್ರದಲ್ಲಿ ಅಧ್ಯಯನಕ್ಕೆ ತೊಡಗಿಕೊಂಡ ಡಾ| ದಿನೇಶ್ ಶೆಟ್ಟಿಯವರು ಅಮೇರಿಕಾ ದಕ್ಷಿಣ ಕೊರಿಯಾ ದೇಶಗಳಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಅಬುದಾಭಿಯ ವಿಖ್ಯಾತ ಖಲೀಫಾ ಯೂನಿವರ್ಸಿಟಿಯಲ್ಲಿ ರಸಾಯನ ಶಾಸ್ತ್ರದ ಸಹಾಯಕ ಪ್ರೊಫೆಸರ್ ಮತ್ತು ಸಂಶೋಧಕ ಉದ್ಯೋಗದಲ್ಲಿದ್ದಾರೆ .

ಸಮುದ್ರದಲ್ಲಿ ಘಟಿಸುವ ವಿಷಕಾರಿ ಮಾಲಿನ್ಯಗಳನ್ನು ಕ್ಷಣಮಾತ್ರದಲ್ಲಿ ಶುದ್ಧ ಗೊಳಿಸಿಸುವ ವಿಶೇಷ ಸಾವಯವ ವಸ್ತುವನ್ನು ಕಂಡು ಹಿಡಿದಿದ್ದು ಇವರ ಸಂಶೋಧನೆಯ ಆಳವರಿತ ಅಬುದಾಭಿ ಸರಕಾರ ನಾಲೆಜ್ ಆಂಡ್ ಎಜುಕೇಶನ್‌ಗೆ ಕೊಡಮಾಡುವ ವಿಶೇಷ ಅನುದಾನ ಒಂದು ಮಿಲಿಯ AED  ಗೌರವಪೂರ್ವಕವಾಗಿ ಪ್ರದಾನ ಮಾಡಿದೆ. ಇವರ ವೈಜ್ಞಾನಿಕ ಬರಹಗಳು ಅಮೇರಿಕ ಕೆನಡಾ ,ಕೊರಿಯಾ ಇಟಲಿ ಚೀನಾ ಆಸ್ಟ್ರೇಲಿಯ ಭಾರತ ಮೊದಲಾದ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಜೊತೆ ಜೊತೆಗೆ ಸಾಹಿತ್ಯದ ಬರಹಗಳು ಸಿಂಗಲ್ ವಿಷ್ಯ, ಬೆತ್ತಲೆ ಮನಸ್ಸು ಶೀರ್ಷಿಕೆಯಡಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.

ಕೋರೋನ ಕಾಲದಲ್ಲಿ ಇವರು ಪ್ರಚುರ ಪಡಿಸಿದ ಜನಜಾಗ್ರತಿ ವಿಡಿಯೋಗಳು ಬಹು ಜನಪ್ರೀಯವಾಗಿ ಜನರಿಗೆ ಧೈರ್ಯ ಮತ್ತು ಮಾರ್ಗದರ್ಶನ ನೀಡಿದ್ದವು . ಕೊರೊನ ಪೀಡಿತ ಕಾಲದಲ್ಲಿ ಇವರು ಮಾಡಿದ ಮಾನವೀಯ ಸೇವೆಗಳು, ಶಿಕ್ಷಣ ಕ್ಷೇತ್ರದಲ್ಲಿ ತನ್ನೂರಿಗೆ ಮಾಡಿದ ಸಹಾಯಗಳು ಇವರನ್ನು ಒಬ್ಬ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿ ತೀರಾ ವಿಭಿನ್ನ ಎತ್ತರದಲ್ಲಿ ನಿಲ್ಲಿಸುತ್ತವೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.