Skip to main content

ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ಲಿಫ್ಟ್ ಉದ್ಘಾಟನೆ.

By August 28, 2026Kannada News
kallianpurdotcom: Mob 9741001849
Official release from  Mount Rosary School, Santhekatte.

ಸಂತೆಕಟ್ಟೆ: ಮೌಂಟ್ ರೋಸರಿ ಶಾಲೆಯಲ್ಲಿ ದಿವ್ಯಾಂಗ ಮಕ್ಕಳಿಗೆ ಆನಾರೋಗ್ಯ ಪೀಡಿತರಿಗೆ, ಮೇಲು ಅಂತಸ್ತಿನ ಸಭಾಂಗಣಕ್ಕೆ ತೆರಳಲು ಹೆತ್ತವರಿಗೆ ಪೋಷಕರಿಗೆ ಅನುಕೂಲವಾಗುವಂತೆ ನಾಲ್ಕು ಮಹಡಿಯ ಶಾಲಾ ಕಟ್ಟಡಕ್ಕೆ ಬಹುಬೇಡಿಕೆಯ ಲಿಫ್ಟ್ ಸೌಲಭ್ಯವನ್ನು ಒದಗಿಸ ಲಾಗಿದ್ದು ಇದರ ಉದ್ಘಾಟನ ಕಾರ್ಯಕ್ರಮ ಶಾಲಾವರಣದಲ್ಲಿ ಜರಗಿತು.

ಸಂತೆಕಟ್ಟೆ ಪರಿಸರದ ಹಿರಿಯ ಕಟ್ಟಡ ಉದ್ಯಮಿ ಶ್ರೀ ಜೆರಾಲ್ಡ್ ಡಿಸೋಜ ಅವರು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಶಾಲಾ ಸಂಚಾಲಕ ಫಾದರ್ ಡಾ| ರೋಕ್ ಡಿಸೋಜ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿ ಸಮುದಾಯಕ್ಕೆ ಶಾಲಾ ಆಡಳಿತ ಮಂಡಳಿ ಬಹುದಿನದ ಬೇಡಿಕೆಯನ್ನು ಇಡೆರಿಸಿದೆ. ಬ್ರಹ್ಮಾವರ ವಲಯದ ರಾಜ್ಯ ಪಠ್ಯಕ್ರಮದ ಶಾಲೆಗಳ ಪೈಕಿ ಲಿಫ್ಟ್ ಸೌಲಭ್ಯವಿರುವ ಪ್ರಥಮ ಶಾಲೆ ಇದಾಗಿದೆ ಎಂದು ಹೇಳಿದರು.

ಈ ಯೋಜನೆಯನ್ನು ರೂಪಿಸಿ ಕ್ಲಪ್ತ ಸಮಯದಲ್ಲಿ ಕಾಮಗಾರಿಯನ್ನು ಮಾಡಿದ ಉದ್ಯಮಿ ಶ್ರೀ ಜೆರಾಲ್ಡ್, ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಶಾಂತ್ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ| ರೋಹನ್ ಮಸ್ಕರೇನ್ಹಸ್, ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಸ್, ಕಾರ್ಯದರ್ಶಿ ಶ್ರೀಮತಿ ಪ್ರಿಯಾ ಫುರ್ಟಾಡೊ, ಗೊರೆಟ್ಟಿ ಕಾನ್ವೆಂಟಿನ ಧರ್ಮ ಭಗಿನಿ ಯರಾದ ಸಿ| ಸಂಗೀತಾ ಡಿಸೋಜ, ಸಿ| ಜಯಾ ಮಥಾಯಸ್, ಚರ್ಚಿನ ಆರ್ಥಿಕ ಸಮಿತಿಯ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯ ರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ತನುಜ ಶೆಟ್ಟಿ, ಮುಖ್ಯ ಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಡಿಮೆಲ್ಲೊ, ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವಿಯೋಲ ಕುಲಾಸೊ ಸ್ವಾಗತಿಸಿದರು. ನಿಶೆಲ್ ವಂದಿಸಿದರು. ಆ್ಯಶಲ್ ಡಿಸೋಜ ನಿರೂಪಿಸಿದರು.

ವರದಿ : ಆಲ್ವಿನ್ ದಾಂತಿ, ಶಿಕ್ಷಕರು – ೯೮೪೫೮೯೦೬೭೮

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.