Skip to main content
www.kallianpur.com | Email : kallianpur7@gmail.com | Mob : 9741001849

ಭಾರತವು ಆಮದುಕ್ಕಿಂತ ಉತ್ಪಾದನಾ ರಫ಼್ತು ಮಾಡುವಷ್ಟು ಶಕ್ತಿದಾಯಕವಾಗಿದೆ. ಬಿಲ್ಲವ ಸಿಸಿಐ-ಎಐಸಿ ನಿಟ್ಟೆ ಪ್ರಸ್ತುತ ಎಂಎಸ್‌ಎಂಇ ಸಮಾವೇಶ ಉದ್ಘಾಟಿಸಿ ಎಂ.ನರೇಂದ್ರ

By April 29, 2023News

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.೨೯: ಎಂಎಸ್‌ಎಂಇ ಕೊಡುಗೆಯಿಂದ ರಾಷ್ಟ್ರದಲ್ಲಿ ಬಹಳಷ್ಟು ಉದ್ಯಮಗಳು ಶೇಕಡಾವಾರು ಗಣನೀಯವಾಗಿ ಹೆಚ್ಚಾಗಿದೆ. ಇದೀಗ ಕಾರ್ಪೊರೇಟ್ ಆಗಿ ಪರಿವರ್ತಿಸುವ ಪ್ರಯತ್ನ ಶ್ಲಾಘನೀಯ. ಖಾಸಾಗಿ ಸಂಸ್ಥೆಗಳ ಜೊತೆಗೆ ಸರಕಾರಿ ವಲಯಗಳ ಆರ್ಥಿಕ ಸಹಯೋಗದಿಂದ ಸೂಸಮ ಉದ್ಯಮಗಳ ಅಭ್ಯುದಯ ಸಾಧ್ಯವಾಗುವುದು. ಭಾರತೀಯ ಉದ್ಯಮಗಳು ಜಾಗತಿಕವಾಗಿ ಶಕ್ತಿದಾಯಕ ವಾಗಿವೆ. ನವ ಭಾರತವು ಸದ್ಯ ಆಮದು ಮಾಡುವುದಕ್ಕಿಂತ ಉತ್ಪಾದನಾ ರಫ಼್ತು ಮಾಡುವಷ್ಟು ಶಕ್ತಿದಾಯಕವಾಗಿದೆ. ಯುವೋದ್ಯಮಿಗಳು ಆರ್ಥಿಕತೆಯ ಹೋರಾಟದ ಅನ್ವೇಷಣೆಯಲ್ಲಿದ್ದರೂ ಯಶಸ್ಸಿನ ಪ್ರಯತ್ನವನ್ನು ಮುನ್ನಡೆಸಬೇಕು. ಆದುದರಿಂದ ನಮ್ಮ ಭಾವೀ ಜನಾಂಗವೂ ಯಾವುದೇ ದೊಡ್ಡ ಬಂಡವಾಳವಿಲ್ಲದೆ ಎಂಎಸ್‌ಎಂಇ ಪ್ರೇರಣೆ ಮತ್ತು ಪ್ರೋತ್ಸಾಹದಿಂದ ಉದ್ಯಮವನ್ನು ಪ್ರಾರಂಭಿಸಿ ಸ್ವಉದ್ಯಮಿಗಳಾಗುವ ಪ್ರಯತ್ನ ಮಾಡಬೇಕು ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ನಿಕಟಪೂರ್ವ ಎಂಡಿ-ಕಾರ್ಯಾಧ್ಯಕ್ಷ ಎಂ.ನರೇಂದ್ರ ತಿಳಿಸಿದರು.

ಇಂದಿಲ್ಲಿ ಶನಿವಾರ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸಂಸ್ಥೆಯು ಅಟಲ್ ಇನ್‌ಕ್ಯೂಬೇಶನ್ ಸೆಂಟರ್ ನಿಟ್ಟೆ (ಎಐಸಿ) ಸಹಯೋಗದಲ್ಲಿ ದಿನಪೂರ್ತಿಯಾಗಿಸಿ  ಆಯೋಜಿ ಸಿದ್ದ ಸೂಕ್ಶ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ವಿಚಾರಿತ ಎಂಎಸ್‌ಎಂಇ ಸಮಾವೇಶ-೨೦೨೩ ಉದ್ಘಾಟಿಸಿ ಎಂ.ನರೇಂದ್ರ ಮಾತನಾಡಿದರು.

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ)ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಇವರ ಸಾರಥ್ಯ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಮತ್ತು ಬಿಸಿಸಿಐ ನಿರ್ದೇಶಕ ಹರೀಶ್ ಜಿ.ಅಮೀನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಉದ್ಘಾಟನಾ ಸಮಾರಂಭದಲ್ಲಿ ಡಬ್ಲ್ಯುಐಆರ್‌ಸಿ  ಕಾರ್ಯಾಧ್ಯಕ್ಷ ಸಿಎ| ಅರ್ಪಿತ್ ಜೆ.ಕಬ್ರಾ ಮುಖ್ಯ ಅತಿಥಿಯಾಗಿ ಮತ್ತು ಭಾರತ್ ಬ್ಯಾಂಕ್‌ನ ಕಾರ್ಯಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ಅತಿಥಿ ಅಭ್ಯಾಗತರಾಗಿದ್ದರು. ಸಮಾವೇಶದ ಪ್ರಧಾನ ಸಂಯೋಜಕ, ಎಂಎಸ್‌ಎಂಇ ಸದಸ್ಯ, ಐಸಿಎಐ ಮಂಗಳೂರು ಇದರ ಪೂರ್ವಧ್ಯಕ್ಷ ಸಿಎ| ಎಸ್.ಎಸ್ ನಾಯಕ್ ಹಾಗೂ ಸಮಾವೇಶದ ಸಂಪನ್ಮೂಲ ವ್ಯಕ್ತಿಗಳಾದ ಸೈಬರ್ ಕಾನೂನು ಭದ್ರತಾ ತಜ್ಞ ಡಾ| ಅನಂತ್ ಪ್ರಭು ಗುರುಪುರ, ಅಟಲ್ ಇನ್‌ಕ್ಯೂಬೇಶನ್ ಸೆಂಟರ್ ನಿಟ್ಟೆ ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ| ಎ.ಪಿ ಆಚಾರ್ ಮತ್ತು ಎನ್‌ಐಟಿಐಇ ಮುಂಬಯಿ ಇದರ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿ (ಒಬಿ) ಡಾ| ಪ್ರಸಾದ್ ತೀಗಲಪಲ್ಲಿ ವೇದಿಕೆಯನ್ನು ಅಲಂಕರಿಸಿದ್ದರು.

ಯುವಜನತೆಯ ವಿಶ್ವಾಸಕ್ಕೆ ಪಾತ್ರವಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಉದ್ಯಮ ಗಳ ಅವಕಾಶಗಳನ್ನು ಅಳವಡಿಸಿಕೊಂಡಿದೆ. ಬಿಲ್ಲವ ಉದ್ಯಮಿಗಳಲ್ಲಿ ಸೌಹಾರ್ದ ಸಂಬಂಧ, ಆರೋಗ್ಯಕರ ಬೆಳವಣಿಗೆ, ಉತ್ತಮ ವಾಣಿಜ್ಯ ಮತ್ತು ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರೇರೆಪಿಸುತ್ತದೆ. ನಮ್ಮವರೆಲ್ಲರೂ ಇದರ ಸದುಪಯೋಗ ಪಡೆದಲ್ಲಿ ನನ್ನ ಸಾಧನೆ ಸಾರ್ಥಕ ಅಂದುಕೊಂಡಿದ್ದೇವೆ ಎಂದು ಎನ್.ಟಿ ಪೂಜಾರಿ ಹೇಳಿದರು.ಯುವಜನತೆಯನ್ನು ಉತ್ತೇಜಿಸುವುದೇ ನಮ್ಮ ಉದ್ದೇಶವಾಗಿದೆ. ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಉದ್ಯಮ ಸಾಹಸಿಗಳಾಗಲು ಸಾಧ್ಯ. ಉದ್ಯಮಿಗಳಾಗುವ ಭರವಸೆಗೆ ಬಿಸಿಸಿಐ ಉತ್ತೇಜನದ ವೇದಿಕೆಯಾಗಿದೆ. ನಮ್ಮಲ್ಲಿನ ಆಸಕ್ತ ಯುವಜನತೆಯು ಉದ್ಯಮಿಗಳಾಗುವ ಪ್ರಯತ್ನ ಮಾಡಬೇಕು. ಇಂತಹ ಸಮಾವೇಶಗಳ ಫಲಾನುಭವದಿಂದ ಆತ್ಮವಿಶ್ವಾಸ ವೃದ್ಧಿಗೊಳ್ಳುವುದು ಎಂದು ಹರೀಶ್ ಅಮೀನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಸಮಾವೇಶದಲ್ಲಿ ಎಂಎಸ್‌ಎಂಇ ಉದ್ಯಮಿಗಳು, ಶಿಕ್ಷಣ ತಜ್ಞರು,ನಿರ್ವಹಣೆ, ವೃತ್ತಿಪರರು, ಇಂಜಿನಿಯರಿಂಗ್ ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಸ್ಟಾರ್ಟ್-ಅಪ್‌ಗಳು, ಬ್ಯಾಂಕಿಂಗ್ ಪರಿಣತರು, ಮಹತ್ವಾಕಾಂಕ್ಷಿ ಉದ್ಯಮಿಗಳು, ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಸೇರಿದಂತೆ ಬಿಸಿಸಿಐ ಉಪ ಕಾರ್ಯಾಧ್ಯಕ್ಷರುಗಳಾದ ಡಿ.ಬಿ.ಅಮೀನ್, ಮಹೇಂದ್ರ ಎಸ್.ಕರ್ಕೇರ, ನಿರ್ದೇಶಕರುಗಳಾದ ಪುರುಷೋತ್ತಮ್ ಎಸ್.ಕೋಟ್ಯಾನ್, ಕರ್ನಿರೆ ಗಂಗಾಧರ್ ಎನ್.ಅಮೀನ್ ಉಪಸ್ಥಿತರಿದ್ದರು.

ಕು| ಅಂಕಿತಾ ಎನ್.ಟಿ ಪೂಜಾರಿ ಪ್ರಾರ್ಥನೆಯನ್ನಾಡಿದರು. ಎನ್.ಟಿ ಪೂಜಾರಿ ಸ್ವಾಗತಿಸಿದರು. ಸಿಎ| ಎಸ್.ಎಸ್ ನಾಯಕ್ ಪ್ರಸ್ತಾವನೆಗೈದು ಸಮಾವೇಶದ ಮಾಹಿತಿಯನ್ನಿತ್ತರು. ಸಮಾವೇಶದ ಸಂಯೋಜಕಿ ಸಿಎ|ಯಶಸ್ವಿನಿ ಕೆ.ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ.ಪೂಜಾರಿ ಧನ್ಯವದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.