Skip to main content
www.kallianpur.com | Email : kallianpur7@gmail.com | Mob : 9741001849

ಕಲಾ ಸೌರಭ ಮುಂಬಯಿ ೩೧ನೇ ವರ್ಷಾಚರಣೆ- ಸರಣಿ ಸಂಗೀತೋತ್ಸವದ ಉದ್ಘಾಟನೆ ಶಿರ್ಡಿ ಸಾನಿಧ್ಯದಲ್ಲಿ ಕಂಡರಿಯದ ಅಪೂರ್ವ ಕಲಾಸೇವೆ : ಉದಯ ಶೆಟ್ಟಿ.

By February 23, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಫೆ.೨೧: ಹೊರನಾಡ ಕನ್ನಡಿಗರ ಪ್ರತಿಷ್ಠಿತ ಹಾಗೂ ಸಾಂಸ್ಕ್ರತಿಕ ರಾಯಭಾರಿಯಾಗಿ ಜನಸೇವೆಯಲ್ಲಿ ರುವ ಕಳೆದ ಮೂರು ದಶಕಗಳಿಂದ ಭಾರತೀಯ ಸಂಸ್ಕಾರ ಸಂಸ್ಕ್ರತಿ ವಿಶೇಷವಾಗಿ ಕರುನಾಡ ಕಲೆಯನ್ನು ಉಳಿಸು ವ ಅದೆಷ್ಟೊ ಸಂಗೀತ ನೃತ್ಯ ಕಲಾವಿದರನ್ನು ಬೆಳೆಸುವ ಅಶಕ್ತ ಕಲಾವಿದರಿಗೆ ಸಕಾಲದಲ್ಲಿ ಸಹಾಯಹಸ್ತ ನೀಡಿ ಸ್ಪಂದಿಸುವ ಕಲಾ ಸೌರಭ ಸಂಸ್ಥೆ ಇಂದು ಶಿರ್ಡಿ ಶ್ರೀ ಸಾಯಿಬಾಬರ ಸಾನಿಧ್ಯದದಲ್ಲಿ ವೈವಿದ್ಯಮಯ ಬಹು ಭಾಷಾ ಸಾಂಸ್ಕ್ರತಿಕ ಕಾರ್ಯಕ್ರಮ ಪ್ರಸ್ತುತ ಪಡಿಸುವ ರೀತಿನೀತಿ ಕಂಡು ಮನಸ್ಸು ತುಂಬಿದೆ ಎಂದು ಸಾಯಿ ಪ್ಯಾಲೆಸ್ ಹೋಟೆಲು ಸಮೂಹದ ಆಡಳಿತ ನಿರ್ದೇಶಕ ಉದಯ ಶೆಟ್ಟಿ ನುಡಿದರು.

ಶಿರ್ಡಿ ಸಾಯಿ ನಗರ ಶ್ರೀ ಸಾಯಿ ಬಾಬ ಸಂಸ್ಥಾನಮ್ ಆಶ್ರಯದ ಸಾಯಿ ಸಭಾಂಗಣದಲ್ಲಿ ಕಳೆದ ಶುಕ್ರವಾರ (ಫೆ.೧೬) ಜರಗಿದ ಕಲಾ ಸೌರಭದ ೩೧ನೇ ವಾರ್ಷಿಕ ಸಾಂಸ್ಕ್ರತಿಕ ಸಂಗೀತೋತ್ಸವದ ಸರಣಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಉದಯ ಶೆಟ್ಟಿ ಶುಭ ಹಾರೈಸಿದರು. ಶಿರ್ಡಿ ಸಂಸ್ಥಾನಮ್ ಸಾಂಸ್ಕ್ರತಿಕ ವಿಭಾಗದ ಅಧಿಕಾರಿ ಎಸ್.ಜಾದವ್ ಶುಭ ನುಡಿದರು.

ಪುಷ್ಪಾಂಜಲಿ ನೃತ್ಯ ಅಕಾಡೆಮಿಯ ನಿರ್ದೇಶಕ ಗುರು ವಿದ್ವಾನ್ ಕೋಲಾರ ರಮೇಶ್, ಶಿರ್ಡಿ ಸಾಯಿ ಪ್ಯಾಲೇಸ್ ಹೋಟೆಲ್‌ನ ಆಡಳಿತಾಧಿಕಾರಿ ಶಶಿ ಶೆಟ್ಟಿ, ಸುರೇಶ್ ಕೋಟ್ಯಾನ್, ಪುಣೆಯ ಉದ್ಯಮಿ ಜಗದೀಶ್ ಪೂಜಾರಿ, ಕಲಾ ಸೌರಭ ಭಜನಾ ತಂಡದ ಮುಖ್ಯಸ್ಥೆ ಸುಶೀಲ ಎಸ್. ದೇವಾಡಿಗ, ಸಂಗೀತ ನಿರ್ದೇಶಕ ಶೇಖರ್ ಸಸಿಹಿತ್ಲು, ಗಾಯಕ ಪ್ರಮೋದ್ ಕಾಂಬ್ಳಿ ವೇದಿಕೆ ಯಲ್ಲಿದ್ದು ಸಂಗೀತ ನಿರ್ದೇಶಕ, ಕಲಾ ಸೌರಭ ತಂಡದ ನಿರ್ದೇಶಕ ಪದ್ಮನಾಭ್ ಸಸಿಹಿತ್ಲು ಕಲಾ ನಿರ್ದೇಶಕರನ್ನು ಪರಿಚಯಿಸಿ ಪ್ರಸ್ತಾವನೆಗೈದರು.

ಕಲಾ ಸೌರಭದ ಮುಂಬಯಿ ಹಾಗೂ ಬೆಂಗಳೂರಿನ ೭೦ಕ್ಕೂ ಅಧಿಕ ಕಲಾವಿದರು ಮೊದಲನೇ ದಿನ ಶ್ರೀ ಸಾಯಿ ನಗರ, ಶ್ರೀಶನಿ ಸಿಂಗ್ನಪೂರ್ ತಲುಪಿ ಶ್ರೀ ಶನಿ ದೇವರ ಪೂಜೆ ನಡೆಸಿ ಪ್ರಾರ್ಥನಾ ರೂಪವಾಗಿ ಮಹಿಳಾ ತಂಡವು ಭಜನಾ ಕಾರ್ಯಕ್ರಮ ನಡೆಸಿದ್ದು ಪ್ರಥಮಾರ್ದದಲ್ಲಿ ಸುಶೀಲ ದೇವಾಡಿಗ, ಗೀತ ದೇವಾಡಿಗ ಮತ್ತು ಸಮೂಹವು ಶ್ರೀ ಸಾಯಿ ಸ್ತುತಿ ಭಜನಾವಳಿ ನಡೆಸಿತು. ಗುರು ವೈಶಾಲಿ ಜೋಶಿ ಅವರು ಕಥಕ್ ಶೈಲಿಯಲಿ ಗಣೇಶ್ ವಂದನ ಹಾಗೂ ವಿದೂಷಿ ಆಶಾ ನಂಬಿಯಾರ್ ನಿರ್ದೇಶನದಲ್ಲಿ ವೈಷ್ಣವಿ ಕಲಾ ಕ್ಷೇತ್ರ ಮುಂಬಯಿ ತಂಡವು ಭಕ್ತಿ ಪ್ರಧಾನ ಗೀತೆಯ ಒಡಿಸ್ಸಿ ನೃತ್ಯ ಮತ್ತು ಕಲಾ ಸೌರಭದ ಸಂಗೀತ ಕಲಾವಿದರು ಬಹು ಭಾಷೆಯ ಸಾಯಿ ಸ್ತುತಿಭಕ್ತಿ ರಸಮಂಜರಿ ಸಾದರ ಪಡಿಸಿತು.

ಸಂಗೀತ ವರ್ಗದಲ್ಲಿ ನಿರ್ದೇಶಕ ಶೇಖರ್ ಸಸಿಹಿತ್ಲು, ಚಂದು ಪಂಚಾಲ್, ದಿನೇಶ್ ಕಂಡೇಕರ್ ಮತ್ತು ಚಾರುಕೆಶ್ ಬಂಗೇರ ಭಾಗವಹಿಸಿದ್ದು ಗಾಯನದಲ್ಲಿ ಪ್ರಮೋದ್ ಕಾಂಬ್ಳಿ, ಸದಾಶಿವ್ ಪೂಜಾರಿ, ವಿದ್ಯಾ ಹಲಂಕಾರ್, ಶ್ರದ್ದಾ ದೇಸಾಯಿ, ಬೇಬಿ ಸಮೃದ್ಧಿ ಪೂಜಾರಿ, ಸುಮಧುರ ಗೀತೆಗಳೊಂದಿಗೆ ಶ್ರೀ ಸಾಯಿ ಸ್ತುತಿ ಗೈದರು. ದ್ವಿತಿಯಾರ್ಧದಲ್ಲಿ ನಾಟ್ಯಾಂಕಿತ ಕಲಾ ಮಂದಿರದ ನಿರ್ದೇಶಕಿ ಕು| ಅಂಕಿತ ನಾಯಕ್ ಮತ್ತು ಕು| ಸಪ್ನಾ ತಾಪ ಬಳಗವು ಯಕ್ಷಕುಣಿತ ಮತ್ತು ಭಸ್ಮಾಸುರ ಮೋಹಿನಿ ಯಕ್ಷ ನೃತ್ಯರೂಪಕ, ಕೊನೆಗೆ ಪುಷ್ಪಾಂಜಲಿ ನೃತ್ಯ ಕಲಾ ಅಕಾಡೆಮಿ ಬೆಂಗಳೂರು ಕಲಾವಿದರು ಅಂತರಾಷ್ಟ್ರೀಯ ಪ್ರಸಿದ್ಧಿಯ ನೃತ್ಯಗುರು ವಿದ್ವಾನ್ ಕೋಲಾರ ರಮೇಶ್ ನಿರ್ದೇಶನದಲ್ಲಿ ಕುವೆಂಪು ಮಹಾ ಕಾವ್ಯ ಆಧರಿತ ಸಂಪೂರ್ಣ ರಾಮಾಯಣ ದರ್ಶನಂ ನೃತ್ಯ ರೂಪಕ ಪ್ರಸ್ತುತ ಪಡಿದವು.

ಸಂಗೀತೋತ್ಸವದ ಒಟ್ಟು ಕಾರ್ಯಕ್ರಮವನ್ನು ಬಹುಭಾಷಾ ನಟಿ ಸಂಘಟಕಿ ಚಂದ್ರಾವತಿ ವಸಂತ್ ಹಿಂದಿ ಮರಾಠಿ ಭಾಷೆಯಲ್ಲಿ ನಿರೂಪಿಸಿದ್ದು ಸರಸ್ವತಿ ಬಿಲ್ಲವ, ಸರೋಜ ನಾಯಕ್, ಸವಿತಾ ಪೂಜಾರಿ, ಸಚಿನ್, ಪ್ರಥಿರಾಜ್ ಮುಂಡ್ಕೂರು ಸಹಕರಿಸಿದ್ದು, ಗುರು ವೈಶಾಲಿ ಜೋಶಿ ವಂದಿಸಿದರು. ಸಾಯಿ ನಾಮಸ್ತುತಿಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.