Skip to main content

ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ಕಲ್ಯಾಣಪುರ ತ್ರಿಶಾ ಕಾಲೇಜಿಗೆ ಸತತ ಮೂರನೇ ವರ್ಷವೂ 100% ಫಲಿತಾಂಶ.

By April 13, 2026Kannada News
VIKSHITH SHETTY
kallianpurdotcom: Mob 9741001849

ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಕಲ್ಯಾಣಪುರದಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದ ತ್ರಿಶಾ ಪ. ಪೂ ಕಾಲೇಜು 100% ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದ ವೀಕ್ಷಿತ್ ಎಸ್ ಶೆಟ್ಟಿ 592 ಅಂಕಗಳೊಂದಿಗೆ ರಾಜ್ಯಕ್ಕೆ 8 ನೇ ಸ್ಥಾನ, ನವನೀತ್ ಪೈ  590 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಹಾಗೂ ನಿನಾದ್. ಆರ್. ನಾಯ್ಕ್ 588‌, ಪೂಜಿತ ಶೆಣೈ 587, ಗ್ರೀಷ್ಮಾ 582, ಪಾವನಿ 580, ಮೇಘನಾ ಎಸ್ ಕೆ 578  ಅಂಕಗಳನ್ನು ಗಳಿಸಿರುತ್ತಾರೆ. 24 ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ, 77 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 153 ವಿದ್ಯಾರ್ಥಿಗಳಲ್ಲಿ 108 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ. 45 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಭೌತಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ 9, ಗಣಕ ವಿಜ್ಞಾನದಲ್ಲಿ 15, ಕನ್ನಡದಲ್ಲಿ 01, ಹಿಂದಿಯಲ್ಲಿ 01, ಸಂಸ್ಕೃತದಲ್ಲಿ 19 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಮತ್ತು ತ್ರಿಶಾ ಫೌಂಡೇಶನ್ ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.