Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢ ಶಾಲೆಯಲ್ಲಿ ದಂತ ಸಂರಕ್ಷಣಾ ಜಾಗೃತಿ ಹಾಗೂ ದಂತ ತಪಾಸಣ ಶಿಬಿರ.

By July 22, 2023Kannada News
kallianpurdotcom: 22/07/23

ಉಡುಪಿ : ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಕಲ್ಯಾಣಪುರ ರೋಟರಿ ಕ್ಲಬ್ಬಿನ ಸಹಕಾರದೊಂದಿಗೆ ಶಾಲೆಯಲ್ಲಿ ದಂತ ಸಂರಕ್ಷಣಾ ಜಾಗೃತಿ ಹಾಗೂ ದಂತ ತಪಾಸಣ ಶಿಬಿರವನ್ನು ದಿ.೨೨.೦೭.೨೦೨೩ ರಂದು ಏರ್ಪಡಿಸಿತ್ತು. ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾ ಲಯದ ಡಾ. ಕಾರ್ತಿಕ್ ಮತ್ತು ತಂಡದವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಕಾರ್ತಿಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸರಿಯಾದ ಹಲ್ಲುಜ್ಜುವ ವಿಧಾನ, ಶುಚಿಗೊಳಿ ಸುವಿಕೆ, ಅಗತ್ಯತೆಯ ಕುರಿತು ಮಕ್ಕಳಿಗೆ ತಿಳಿಸಿದರು.

ಕಲ್ಯಾಣಪುರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ.ದಿವಾಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶಾಲೆಯ ಆಡಳಿತಾಧಿಕಾರಿ ಶ್ರೀ ಶೇಕರ್ ಪಿ., ಕಾರ್ಯದರ್ಶಿ ರೋ ಗಿರಿಶ್ಚಂದ್ರ ಇಂರ‍್ಯಾಕ್ಟ್ ಅಧ್ಯಕ್ಷ ಮನ್ವಿತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಸತ್ಯಶಂಕರ್ ಭಟ್ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು. ರೋ. ಪ್ರಕಾಶ್, ರೋ. ರಾಮ್ ಪೂಜಾರಿ,ರೋ. ವಿಜಯ ಮಾಯಾಡಿ, ರೋ. ಆನಂದ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿ ವೃಂದ,ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.