Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ೨೦೨೩-೨೪ ಶೈಕ್ಷಣಿಕ ವರ್ಷದ ಆರಂಭೋತ್ಸವ.

By June 3, 2023Kannada News
kallianpurdotcom : 03/06/2023

ಉಡುಪಿ: ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ೨೦೨೩-೨೪ ಶೈಕ್ಷಣಿಕ ವರ್ಷದ ಆರಂಭೋತ್ಸವವು ಶಾಲೆಯ ಮಾಜಿ ಸಂಚಾಲಕ ಶ್ರೀ ಸಿ.ಕೆ ಕಾಮತ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಲ್ಯಾಣಪುರ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಉದಯ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ಗಣೇಶ್ ಶೇರಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಮಾಧವ ಕೆ., ಶ್ರೀ ಸಂತೋಷ್ ಕಾಮತ್ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಮಕ್ಕಳಿಗೆ ಈ ಸಂದರ್ಭದಲ್ಲಿ ಉಚಿತ ನೋಟ್ಸ್ಪುಸ್ತಕ ವಿತರಿಸಲಾಯಿತು. ಶಾಲಾ ಆಡಳಿತಾಧಿಕಾರಿ ಶ್ರೀ ಶೇಕರ್ ಪಿ. ಅವರು ಪ್ರಸ್ತಾವನೆಯೊಂದಿಗೆ ಶಾಲೆಯ ಪರಿಚಯವನ್ನು ಮಕ್ಕಳ ಹೆತ್ತವರಿಗೆ ತಿಳಿಸಿದರು.ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸುರೇಖ ಸ್ವಾಗತಿಸಿದರು. ಶಿಕ್ಷಕ ಸತ್ಯ ಶಂಕರ ಭಟ್ ಧನ್ಯವಾದ ನೀಡಿದರು. ಶ್ರೀ ಎಚ್.ಎನ್. ವೆಂಕಟೇಶ್ ಕಾರ್ಯಕ್ರಮ ಸಂಯೋಜಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.