Skip to main content
www.kallianpur.com | Email : kallianpur7@gmail.com | Mob : 9741001849

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ರಾಷ್ಟ್ರೀಯ-ರಾಜ್ಯ ಪ್ರಶಸ್ತಿಗಳ ಘೋಷಣೆ ಪ್ರೊ| ಕೆ.ಜಿ.ಕುಂದಣಗಾರ ಪ್ರಶಸ್ತಿಗೆ ಡಾ| ವಿಶ್ವನಾಥ ಕಾರ್ನಾಡ್ -ಬಿ.ವಿ ಕಾರಂತ ಪ್ರಶಸ್ತಿಗೆ ಸದಾನಂದ ಸುವರ್ಣ ಆಯ್ಕೆ.

By January 26, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಜ.೨೫: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಡಮಾಡುವ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ಆಯ್ಕೆ ಮಾಡಲಾಗಿದ್ದು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್ ತೆಲ್ತುಂಬಡೆ ಮಹಾರಾಷ್ಟ್ರ ಹಾಗೂ ಡಾ| ಎನ್.ಜಿ ಮಹದೇವಪ್ಪ, ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಜಿನದತ್ತ ದೇಸಾಯಿ ಹಾಗೂ ಗುಜರಾತ್‌ನ ಗಾಂಧಿ ಸೇವಾಶ್ರಮ ಸಂಸ್ಥೆಯನ್ನು, ಟಿ.ಚೌಡಯ್ಯ ಪ್ರಶಸ್ತಿಗಾಗಿ ನಿತ್ಯಾನಂದ ಹಳದಿಪುರ ಹಾಗೂ ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಸೇರಿದಂತೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪುರಸ್ಕ್ರತರನ್ನು ಆಯ್ಕೆ ಮಾಡಲಾಗಿದ್ದು ೨೦೧೮-೧೯, ೨೦೨೦-೨೧, ೨೦೨೧-೨೨ ಹಾಗೂ ೨೦೨೨- ೨೩ನೇ ಸಾಲಿನ ಈ ಹಿಂದೆ ಘೋಷಣೆ ಮಾಡ ಲಾಗಿದ್ದ, ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು.೨೦೨೨-೨೩ನೇ ಸಾಲಿನ ಪ್ರೊ| ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಮುಂಬಯಿಯಲ್ಲಿನ ಪ್ರಾಧ್ಯಾಪಕ, ಸಾಹಿತಿ, ಹಿರಿಯ ಸಂಘಟಕ ಡಾ| ವಿಶ್ವನಾಥ ಕಾರ್ನಾಡ್ ಹಾಗೂ ೨೦೨೩- ೨೪ನೇ ಸಾಲಿನ ಬಿ.ವಿ ಕಾರಂತ ಪ್ರಶಸ್ತಿಗೆ ಹಿರಿಯ ರಂಗತಜ್ಞ, ನಿರ್ದೇಶಕ, ಸದಾನಂದ ಸುವರ್ಣ, ೨೦೨೨-೨೩ನೇ ಸಾಲಿನ ಕನಕಶ್ರೀ ಪ್ರಶಸ್ತಿಗೆ ಡಾ| ಬಿ.ಶಿವರಾಮ ಶೆಟ್ಟಿ (ಮಂಗಳೂರು) ಅವರನ್ನು ಆಯ್ಕೆ ಮಾಡಲಾಗಿದೆ. ೨೦೧೮- ೧೯ನೇ ಸಾಲಿನಲ್ಲಿ ಬಿ.ವಿ ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದ ಎಸ್. ಮಾಲತಿ ಶಿವಮೊಗ್ಗ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದ ಬಾಬಣ್ಣ ಕಲ್ಮನಿ ಅವರು ನಿಧನ ರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಮರಣೋ ತ್ತರವಾಗಿ ಪ್ರಶಸ್ತಿ ವಿತರಿಸಲಾಗುವುದು. ಈ ಎಲ್ಲಾ ಪ್ರಶಸ್ತಿಗಳು ತಲಾ ರೂಪಾಯಿ ೫ ಲಕ್ಷ ನಗದು, ಶಾಲು, ಸ್ಮರಣಿಕೆ, ಪ್ರಶಸ್ತಿ ಫಲಕ, ಹಾರ ಮತ್ತು ಫಲತಾಂಬೂರ ಇತ್ಯಾದಿಗಳನ್ನು ಒಳಗೊಂಡಿದೆ ವಿತರಣೆ ಆಗದೇ ಇರುವ ೩೧ ಪ್ರಶಸ್ತಿಗಳನ್ನು ಸೇರಿದಂತೆ ಒಟ್ಟು ೭೫ ಮಂದಿಗೆ ಪ್ರಶಸ್ತಿ ಪ್ರದಾನ ಮಾಡ ಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಈ ಪ್ರಶಸ್ತಿಗಳನ್ನು ಇದೇ ಜನವರಿ ೩೧ರಂದು ಬೆಂಗಳೂರು ಇಲ್ಲಿನ ರವಿಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.